ಮಾಜಿ ಕೌನ್ಸಿಲರ್, ಕಾಂಗ್ರೆಸ್ ಮುಖಂಡ ಎನ್.ಕೆ.ಶ್ಯಾಮಸುಂದರ್ ಸರ್ಕಾರಕ್ಕೆ ಕೋರಿದ್ದೇನು?* *ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ (ಕಂದಾಯ )ರೆವಿನ್ಯೂ ನಿವೇಶನಗಳಲ್ಲಿ ಅಗ್ರಿಮೆಂಟ್ ಸ್ವಾಧೀನ ಪತ್ರ, ಜಿಪಿಎ ಪತ್ರ, ನಗರಸಭೆಯಿಂದ ನೀಡಿದ ಹಕ್ಕು ಪತ್ರ ಇವುಗಳ ದಾಖಲೆ ಮೇಲೆ ಸುಮಾರು 20 ವರ್ಷ ಮೇಲ್ಪಟ್ಟು ಮನೆ ಕಟ್ಟಿಕೊಂಡಿರುವ ಮಧ್ಯಮ ವರ್ಗದವರು ಕೂಲಿ ಕಾರ್ಮಿಕರಿಗೂ ಖಾತೆ ಮಾಡಿ ಕೊಡಿ*
ಮಾಜಿ ಕೌನ್ಸಿಲರ್, ಕಾಂಗ್ರೆಸ್ ಮುಖಂಡ ಎನ್.ಕೆ.ಶ್ಯಾಮಸುಂದರ್ ಸರ್ಕಾರಕ್ಕೆ ಕೋರಿದ್ದೇನು?*
*ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ (ಕಂದಾಯ )ರೆವಿನ್ಯೂ ನಿವೇಶನಗಳಲ್ಲಿ ಅಗ್ರಿಮೆಂಟ್ ಸ್ವಾಧೀನ ಪತ್ರ, ಜಿಪಿಎ ಪತ್ರ, ನಗರಸಭೆಯಿಂದ ನೀಡಿದ ಹಕ್ಕು ಪತ್ರ ಇವುಗಳ ದಾಖಲೆ ಮೇಲೆ ಸುಮಾರು 20 ವರ್ಷ ಮೇಲ್ಪಟ್ಟು ಮನೆ ಕಟ್ಟಿಕೊಂಡಿರುವ ಮಧ್ಯಮ ವರ್ಗದವರು ಕೂಲಿ ಕಾರ್ಮಿಕರಿಗೂ ಖಾತೆ ಮಾಡಿ ಕೊಡಿ*
ಕಳೆದ ಎರಡು ದಿನಗಳ ಹಿಂದೆ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಹಲವು ಸಚಿವರ ಸಮ್ಮುಖದಲ್ಲಿ ನಡೆಸಿದಂತಹ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.
ರಾಜ್ಯ ವ್ಯಾಪ್ತಿಯಲ್ಲಿ ಸ್ಥಳೀಯ ಸಂಸ್ಥೆಗಳಿಂದ ಪರವಾನಿಗೆ ಪಡೆದು ನಿಯಮ ಪಾಲಿಸದೆ ಮನೆ ಕಟ್ಟಿದವರಿಗೆ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕ, ಒಳಚರಂಡಿ ಸೌಲಭ್ಯಗಳನ್ನು ನೀಡಬಾರದು ಎಂಬ ಆದೇಶದ ಅನ್ವಯ ಮನೆ ಕಟ್ಟಿಕೊಂಡಿರುವವರು ತೊಂದರೆಗೆ ಸಿಲುಕಿದ್ದರು. ಸರ್ಕಾರ ಈ ಬಗ್ಗೆ ಜನಪರ ತೀರ್ಮಾನ ತೆಗೆದುಕೊಂಡಿದ್ದು ಸ್ವಾಗತಾರ್ಹ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಮಾಜಿ ಕೌನ್ಸಿಲರ್ ಎನ್.ಕೆ.ಶ್ಯಾಮಸುಂದರ್ ಹೇಳಿದ್ದಾರೆ.
