ಆರ್.ಟಿ.ವಿಠಲಮೂರ್ತಿ ಕಾಲಂ; ಯಡಿಯೂರಪ್ಪ ನೋವು ಷಾ ಕಿವಿಗೆ ಬಿತ್ತು
ಯಡಿಯೂರಪ್ಪ ನೋವು ಷಾ ಕಿವಿಗೆ ಬಿತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಕಳೆದ ಶನಿವಾರ ಯಡಿಯೂರಪ್ಪ ಅವರಿಗೆ ಫೋನು ಮಾಡಿದ್ದಾರೆ.ಹೀಗೆ ಫೋನು ಮಾಡಿದವರು’ಇದೇನು ಯಡಿಯೂರಪ್ಪಾಜೀ? ನಿಮ್ಮ ಬೆಂಬಲಿಗರು ಪಕ್ಷದ ನಾಯಕರ ವಿರುದ್ದವೇ ಬೀದಿಗಿಳಿದಿದ್ದಾರಂತೆ?ಅಂತ ಪ್ರಶ್ನಿಸಿದ್ದಾರೆ. ಆದರೆ ಅಮಿತ್ ಷಾ ಅವರ ಮಾತಿಗೆ ಪ್ರತಿಯುತ್ತರಿಸಿದ ಯಡಿಯೂರಪ್ಪ ಅವರು:’ಸಾರ್,ಇಲ್ಲಿ ನನ್ನ ಬೆಂಬಲಿಗರ್ಯಾರೂ ಪಕ್ಷದ ನಾಯಕರ ವಿರುದ್ಧ ಬೀದಿಗಿಳಿದಿಲ್ಲ.ಬೀದಿಗಳಿದವರೆಲ್ಲ ಪಕ್ಚ ನಿಷ್ಟರು.ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ಯಾರು ಧ್ವನಿ ಎತ್ತುತ್ತಿದ್ದಾರೋ?ಅವರ ವಿರುದ್ಧ ಆಕ್ರೋಶಗೊಂಡವರು. ಇವತ್ತು ಪಕ್ಷದ ಅಧ್ಯಕ್ಷರ ವಿರುದ್ಧ ಧ್ವನಿ ಎತ್ತುತ್ತಿರುವ…