ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಜ. 19ರಂದು ವಾರಸುದಾರರಿಲ್ಲದ ವಾಹನಗಳ ಹರಾಜು
ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ
ಜ. 19ರಂದು ವಾರಸುದಾರರಿಲ್ಲದ ವಾಹನಗಳ ಹರಾಜು
ಶಿವಮೊಗ್ಗ: ವಿನೋಬನಗರ ಪೊಲೀಸ್ ಠಾಣೆಯಲ್ಲಿ ವಾರಸುದಾರರು ಇಲ್ಲದ ವಾಹನಗಳ ಹರಾಜು ವಿಲೇವಾರಿ ಪ್ರಕ್ರಿಯೆ ಯನ್ನು ಜ. 19 ರ ಸೋಮವಾರದಂದು ನಡೆಸ ಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿನೋಬನಗರ ಪೊಲೀಸ್ ಠಾಣೆಯ ಆವರಣದಲ್ಲಿ ವಾರಸುದಾರರು ಇಲ್ಲದ 14 ವಾಹನಗಳನ್ನು ವಿಲೇವಾರಿ ಮಾಡುವಂತೆ 3ನೇ ಜೆ.ಎಂ.ಎಫ್.ಸಿ ನ್ಯಾಯಾಲಯ ಶಿವಮೊಗ್ಗ ನ್ಯಾಯಾಲಯದ ಆದೇಶದಂತೆ ದಿನಾಂಕ 19-01-2026 ರಂದು ಬೆಳಿಗ್ಗೆ 10:00 ಗಂಟೆಗೆ ವಿನೋಬನಗರ ಪೊಲೀಸ್ ಠಾಣಾ ಆವರಣದಲ್ಲಿ ವಿಲೇವಾರಿ ಪ್ರಕ್ರಿಯೆ ನಡೆಯಲಿದ್ದು, ಆಸಕ್ತರು ಈ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ವಿನೋಬನಗರ ಠಾಣಾಧಿಕಾರಿ ಕೋರಿದ್ದಾರೆ.


