*9ನೇ ಕ್ಲಾಸ್ ಹುಡುಗರಿಂದ 10ನೇ ಕ್ಲಾಸ್ ಬಾಲಕನ ಭೀಕರ ಕೊಲೆ!* *ಕೊಲೆ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ ಬಾಲಕ ‘ಡಾನ್’ಗಳು*

*9ನೇ ಕ್ಲಾಸ್ ಹುಡುಗರಿಂದ 10ನೇ ಕ್ಲಾಸ್ ಬಾಲಕನ ಭೀಕರ ಕೊಲೆ!*

*ಕೊಲೆ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ ಬಾಲಕ ‘ಡಾನ್’ಗಳು*

ಅಪ್ರಾಪ್ತ ಬಾಲಕರಿಂದಲೇ ಅಪ್ರಾಪ್ತ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯ ಭೀಕರ ಹತ್ಯೆ. ಸಾಮಾಜಿಕ ಜಾಲತಾಣ ಪ್ರಚೋದನೆಯ ಶಂಕೆ. ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ಅಪ್ರಾಪ್ತ ಬಾಲಕರಿಂದಲೇ ಅಪ್ರಾಪ್ತ ಬಾಲಕನನ್ನು ಚಾಕುವಿನಿಂದ ಇರಿದು ಹತ್ಯೆಗೈದ ಮನಕಲಕುವ ಘಟನೆ ಬುಧವಾರ ಸಂಜೆ ನಡೆದಿದೆ. ಈ ಘಟನೆ ಜಿಲ್ಲೆಯಲ್ಲಿ ಭಾರೀ ಆಘಾತಕ್ಕೆ ಕಾರಣವಾಗಿದ್ದು, ಬಾಲಕರ ಮೇಲೆ ಸಾಮಾಜಿಕ ಜಾಲತಾಣಗಳ ದುಷ್ಪ್ರಭಾವದ ಬಗ್ಗೆ ಗಂಭೀರ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಕುಂದಗೋಳ ಪಟ್ಟಣದ ಪೂಜಾರ ಓಣಿಯ ನಿವಾಸಿ ನಿಂಗರಾಜ್ ಅವಾರಿ (16) ಈ ದುರ್ಘಟನೆಯಲ್ಲಿ ಮೃತಪಟ್ಟ ಬಾಲಕ. ನಿಂಗರಾಜ್ ಸ್ಥಳೀಯ ಅನುದಾನಿತ ಶಾಲೆಯೊಂದರಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯಾಗಿದ್ದು, ಓದಿನಲ್ಲಿ ಚುರುಕಾಗಿದ್ದ ಹಾಗೂ ಶಿಸ್ತುಬದ್ಧ ಬಾಲಕನಾಗಿದ್ದನೆಂದು ಕುಟುಂಬಸ್ಥರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಇದೇ ಶಾಲೆಯ ಓರ್ವ ಬಾಲಕ ಸೇರಿ ಮೂವರು ಅಪ್ರಾಪ್ತ ಬಾಲಕರು ಈ ಕೃತ್ಯ ಎಸಗಿದ್ದಾರೆ. ಶಾಲೆಯಲ್ಲಿ ನಡೆದ ಸಣ್ಣ ವಿಚಾರಕ್ಕೆ ಸಂಬಂಧಿಸಿದ ಜಗಳವೇ ನಂತರ ಭೀಕರ ಹತ್ಯೆಯಾಗಿ ಪರಿಣಮಿಸಿದೆ ಎನ್ನಲಾಗಿದೆ.