ಶಿವಮೊಗ್ಗದಲ್ಲಿ ಮತ್ತೆ ಮಾರ್ಚ್ 2ರಿಂದ ಸಂದೀಪನ ಓಸಿ ಸಾಮ್ರಾಜ್ಯ ಆರಂಭ?*
*ಶಿವಮೊಗ್ಗದಲ್ಲಿ ಮತ್ತೆ ಮಾರ್ಚ್ 2ರಿಂದ ಸಂದೀಪನ ಓಸಿ ಸಾಮ್ರಾಜ್ಯ ಆರಂಭ?* ಓಸಿ ಗೋಪಿಯ ನಂತರದಲ್ಲಿ ಶಿವಮೊಗ್ಗವೂ ಸೇರಿದಂತೆ ಕಾಲು ಕರ್ನಾಟಕದ ಜಿಲ್ಲೆಗಳಲ್ಲಿ ಓಸಿ ಡಾನ್ ಆಗಿ ಮೆರೆಯುತ್ತಿದ್ದ ಯುವ ಮೀಸೆಯ ಹುಡುಗ ಸಂದೀಪ ಮತ್ತೆ ಓಸಿ ಫೀಲ್ಡಿಗಿಳಿಯಲಿದ್ದು, ಇದೇ ಮಾರ್ಚ್ 2 ಕ್ಕೆ ಕುಂಬಳಕಾಯಿ ಒಡೆಯುವ ಮೂಲಕ ಓಸಿ ದಂಧೆ ಆರಂಭಿಸಲಿದ್ದಾನೆಂಬ ಮಾಹಿತಿಗಳು ಹೊರಬಿದ್ದಿವೆ! ಸಾಕಾಗಿ ಹೋಗಿದೆ, ರೋಸಿ ಹೋಗಿದ್ದೇನೆಂದಲ್ಲ ಹೇಳುತ್ತಲೇ ವ್ಯವಸ್ಥಿತವಾಗಿ ಓಸಿ ಮಾಫಿಯಾವನ್ನು ನಡೆಸುತ್ತಾ, ಬಹಳಷ್ಟು ಕೇಸುಗಳನ್ನು ಪೊಲೀಸರಿಂದ ಜಡಿಸಿಕೊಳ್ಳುತ್ತಾ, ಮತ್ತೊಂದು ಕಡೆ ಅಕ್ರಮವಾಗಿ…
ಕನ್ನಡ ಸರಿಯಾಗಿ ಮಾತನಾಡದೇ ಇರಬಹುದು ನನ್ನ ಹೃದಯ ಮಾತ್ರ ಪ್ಯೂರ್ ಕನ್ನಡದ್ದು; ಸಚಿವ ಮಧು ಬಂಗಾರಪ್ಪ *ಶಿವಮೊಗ್ಗ ಕ.ಸಾ.ಪ. ಗೆ 5 ಲಕ್ಷ ರೂ. ಅನುದಾನದ ಚೆಕ್ ವಿತರಿಸಿದ ಸಚಿವ ಮಧು ಬಂಗಾರಪ್ಪ*
ಕನ್ನಡ ಸರಿಯಾಗಿ ಮಾತನಾಡದೇ ಇರಬಹುದು ನನ್ನ ಹೃದಯ ಮಾತ್ರ ಪ್ಯೂರ್ ಕನ್ನಡದ್ದು; ಸಚಿವ ಮಧು ಬಂಗಾರಪ್ಪ *ಶಿವಮೊಗ್ಗ ಕ.ಸಾ.ಪ. ಗೆ 5 ಲಕ್ಷ ರೂ. ಅನುದಾನದ ಚೆಕ್ ವಿತರಿಸಿದ ಸಚಿವ ಮಧು ಬಂಗಾರಪ್ಪ* *ಶಿವಮೊಗ್ಗ ಕನ್ನಡ ಸಾಹಿತ್ಯ ಪರಿಷತ್ ನ ಗ್ರಂಥಾಲಯಕ್ಕೆ 5 ಲಕ್ಷ ರೂ. ನೀಡಿದ್ದೆನೆ* *ನಮ್ಮ ತಂದೆ ಎಸ್. ಬಂಗಾರಪ್ಪನವರ ಹೆಸರಿನಲ್ಲಿ ಈ ಅನುದಾನ ನೀಡಿದ್ದೇನೆ* ನನಗೆ ಕನ್ನಡದ ಬಗ್ಗೆ ಅಷ್ಟು ತಿಳುವಳಿಕೆ ಇಲ್ಲ ಆದರೆ ಕನ್ನಡದ ಬಗ್ಗೆ ಉಳಿವಿಕೆಗೆ ನನ್ನ ಜವಬ್ದಾರಿ ಇದೆ…
