ಆಯಿಸ್ಟರ್ ಅಣಬೆ: ಕಡಿಮೆ ಹೂಡಿಕೆ, ಅಧಿಕ ಆದಾಯ*
*ಆಯಿಸ್ಟರ್ ಅಣಬೆ: ಕಡಿಮೆ ಹೂಡಿಕೆ, ಅಧಿಕ ಆದಾಯ* ಶಿಕಾರಿಪುರ ತಾಲ್ಲೂಕಿನ ನೆಲವಾಗಿಲು ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿಯಲ್ಲಿ ಅಣಬೆ ಬೇಸಾಯದ ಕುರಿತು ಗುಂಪು ಚರ್ಚೆ ಹಾಗೂ ಪದ್ಧತಿ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಶಿಲ್ಪಾ, ಸಹಾಯಕ ಪ್ರಾಧ್ಯಪಕಿ ಸೂಕ್ಷ್ಮಾಣು ಜೀವಶಾಸ್ತ್ರ ರವರು ಆಗಮಿಸಿದ್ದರು. ಭಾರತದಲ್ಲಿ ಬೆಳೆಯುವ ವಿವಿಧ ರೀತಿಯ ಅಣಬೆಗಳು ಅಂದರೆ ಕಪ್ಪೆ ಚಿಪ್ಪಿನ ಅಣಬೆ,…