ಕವಿಸಾಲು
Gm ಶುಭೋದಯ💐💐 *ಕವಿಸಾಲು* ೧ ಭಾಷೆ ಕೊಟ್ಟಿದ್ದನ್ನು ಹೀಗೂ ನಿಭಾಯಿಸಿಬಿಟ್ಟೆ ನಾನು… ಕಣ್ಣೀರಾಗಲು ಬಯಸಿದ್ದೆ; ಮುಗುಳ್ನಗುವುದು ಅನಿವಾರ್ಯವಾಗ್ಹೋಯ್ತು! ೨ ಪ್ರೇಮವೆಂಬುದು ಬಹುದೊಡ್ಡ ಶಿಕ್ಷೆ… ಜನ್ಮಗಳು ದಾಟಿದರೂ ಶಿಕ್ಷೆ ಹಾಗೇ ಉಳಿದಿದೆ! ೩ ಬಾ ಹೊರಟು ಬಿಡೋಣ; ನಿನ್ನ ದಾರಿ ನನ್ನತ್ತ ಮಾಡಿ ನನ್ನ ದಾರಿ ನಿನ್ನತ್ತ ಮಾಡಿ ೪ ಬದುಕು ಮೆಲ್ಲ ಮೆಲ್ಲಗೆ ಕಲಿಸುತ್ತಿದೆ; ಎಷ್ಟು ಪ್ರೀತಿಸುತ್ತೀಯೋ ಅಷ್ಟು ಸುಖವಾಗಿರುತ್ತೀ ಎಂದು! – *ಶಿ.ಜು.ಪಾಶ* 8050112067 (6/5/2026)


