ಶಿಕಾರಿಪುರ ತಾಲ್ಲೂಕಿನ ಮುದ್ದನಹಳ್ಳಿ; ಹಗರಣ ಮುಕ್ತ ಗ್ಯಾರಂಟಿ ಯೋಜನೆಗಳು; ಗೀತಾ ಶಿವರಾಜ್ ಕುಮಾರ್
ಶಿಕಾರಿಪುರ ತಾಲ್ಲೂಕಿನ ಮುದ್ದನಹಳ್ಳಿ; ಹಗರಣ ಮುಕ್ತ ಗ್ಯಾರಂಟಿ ಯೋಜನೆಗಳು; ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗ: ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಮಧ್ಯವರ್ತಿಗಳ ಕಾಲ್ತುಳಿತಕ್ಕೆ ಸಿಲುಕದೆ, ನೇರವಾಗಿ ಬಡವರ ಕೈ ಸೇರುತ್ತಿವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಹೇಳಿದರು. ಶಿಕಾರಿಪುರ ತಾಲ್ಲೂಕಿನ ಮುದ್ದನಹಳ್ಳಿಯಲ್ಲಿ ಗುರುವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಗ್ಯಾರಂಟಿ ಯೋಜನೆಗಳಲ್ಲಿ ಯಾವುದೇ ರೀತಿಯ ಹಗರಣ ನಡೆಯುತ್ತಿಲ್ಲ. ಮಾಸಿಕ ₹50 ಲಕ್ಷ ಹಣ ಪ್ರತಿ ಗ್ರಾಮ ಪಂಚಾಯಿತಿಗೆ ವ್ಯಯಿಸಲಾಗುತ್ತಿದೆ. ವಾರ್ಷಿಕ ₹6 ಕೋಟಿ ಹಣ ಗ್ಯಾರಂಟಿ…