ಸಿಸಿ ಓಸಿ ಸಾಧಕ-ಬಾಧಕಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿ 1200 ಅಡಿಯಲ್ಲಿ ಕಟ್ಟಿರುವ ಮನೆಗೆ ಮಾತ್ರ ವಿದ್ಯುತ್, ನೀರು ಸರಬರಾಜಿಗೆ ನಿರ್ಧರಿಸಲಾಗಿದ್ದು, 30X40 ಸೈಟ್ನಲ್ಲಿ ಕಟ್ಟಿರುವ ಮನೆಗಳಿಗೆ ಅನುಮತಿ ನೀಡುವ ಬಗ್ಗೆ ಸರ್ಕಾರ ಚಿಂತಿಸಿದೆ.
ಆದರೆ, ಶಿವಮೊಗ್ಗ ನಗರದಲ್ಲಿ 25*50 ಅಡಿಯ ಅತಿ ಹೆಚ್ಚು ನಿವೇಶನ ಹಾಗೂ ಈ ಅಳತೆಯಲ್ಲಿ ಮನೆಯನ್ನು ನಿರ್ಮಿಸಿರುತ್ತಾರೆ. ಇದನ್ನು ಬಡವರ್ಗದ ಜನರು ಖರೀದಿಸಿರುತ್ತಾರೆ. ಇವುಗಳಿಗೆ ಸೆಟ್ ಬ್ಯಾಕ್ ನಿಯಮ ತೊಂದರೆ ಆಗುತ್ತದೆ. 20*30, 30 *40 ರಂತೆ 25*50 ರ ನಿವೇಶನಕ್ಕೂ ಸಹ ಸರ್ಕಾರ ನಿಯಮ ಸಡಿಲಿಸಿ ಅಂತಿಮ ನಿರ್ಧಾರದ ಸಂಪುಟದ ಸಭೆಯಲ್ಲಿ ರಿಯಾಯಿತಿ ಆದೇಶ ಮಾಡಿ ಮೂಲ ಸೌಲಭ್ಯ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಗ್ರೇಟರ್ ಬೆಂಗಳೂರಿನಲ್ಲಿ ರೆವೆನ್ಯೂ ನಿವೇಶನ ಏಕ ನಕ್ಷೆ ಅನುಮೋದನೆ ಮಾಡಿ ಏ ಖಾತ ಮಾಡಿಕೊಡಲು ಆದೇಶ ಮಾಡಿ ಜಾರಿ ಮಾಡಲಾಗಿದೆ. ಅದರಂತೆ ರಾಜ್ಯ ವ್ಯಾಪ್ತಿಯೂ ಇದನ್ನು ಜಾರಿ ಮಾಡಬೇಕು.
ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ (ಕಂದಾಯ )ರೆವಿನ್ಯೂ ನಿವೇಶನಗಳಲ್ಲಿ ಅಗ್ರಿಮೆಂಟ್ ಸ್ವಾಧೀನ ಪತ್ರ, ಜಿಪಿಎ ಪತ್ರ, ನಗರಸಭೆಯಿಂದ ನೀಡಿದ ಹಕ್ಕು ಪತ್ರ ಇವುಗಳ ದಾಖಲೆ ಮೇಲೆ ಸುಮಾರು 20 ವರ್ಷ ಮೇಲ್ಪಟ್ಟು ಮನೆ ಕಟ್ಟಿಕೊಂಡಿರುವ ಮಧ್ಯಮ ವರ್ಗದವರು ಕೂಲಿ ಕಾರ್ಮಿಕರಿಗೂ ಖಾತೆ ಮಾಡಿ ಕೊಡುವಂತಹ ಐತಿಹಾಸಿಕ ಮಹತ್ತರ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಶ್ಯಾಮಸುಂದರ್ ಕೋರಿದ್ದಾರೆ.
ಇದರಿಂದ ಸ್ಥಳೀಯ ಸಂಸ್ಥೆಗಳಿಗೂ ಆದಾಯ ಕ್ರೋಢೀಕರಣವಾಗುತ್ತದೆ. ಮಧ್ಯಮ ವರ್ಗದವರ, ಕೂಲಿ ಕಾರ್ಮಿಕರ ಕುಟುಂಬಗಳ ಆಶೀರ್ವಾದ ಸದಾ ಸರ್ಕಾರದಮಲಿರುತ್ತದೆ ಎಂದು ವಿನಂತಿಸಿದ್ದಾರೆ.