ಜಿಲ್ಲಾಧಿಕಾರಿಗಳ ಸುಪರ್ದಿಯಲ್ಲಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ RAGING(ರ್ಯಾಗಿಂಗ್)*… *11ನೇ ತರಗತಿ ವಿದ್ಯಾರ್ಥಿಗಳಿಂದ 9 ನೇ ತರಗತಿ ವಿದ್ಯಾರ್ಥಿಗಳ ಮೇಲೆ ದೈಹಿಕ ದೌರ್ಜನ್ಯ… ನಿರಂತರ ಮಾನಸಿಕ ಹಿಂಸೆ…*
*ಜಿಲ್ಲಾಧಿಕಾರಿಗಳ ಸುಪರ್ದಿಯಲ್ಲಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ RAGING(ರ್ಯಾಗಿಂಗ್)*… *11ನೇ ತರಗತಿ ವಿದ್ಯಾರ್ಥಿಗಳಿಂದ 9 ನೇ ತರಗತಿ ವಿದ್ಯಾರ್ಥಿಗಳ ಮೇಲೆ ದೈಹಿಕ ದೌರ್ಜನ್ಯ… ನಿರಂತರ ಮಾನಸಿಕ ಹಿಂಸೆ…* ಶಿವಮೊಗ್ಗದ ಗಾಜನೂರು ಮುಳ್ಳಕೆರೆಯಲ್ಲಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ 11ನೇ ಕ್ಲಾಸಿನ ವಿದ್ಯಾರ್ಥಿಗಳು 9ನೇ ಕ್ಲಾಸಿನ ವಿದ್ಯಾರ್ಥಿಗಳ ಮೇಲೆ ಬಾಸುಂಡೆಗಳೇಳುವಂತೆ ಹಲ್ಲೆ ಮಾಡಿ RAGING(ರ್ಯಾಗಿಂಗ್) ಮಾಡಿರುವ ಸುದ್ದಿ ಹೊರಬಿದ್ದಿದೆ! ಶಿವಮೊಗ್ಗದಿಂದ ಸುಮಾರು 10 ಕಿ.ಮೀ.ದೂರ ಇರುವ ಜವಾಹರ್ ನವೋದಯ ವಸತಿ ಶಾಲೆಯಲ್ಲಿ ಪಿಯುಸಿ ವಿದ್ಯಾರ್ಥಿಗಳು ತಮ್ಮ ಕೆಳ ವಯಸ್ಸಿನ ವಿದ್ಯಾರ್ಥಿಗಳನ್ನು ಟಾರ್ಗೆಟ್…
ಈ ಶಂಕರನ ಜೀವ ಉಳಿಸುವ ಜವಾಬ್ದಾರಿ ಧರ್ಮ, ಜಾತಿ ಮೀರಿ ನಮ್ಮದೆಲ್ಲ…*
*ಈ ಶಂಕರನ ಜೀವ ಉಳಿಸುವ ಜವಾಬ್ದಾರಿ ಧರ್ಮ, ಜಾತಿ ಮೀರಿ ನಮ್ಮದೆಲ್ಲ…* ಈ ಹುಡುಗ ಉಸೊರಾಡಲು ಒಂದು ಯಂತ್ರದ ಅವಶ್ಯಕತೆ ಇದೆ. ಊಟಕ್ಕೆ, ದಿನ ನಿತ್ಯದ ಖರ್ಚಿಗೆ, ತುರ್ತು ಉಸಿರಾಡಲಿಕ್ಕೆ ಅನುಕೂಲವಾಗಿದೆ. ಟ್ರಾಫಿಕ್ ಎಸ್ ಐ ತಿರುಮಲೇಶ್, ಎಂಪಿ ರಾಘವೇಂದ್ರರ ಆತ್ಮೀಯರಾದ ಬಾಬಿ, ಮಲೆನಾಡು ಎಕ್ಸ್ ಪ್ರೆಸ್ ಪತ್ರಿಕೆಯ ಅಮೀರ್, ಗೀತಾ, ವಾಸೀಂ, ಪ್ರಿಂಟರ್ ದಿವಂಗತ ಕಾಶಿಯವರ ಶ್ರೀಮತಿ ಸೇರಿದಂತೆ ಹೆಸರು ಬಹಿರಂಗ ಮಾಡಲಾಗದ ಬಹಳಷ್ಟು ಮಾನವಜೀವಿಗಳು ಕೈ ಹಿಡಿದಿದ್ದಾರೆ. ಈತನಿಗೆ ಬೇಕಿರುವುದು ಕರೆಂಟ್ ಹೋದಾಗ ಒಂದೊಳ್ಳೆ…
