ತಿಂದ ತಟ್ಟೆ ಒಂದೇ ಆದರೂ ಬಟ್ಟೇನೂ ಬಿಡದೇ ರಾಜಕಾರಣದಿಂದ ಅಟ್ಟಿದ್ರ ಯಡಿಯೂರಪ್ಪ?! ಜೈಲಿಗೋದ ಯಡಿಯೂರಪ್ಪ ವಿರುದ್ಧ ಆಡಿದ ಆ ಮಾತು ಈಗ ಈಶ್ವರಪ್ಪರ ಕುತ್ತಿಗೆಯ ಉರುಳಾಯ್ತಾ?*
*ತಿಂದ ತಟ್ಟೆ ಒಂದೇ ಆದರೂ ಬಟ್ಟೇನೂ ಬಿಡದೇ ರಾಜಕಾರಣದಿಂದ ಅಟ್ಟಿದ್ರ ಯಡಿಯೂರಪ್ಪ?! ಜೈಲಿಗೋದ ಯಡಿಯೂರಪ್ಪ ವಿರುದ್ಧ ಆಡಿದ ಆ ಮಾತು ಈಗ ಈಶ್ವರಪ್ಪರ ಕುತ್ತಿಗೆಯ ಉರುಳಾಯ್ತಾ?*
ಯಡಿಯೂರಪ್ಪ, ಈಶ್ವರಪ್ಪ ಮತ್ತು ಡಿ.ಹೆಚ್.ಶಂಕರಮೂರ್ತಿಯವರು ಶಿವಮೊಗ್ಗದ ಮಟ್ಟಿಗೆ ಬಿಜೆಪಿಯ ತ್ರಿಕಾಲ ಜ್ಞಾನಿಗಳು. ಇವರು ಮೂವರಿಲ್ಲದೇ ಬಿಜೆಪಿ ಅಲುಗಾಡಿದ್ದೇ ಇಲ್ಲ. ವ್ಯವಹಾರವಾಗಲೀ, ರಾಜಕಾರಣವಾಗಲೀ, ಊಟ ಮಾಡುವುದಾಗಲೀ ಒಂದೇ ತಟ್ಟೆಯಲ್ಲಿ ಉಂಡವರು..ಉಂಡು ಬದುಕಿದವರು…
ಈಗ ಹಾವೇರಿ ಲೋಕಾ ಟಿಕೆಟ್ ಮಗ ಕಾಂತೇಶ್ ಗೆ ಸಿಗದ ಕಾರಣಕ್ಕೆ ಬಿಜೆಪಿಯ ಹಿಂದೂ ಹುಲಿ ಹುಳಿ ಹುಳಿ ಮಾತಾಡುತ್ತಿದೆ.
ಇದಕ್ಕೆಲ್ಲ ಕಾರಣ ಯಡಿಯೂರಪ್ಪ ಎಂದು ಪತ್ರಕರ್ತರ ಮುಂದೆ ಹೇಳುವ ಮೂಲಕ ಬೇರೊಂದು ಸಮರಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ ಈಶ್ವರಪ್ಪ. ಆದರೆ, ಯಡಿಯೂರಪ್ಪರ ವಿರುದ್ಧ ಸೆಡ್ಡು ಹೊಡೆಯುವ ತಾಖತ್ತು ಈಶ್ವರಪ್ಪರಿಗಿಲ್ಲ.ಅವರದೇನಿದ್ದರೂ ಮೂರ್ನಾಲ್ಕು ಪತ್ರಿಕೆಗಳಲ್ಲಿ ನ್ಯೂಸ್ ಪ್ಲಾಂಟ್ ಮಾಡಿಸಿ, ಒಂದೆರಡು ಟಿವಿಗಳಲ್ಲಿ ಬುಕ್ಕಿಂಗ್ ಆಗಿರೋ ಮಾತಾಡಿ ಸುದ್ದಿಯಾಗೋದಷ್ಟೇ ಅಂತ ಚರ್ಚೆಗಳು.
ಈಶ್ವರಪ್ಪ ಮತ್ತು ಅವರ ಮಗ ಕಾಂತೇಶ್ ಬಿಜೆಪಿ ಹೈಕಮಾಂಡಿನ ನಿರ್ಧಾರದ ವಿರುದ್ಧ ಅಥವಾ ಯಡಿಯೂರಪ್ಪ ಪಾಳಯದ ವಿರುದ್ಧ ತೊಡೆ ತಟ್ಟಿದ್ದೇ ಆದರೆ ವಿರೋಧಿಗಳ ಮನೆ ಬಾಗಿಲಲ್ಲಿರುವ ಐಟಿ,ಇಡಿಗಳೆಲ್ಲ ಈಶ್ವರಪ್ಪರ ಮನೆ ಅಂಗಳದಲ್ಲೇ ಪ್ರತ್ಯಕ್ಷವಾಗುವ ಸಾಧ್ಯತೆಗಳಿವೆ.
ಯಡಿಯೂರಪ್ಪ ಈ ಡೇಟಾಗಳನ್ನೇ ಮುಂದಿಟ್ಟುಕೊಂಡು ಈ ಆಟ ಶುರು ಮಾಡಿದ್ದಾರಾ? ಅಥವಾ ಈಶ್ವರಪ್ಪರ ರಾಜಕಾರಣದ ಹೆಜ್ಜೆ ಗುರುತನ್ನೇ ಮುಗಿಸಿಬಿಡುವ ಪ್ರಯತ್ನದಲ್ಲಿ ಸಫಲತೆ ಕಂಡರಾ?!
ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದ ಸಂದರ್ಭ. ಆಗ ಒಂದು ಹಗರಣದ ಕಾರಣದಿಂದ ಜೈಲು ಸೇರುತ್ತಾರೆ.ಅವರನ್ನು ಸ್ನೇಹಿತನೋ, ತಮ್ಮ ನಾಯಕನೋ ಅಂತ ಆತಂಕದಿಂದ ಭೇಟಿ ಮಾಡಲೂ ಹೋಗದ ಈಶ್ವರಪ್ಪ ಒಂದು ದರ್ಪದ ಮಾತು ಹೇಳಿರುವುದು ಮಾಧ್ಯಮಗಳಲ್ಲಿ ಪ್ರಕಟವಾಗುತ್ತೆ-
*”ನಾನಾಗಿದ್ದರೆ ಆತ್ಮಹತ್ಯೆ ಮಾಡಿಕೊಳ್ತಿದ್ದೆ!”*
ಇದು ಈಗ ಉರುಳಾಗುತ್ತಿದೆಯಾ?