ರಂಗಾಯಣದಲ್ಲಿ ವಿಶ್ವರಂಗಭೂಮಿ ದಿನಾಚರಣೆ ಪ್ರಯುಕ್ತ ರಂಗಚಿಂತನೆ ಒಟ್ಟುಗೂಡಿ ನಡೆಯುವುದನ್ನು ರಂಗಭೂಮಿ ಕಲಿಸುತ್ತದೆ- ಪುರುಷೋತ್ತಮ ತಲವಾಟ
ರಂಗಾಯಣದಲ್ಲಿ ವಿಶ್ವರಂಗಭೂಮಿ ದಿನಾಚರಣೆ ಪ್ರಯುಕ್ತ ರಂಗಚಿಂತನೆ ಒಟ್ಟುಗೂಡಿ ನಡೆಯುವುದನ್ನು ರಂಗಭೂಮಿ ಕಲಿಸುತ್ತದೆ- ಪುರುಷೋತ್ತಮ ತಲವಾಟ ಶಿವಮೊಗ್ಗ; ನಮ್ಮ ನಡುವೆ ಇರುವ ಕಲೆಗಳಲ್ಲಿ ರಂಗಭೂಮಿ ಅತೀ ಹೆಚ್ಚು ಜೀವಂತಿಕೆ ಇರುವ ಕಲೆಯಾಗಿದ್ದು, ಒಟ್ಟುಗೂಡಿ ನಡೆಯುವುದನ್ನು ರಂಗಭೂಮಿ ಕಲಿಸುತ್ತದೆ ಎಂದು ಹಿರಿಯ ರಂಗಕರ್ಮಿ ಪುರುಷೋತ್ತಮ ತಲವಾಟ ಹೇಳಿದರು. ಅವರು ಇಂದು ಶಿವಮೊಗ್ಗ ರಂಗಾಯಣದಲ್ಲಿ ವಿಶ್ವರಂಗಭೂಮಿ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ರಂಗಚಿಂತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಲವಾರು ಕಲೆಗಳು ಸಮೂಹದಿಂದ ರೂಪುಗೊಳ್ಳುವ ರಂಗಕಲೆ ವ್ಯಕ್ತಿಯನ್ನು ಸೃಜನಶೀಲನನ್ನಾಗಿಸುತ್ತದೆ. ರಂಗದ ಮೇಲೆ ಒಂದು ಎರಡು…