ನಗರಾಭಿವೃದ್ಧಿ ಸಚಿವ ಭೈರತಿ ಭೇಟಿ ಮಾಡಿದ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಶಿವಮೊಗ್ಗದ ಅಭಿವೃದ್ಧಿ ಬಗ್ಗೆ ಚರ್ಚಿಸಿದ್ದೇನು?
ನಗರಾಭಿವೃದ್ಧಿ ಸಚಿವ ಭೈರತಿ ಭೇಟಿ ಮಾಡಿದ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಶಿವಮೊಗ್ಗದ ಅಭಿವೃದ್ಧಿ ಬಗ್ಗೆ ಚರ್ಚಿಸಿದ್ದೇನು? ನಗರಾಭಿವೃದ್ಧಿ ಇಲಾಖೆ ಸಚಿವರಾದ ಬೈರತಿ ಸುರೇಶ್ ಅವರನ್ನು ಇಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರು ಭೇಟಿ ಮಾಡಿ, ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಅಭಿವೃದ್ದಿ ವಿಷಯಗಳ ಕುರಿತು ಚರ್ಚಿಸಿ ವಿವಿಧ ಕಾಮಗಾರಿಗಳಿಗೆ ತಕ್ಷಣ ಹಣ ಬಿಡುಗಡೆಗೊಳಿಸುವಂತೆ ಮನವಿ ಮಾಡಲಾಯಿತು. ಶಿವಮೊಗ್ಗ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅನುದಾನದಲ್ಲಿ…
ರಾಜ್ಯ ಸರ್ಕಾರದಿಂದ ನೇಮಕ;ದೇಶಾದ್ರಿ ಈಗ ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರು
ರಾಜ್ಯ ಸರ್ಕಾರದಿಂದ ನೇಮಕ; ದೇಶಾದ್ರಿ ಈಗ ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರು ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರನ್ನಾಗಿ ಸಿನಿಮಾ ಪತ್ರಕರ್ತ ದೇಶಾದ್ರಿ ಹೊಸ್ಮನೆ ಅವರನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಕನ್ನಡ ಚಲನಚಿತ್ರ ರಂಗದ ಅಭಿವೃದ್ದಿಗಾಗಿಯೇ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿಯು ಪ್ರತಿ ವರ್ಷ ಅಂತರ ರಾಷ್ಟ್ರೀಯ ಮಟ್ಟದ ಚಲನಚಿತ್ರೋತ್ಸವಗಳನ್ನು ಆಯೋಜಿಸುವ ಮೂಲಕ ಚಿತ್ರರಂದ ಪ್ರಗತಿಗೆ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಾ ಬರುತ್ತಿದೆ. ಈಗ ಅಕಾಡೆಮಿಗೆ ಹಿರಿಯ ಸಂಗೀತ ನಿರ್ದೇಶಕ ಹಾಗೂ ನಟ ಸಾಧು ಕೋಕಿಲ…
