ಶೋಭಾ ಮಳವಳ್ಳಿ ಟೀಕೆ- ಟಿಪ್ಪಣಿ; ಡಾ.ರಾಜ್ ಗಾಯನ HORRIBLE ಅಂದವರು ಯಾರು?
ಡಾ.ರಾಜ್ ಗಾಯನ HORRIBLE ಅಂದವರು ಯಾರು? ಶ್ರೇಷ್ಠತೆಯೇ ವ್ಯಸನವಾದರೆ ಎಂಥ ಮಾತುಗಳು ಉದುರುತ್ತವೆ ಎಂಬುದಕ್ಕೆ ಈ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ, ಟೆಕ್ಕಿ ಸಂಜಯ್ ನಾಗ್ ಉದಾಹರಣೆ. ಡಾ. ರಾಜ್‌ಕುಮಾರ್ ಗಾಯನವನ್ನೇ ಭಯಾನಕ (Horrible) ಅಂದವನ ಮನಸ್ಥಿತಿ ಅದೆಷ್ಟು ಕುಲಗೆಟ್ಟು ಹೋಗಿರಬೇಕು. ಮನುಷ್ಯನ ಮನಸ್ಸಿನೊಳಗೆ ಅಸೂಯೆ, ಹೊಟ್ಟೆಕಿಚ್ಚೆಂಬ ಹಾವೊಂದು ಮುದುಡಿ ಮಲಗಿಯೇ ಇರುತ್ತದೆ. ಆಗಾಗ ಭುಸ್ ಭುಸ್ ಎನ್ನುತ್ತಾ ಅಸೂಯೆಯನ್ನು ಹೊರಹಾಕುತ್ತಿರುತ್ತದೆ. ಯಾವಾಗ, ಹೊಟ್ಟೆಕಿಚ್ಚು ಅಸಹಿಸಲಾಧ್ಯವಾಗುತ್ತದೋ, ಏನೇನೂ ಇಲ್ಲದ ಅವರಿಗೆ, ಅದು ಹೇಗೆ ಅಷ್ಟೆಲ್ಲ ದಕ್ಕಿತು? ಎಂಬ ಅಸೂಯೆ…