ಉಳಿತಾಯ ಖಾತೆಯಿಂದ ಹಣ ಕಡಿತ; ಸೇವಾ ನ್ಯೂನ್ಯತೆ ಎಸಗಿದ ಶಿವಮೊಗ್ಗದ ಕೆನರಾ ಬ್ಯಾಂಕಿಗೆ ದಂಡ ದೂರುದಾರ ಆದೇಶ್ ರವರ ಹೋರಾಟಕ್ಕೆ ಸಿಕ್ಕ ಜಯ
ಉಳಿತಾಯ ಖಾತೆಯಿಂದ ಹಣ ಕಡಿತ; ಸೇವಾ ನ್ಯೂನ್ಯತೆ ಎಸಗಿದ ಶಿವಮೊಗ್ಗದ ಕೆನರಾ ಬ್ಯಾಂಕಿಗೆ ದಂಡ ದೂರುದಾರ ಆದೇಶ್ ರವರ ಹೋರಾಟಕ್ಕೆ ಸಿಕ್ಕ ಜಯ ದೂರುದಾರರ ಉಳಿತಾಯ ಖಾತೆಯಿಂದ ಕಡಿತವಾದ ಹಣವನ್ನು ಪರಿಶೀಲಿಸಿ ಜಮೆ ಮಾಡದೇ ಸೇವಾ ನ್ಯೂನ್ಯತೆ ಎಸಗಿದ ಕೆನರಾ ಬ್ಯಾಂಕಿಗೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿ ಆದೇಶಿಸಿದೆ. ದೂರುದಾರ ಆದೇಶ ಕೆ.ಎನ್. ಪಿಡ್ಬ್ಯೂಡಿ ವಸತಿಗೃಹ, ಬಾಲರಾಜ್ ರಸ್ತೆ, ಶಿವಮೊಗ್ಗ, ಇವರು ವ್ಯವಸ್ಥಾಪಕರು, ಕೆನರಾ ಬ್ಯಾಂಕ್, ದುರ್ಗಿಗುಡಿ ಶಾಖೆ, ಶಿವಮೊಗ್ಗ ಮತ್ತು ಪ್ರಧಾನ…