ಸಾರಂಗರಾಜ್ ರವರ ಮೂರು ಮುಖ್ಯ ಕವಿತೆಗಳು
ಹುಚ್ಚು ಪ್ರೀತಿ *********** ಮೊದಲು ಅರಿಯದೆ ಮೆಚ್ಚಿಕೊಂಡೆ ಹಚ್ಚಿಕೊಳ್ಳಲಿಲ್ಲ,? ಈಗ ಅರಿತು ಮೆಚ್ಚಿಕೊಂಡೆ ಬಿಟ್ಟೂಬಿಡದೆ ಹಚ್ಚಿಕೊಂಡೆ..! ಸಿಗುವುದು ತಡವಾಯಿತು ಎಂದು ತಲೆ ಚಚ್ಚಿಕೊಂಡೆ.., ಸ್ನೇಹ ಪ್ರೀತಿಯ ಉದ್ದಗಲಕೂ ಈಜಾಡಿ ಹುಚ್ಚು ಹೆಚ್ಚಿಸಿಕೊಂಡೆ..! ೨ ಸಿಹಿಕಹಿ ಪಯಣ **************** ಮೋಡದ ಗೂಡಲ್ಲಿ ಹದವಾಗುತ, ಮೆಲ್ಲನೆ ಗೂಡ ಕದವ ತೆರೆದು, ರಪ್ಪನೆ ನೆಲಕ್ಕೆ ಅಪ್ಪಳಿಸಿ ತಾನೇ ಖುಷಿ ಫಡುವ ಹನಿಗಳ ಬಾಲೆ ನನ್ನ ಗೆಳತಿ.., ಕಾಡು ಮೇಡು ಹಳ್ಳಕೊಳ್ಳ ಅಲೆದು, ಝರಿತೊರೆ ನದಿಯ ಹೆಸರು ತೊಟ್ಟು, ಹಸಿದ ಹೊಟ್ಟೆಗೆ ಅನ್ನವನಿಟ್ಟು,…
ಶಿವಮೊಗ್ಗ ರಂಗಾಯಣ: ನಾಟಕ ನಿರ್ದೇಶಕರಿಂದ ಅರ್ಜಿ ಆಹ್ವಾನ*
*ಶಿವಮೊಗ್ಗ ರಂಗಾಯಣ: ನಾಟಕ ನಿರ್ದೇಶಕರಿಂದ ಅರ್ಜಿ ಆಹ್ವಾನ* ಶಿವಮೊಗ್ಗ ಶಿವಮೊಗ್ಗ ರಂಗಾಯಣವು ಏಪ್ರಿಲ್ 2025ರಲ್ಲಿ ಆಯೋಜಿಸುತ್ತಿರುವ ಮಕ್ಕಳ ಬೇಸಿಗೆ ಶಿಬಿರ-2025ಕ್ಕೆ ಮಕ್ಕಳಿಗೆ ರಂಗತರಬೇತಿ, ನಾಟಕ ನಿರ್ದೇಶನ ಮಾಡಲು ರಂಗಭೂಮಿಯ ಹಿನ್ನಲೆಯುಳ್ಳ, ನಾಟಕದಲ್ಲಿ ಅಭಿನಯಿಸಿರುವ ಮತ್ತು ನಾಟಕ ನಿರ್ಮಾಣದಲ್ಲಿ ಪರಿಣಿತಿ ಹೊಂದಿರುವ 23-40 ವರ್ಷ ವಯೋಮಿತಿಯ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಸ್ವವಿವರದೊಂದಿಗೆ ಆಡಳಿತಾಧಿಕಾರಿಗಳು, ರಂಗಾಯಣ, ಶಿವಮೊಗ್ಗ ಇವರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಅಥವಾ ಇ-ಮೇಲ್ admn.rangayanashivamogga@gmail.com ಮೂಲಕ ಮಾ. 05 ರೊಳಗಾಗಿ ಸಲ್ಲಿಸುವುದು. ಶಿವಮೊಗ್ಗ ರಂಗಾಯಣದ…