ನಾನು ಶರಾವತಿ ನದಿ-ಮಾ.19 ಕ್ಕೆ ಶಿವಮೊಗ್ಗದ ಗೋಪಿ ಸರ್ಕಲಲ್ಲಿ ಬಹಿರಂಗ ಸಭೆ- ಪಾದಯಾತ್ರೆ
ಪ್ರೀತಿಯ ಮನುಕುಲ ಬಾಂಧವರೆ, ನಾನು ಶರಾವತಿ ನದಿ. ಕರ್ನಾಟಕದಲ್ಲೇ ಅತೀ ಹೆಚ್ಚು ವಿದ್ಯುತ್ ಉತ್ಪಾದಿಸಿ ನಿಮ್ಮ ಮನೆಗಳಗನ್ನು ಬೆಳಗುತ್ತಾ ಇದ್ದೇನೆ. ಆದರೆ ನಾನು ನಿಮ್ಮವಳಷ್ಟೇ ಅಲ್ಲ, ನನ್ನ ಅವಶ್ಯಕತೆ ಅನ್ಯ ಜೀವಿ ಸಹೋದರ ಮತ್ತು ಸಹೋದರಿಯರಿಯರಿಗೂ ಬಹಳಷ್ಟು ಇದೆ. ನನ್ನನ್ನು ಸ್ವತಂತ್ರವಾಗಿ ಹರಿಯಲು ಬಿಡಿ ! ಶರಾವತಿ ಪಂಪ್ಡ್ ಸ್ಟೋರೇಜ್ ಎಂಬ ಅನವಶ್ಯಕ ಯೋಜನೆಯನ್ನು ಹೇರಿ, ನನ್ನನ್ನು ಕೊಲ್ಲದಿರಿ. ನನ್ನ ಸರಾಗ ಹರಿವಿನ ಸೇವೆ ಎಲ್ಲಾ ಜೀವಿಲೋಕಕ್ಕೂ ದೊರಕಬೇಕು. ನಿಮ್ಮ ಬುದ್ದಿವಂತಿಕೆಯಿಂದ ಏನೆಲ್ಲಾ ಸಾದಿಸಿದ್ದೀರಿ! ನೀವಾದರೆ ಅನ್ಯ…