ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಪಯಣಿಗ ನಾನು;
ನಿನ್ನ ನೆನಪುಗಳಿಂದಲೂ
ಅದೊಂದು ದಿನ
ಹೋಗಿಬಿಡುವೆನು!

2.
ಬೆಟ್ಟದಿಂದಿಳಿವ ನದಿಯು
ಎಂದಾದರೂ ಕೇಳಿತ್ತಾ
ಸಮುದ್ರ ಸೇರುವ
ಹಾದಿಯನ್ನು?

3.
ಬಿಟ್ಟು ಬಿಟ್ಟು
ಬರುತ್ತಲೇ ಇದೆ ಮಳೆಯು

ಯಾರು ಉಳಿದು ಬಿಟ್ಟಿದ್ದಾರೋ
ನೆನೆಯದೇ ಇನ್ನೂ…

4.
ನರಕಕ್ಕೆ ಹೋಗಲು
ಇದು ಸುಸಮಯ;

ಸಿಲಿಂಡರ್ ದೊರೆಯುತ್ತಿಲ್ಲವಾದ್ದರಿಂದ
ಎಣ್ಣೆ ಕುದಿಯುತ್ತಿಲ್ಲ ಅಲ್ಲಿ!

– *ಶಿ.ಜು.ಪಾಶ*
8050112067
(2/4/2026)