
ಪಾಶುಪತಾಸ್ತ್ರ ನೋಡಿ ಖುಷಿಯಾದರು ಗೀತಕ್ಕ
ಪಾಶುಪತಾಸ್ತ್ರ ನೋಡಿ ಖುಷಿಯಾದರು ಗೀತಕ್ಕ ಮೊನ್ನೆ ಶನಿವಾರ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಫೋನು ಮಾಡಿದ್ದಾರೆ.ಹಾಗೆಯೇ ಕರ್ನಾಟಕದ ಬಿಜೆಪಿ ಪಾಳಯದಲ್ಲಿ ಶುರುವಾದ ಬಂಡಾಯಕ್ಕೆ ಬ್ರೇಕ್ ಹಾಕುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅಂದ ಹಾಗೆ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಸ್ಪರ್ಧಿಸುವ ಇಪ್ಪತ್ತು ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ವರಿಷ್ಟರು ಪ್ರಕಟಿಸಿದರಲ್ಲ?ಹಾಗೆ ಪ್ರಕಟಿಸಿದ ಬೆನ್ನಲ್ಲೇ ಹಲವು ಕಡೆ ಬಂಡಾಯ ಶುರುವಾಗಿದೆ. ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದರೆ,ಬೀದರ್,ರಾಯಚೂರು,ಚಿಕ್ಕೋಡಿ,ಹಾವೇರಿ…