ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ನಂಬಿಕೆ ಒಳ್ಳೇದೇ ಆದರೆ ಎಲ್ಲರ ಮೇಲಲ್ಲ! 2. ನಾನು ಮಲಗುವ ಮುನ್ನವೇ ಮಲಗಿಸಿಬಿಡುತ್ತೇನೆ ನನ್ನೆಲ್ಲಾ ಆಸೆಗಳನ್ನು… ಆದರೂ ಆಶ್ಚರ್ಯ ನಾ ಏಳುವುದಕ್ಕಿಂತ ಮುಂಚೆಯೇ ಎದ್ದಿರುತ್ತವೆ! 3. ಕಣ್ಣು ಕುಕ್ಕುವ ಸೌಂದರ್ಯ ತಾಜ್ ಮಹಲ್ ಗೋರಿ ಎಂಬುದನ್ನು ಮುಚ್ಚಿಟ್ಟಿತು! – *ಶಿ.ಜು.ಪಾಶ* 8050112067 (31/12/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಮತ್ತೆ ಬೆಂಕಿ ಹಚ್ಚಲು ನೋಡುತ್ತಿದ್ದಾರೆ ಅವರು; ಹೇಳಿಬಿಡು… ಬೂದಿಗೆ ಬೆಂಕಿ ಹತ್ತುವುದಿಲ್ಲವೆಂದು! 2. ಏನನ್ನೂ ಕೇಳದೇ ಎಲ್ಲದನ್ನೂ ಬದಲಾಯಿಸಿಬಿಟ್ಟೆ ನೀನು… ಧನ್ಯವಾದಗಳು 2025! – *ಶಿ.ಜು.ಪಾಶ* 8050112067 (30/12/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಕೆಲಸ ಮುಗಿದ ಮೇಲಿಲ್ಲಿ ಪೂಜೆಗಿಟ್ಟ ಹೂವೂ ಕಸವೇ… 2. ಉದ್ದೇಶ ಸಿಕ್ಕಿದೆ ಈಗ ನಿನ್ನಿಂದ ಬದುಕಿಗೆ… ಜೀವನವೋ ಸಕ್ಕರೆ ರೋಗಿಯಂತಿತ್ತು! 3. ವಯಸ್ಸಾದ ಮೇಲೆ ತನುವೆಂಬುದು ಆಮೆಯು ಮನವೆಂಬುದು ಮೊಲವು… – *ಶಿ.ಜು.ಪಾಶ* 8050112067 (24/12/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಯಾರು ಹೇಳುತ್ತಾರೆ ನಿನಗೆ ನನ್ನ ವಿಳಾಸ… ನಾನೋ ವಿಳಾಸವಿಲ್ಲದವನು! 2. ಇಲ್ಯಾರೂ ಖಾಲಿ ಇಲ್ಲ; ಪ್ರೇಮದಿಂದ ತುಂಬಿ ಹೋಗಿದ್ದಾರೆ ಕೆಲವರು, ಕೆಲವರು ದ್ವೇಷದಿಂದ, ಕೆಲವರಂತೂ ಖುಷಿಯಿಂದ ತುಂಬಿ ಹೋಗಿದ್ದರೆ, ಮತ್ತೆ ಕೆಲವರು ದುಃಖದಿಂದ… 3. ಜೊತೆಗಿದ್ದಾಗ ಹನಿಯಂತೆ ಕಾಣುವೆ ಕಳೆದುಕೊಳ್ಳುವ ಭಯವೋ ಸಮುದ್ರದಷ್ಟು! – *ಶಿ.ಜು.ಪಾಶ* 8050112067 (23/12/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಮೇಣದ ಬತ್ತಿಗೆ ಈಗಷ್ಟೇ ಗೊತ್ತಾಯ್ತು… ತನ್ನೊಳಗೆ ಅಡಗಿಸಿಟ್ಟ ದಾರವೇ ತನ್ನ ಸುಟ್ಟು ಕರಗಿಸಿತೆಂದು! 2. ಪರಸ್ಪರ ನೆನಪಿಸಿಕೊಳ್ಳುತ್ತಿರಿ… ಇದು ಒಮ್ಮೆಯಷ್ಟೇ ಸಿಗುವ ಬದುಕು, ಪದೇ ಪದೇ ತಯಾರಿಸಬಹುದಾದ ಚಹಾವಲ್ಲ! – *ಶಿ.ಜು.ಪಾಶ* 8050112067 (18/12/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಬೇಸರದಲ್ಲಿರಬೇಡ ಎಂದಿಗೂ ನಿನ್ನದೊಂದೇ ಚಹರೆ ನೋಡುತ್ತಾ ದುಃಖ ಮರೆಯುವುದು ನಾನು… 2. ತಾಳ್ಮೆಯಿರಲಿ ಹೃದಯವೇ ಗಹಗಹಿಸಿ ನಕ್ಕವರೂ ಚಪ್ಪಾಳೆಯನೂ ತಟ್ಟುವರು… – *ಶಿ.ಜು.ಪಾಶ* 8050112067 (17/12/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ದಾರಿ ಕಠಿಣವಿದ್ದರೆ… ಗುರಿಯೂ ಅದ್ಭುತವೂ 2. ಕನಸೇನೆಂದು ಗೊತ್ತಾ ನಿನಗೆ? ಅದೊಂದು ನೀನಷ್ಟೇ ಇರುವ ಅದ್ಭುತ ಜಗತ್ತು! 3. ನೀನು ಬರೀ ನೀನಲ್ಲ ಸುಂದರವಾದ ಅಭ್ಯಾಸವು! – *ಶಿ.ಜು.ಪಾಶ* 8050112067 (14/12/2025)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಸಮಸ್ಯೆಗಳು ಬಂದರೆ Part of life ಅಂದು ಕೋ ಹೃದಯವೇ… ಆ ಸಮಸ್ಯೆಗಳಿಂದ ಮುಗುಳ್ನಕ್ಕು ಹೊರ ಬಂದುಬಿಡು Art of life ಆಗುವುದಾಗ! 2. ಒಂದಿಷ್ಟು ಖಾಲಿತನವಿರಲಿ ನಿನ್ನಲ್ಲಿ… ನೀನೇ ನಿನ್ನೊಳಗಿಂದ ಹೊರ ಹೋಗದ ಸ್ಥಿತಿ ಬರದಿರಲಿ – *ಶಿ.ಜು.ಪಾಶ* 8050112067 (13/12/2025)

Read More