ಮಾ.15 ಕ್ಕೆ ಫಿಕ್ಸ್ ಆಯ್ತು ಈಶ್ವರಪ್ಪ ಬಂಡಾಯ?* *ಮಾರಮ್ಮನಿಗೆ ಈಶ್ವರಪ್ಪ-ಕಾಂತೇಶರನ್ನೇ ರಾಜಕೀಯ ಬಲಿ ಕೊಟ್ಟರಾ ಯಡಿಯೂರಪ್ಪ?*

*ಮಾ.15 ಕ್ಕೆ ಫಿಕ್ಸ್ ಆಯ್ತು ಈಶ್ವರಪ್ಪ ಬಂಡಾಯ?*

*ಮಾರಮ್ಮನಿಗೆ ಈಶ್ವರಪ್ಪ-ಕಾಂತೇಶರನ್ನೇ ರಾಜಕೀಯ ಬಲಿ ಕೊಟ್ಟರಾ ಯಡಿಯೂರಪ್ಪ?*

ಮಾ.15ರಂದು ಬಿಜೆಪಿ ಪ್ರಮುಖ ನಾಯಕ ತಮ್ಮ ಅಪಾರ ಬೆಂಬಲಿಗರ ಮುಂದೆಯೇ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕೆ.ಎಸ್.ಈಶ್ವರಪ್ಪ ತಾವು ಸ್ಪರ್ಧಿಸುತ್ತಿರುವುದನ್ನು ಘೋಷಣೆ ಮಾಡಲಿದ್ದಾರೆ. ಹಾಗೆಂದು, ಅವರ ಆಪ್ತ ಮೂಲಗಳು ಗಟ್ಟಿ ಧ್ವನಿಯಲ್ಲಿಯೇ ಹೇಳುತ್ತಿವೆ.

ಮಾ.15 ರಂದು ಶಿವಮೊಗ್ಗದ ಬಂಜಾರ ಸಮುದಾಯ ಭವನದಲ್ಲಿ ವಿಶೇಷ ಸಭೆ ಕರೆದುಕೊಂಡಿರುವ ಕೆ.ಎಸ್.ಈಶ್ವರಪ್ಪ , ಬಿಜೆಪಿ ಹೈಕಮಾಂಡ್ ಘೋಷಿಸಿರುವ ಎರಡನೇ ಲೋಕಾ ಪಟ್ಟಿಯಲ್ಲಿ ತಮ್ಮ ಮಗ ಕೆ.ಇ.ಕಾಂತೇಶ್ ಹೆಸರಿಲ್ಲದ್ದು ನೋಡಿ ಕೆಂಡಾಮಂಡಲರಾಗಿದ್ದಾರೆ. ಹೈ ಕಮಾಂಡಿನಿಂದ ಮನವೊಲಿಸಲು ಫೋನ್ ಕರೆಗಳು ಬರುತ್ತಿದ್ದರೂ ಈಶ್ವರಪ್ಪ ಅವುಗಳನ್ನು ಸ್ವೀಕರಿಸದೇ ತಮ್ಮ ಮಗನ ಜೊತೆ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆಂದು ತಿಳಿದು ಬಂದಿದೆ.

ಮಾ.15 ಶಿವಮೊಗ್ಗದ ರಾಜಕೀಯ ಚಿತ್ರಣವೇ ಬದಲಾಗುವ ನಿರ್ಧಾರವನ್ನು ಈಶ್ವರಪ್ಪ ತಾಳಲಿದ್ದಾರೆಂದು ಕೇಳಿಬರುತ್ತಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವತಃ ಕೆ.ಎಸ್.ಈಶ್ವರಪ್ಪ ರವರೇ ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸುವಂತೆ ಹೈಕಮಾಂಡ್ ಹೇಳಿತ್ತು. ಆಗ ಯಾವುದೇ ವಿರೋಧವಿಲ್ಲದೇ ತಲೆ ಅಲ್ಲಾಡಿಸಿದ್ದ ಈಶ್ವರಪ್ಪ, ತಮ್ಮ ಪರಮ ಶಿಷ್ಯ ಚೆನ್ನಿಯವರಿಗೆ ಟಿಕೇಟ್ ನೀಡಿದಾಗ ಇರುಸು ಮುರುಸಿಂದಲೇ ಚುನಾವಣೆ ನಡೆಸಿದ್ದರು. ಹೇಗೋ ಲೋಕಸಭೆಗಾದರೂ ತಮ್ಮ ಮಗನಿಗೆ ಹಾವೇರಿಯಿಂದ ಟಿಕೆಟ್ ಸಿಗುತ್ತಲ್ಲ ಎಂದು ಕನಸು ಕಂಡಿದ್ದರು.ಆದರೆ, ಆ ಕನಸಿಗೂ ಈಗ ಬಂಡೆಕಲ್ಲು ಬಿದ್ದಿದೆ. ಮಗನ ರಾಜಕೀಯ ಭವಿಷ್ಯ ಸಂಪೂರ್ಣವಾಗಿ ನಾಶವಾಗಿರುವುದನ್ನು ಈಶ್ವರಪ್ಪ ಸಹಿಸಿಕೊಳ್ಳದಾಗುತ್ತಿದ್ದಾರೆ. ಮಧ್ಯಾಹ್ನದವರೆಗೂ ತಮ್ಮ ಮಗನಿಗೇ ಟಿಕೆಟ್ ಸಿಗೋದು ಎಂಬ ಆಸೆಯಲ್ಲಿದ್ದ ಈಶ್ವರಪ್ಪ ಆಘಾತಕ್ಕೊಳಗಾಗಿದ್ದಾರೆ.

ಈ ಮೂಲಕ, ಒಂದು ಕಡೆ ಬಿ.ಎಸ್.ಯಡಿಯೂರಪ್ಪರ ಮಕ್ಕಳಿಗೆ ಉಜ್ವಲ ಭವಿಷ್ಯ ಕಲ್ಪಿಸುತ್ತಿರುವ ಬಿಜೆಪಿ ಹೈಕಮಾಂಡ್, ಕುರುಬ ನಾಯಕ, ಬಿಜೆಪಿಯ ನಿಷ್ಠಾವಂತ ಹಿರಿಯ ಕೆ.ಎಸ್.ಈಶ್ವರಪ್ಪ ಮಗನಿಗೆ ರಾಜಕೀಯವಾಗಿ ಸಂಪೂರ್ಣವಾಗಿ ಮುಗಿಸಿ ಹಾಕಿದೆ.

ಅಪ್ಪ ಈಶ್ವರಪ್ಪನಿಗೂ ರಾಜಕೀಯದಿಂದ ಹೊರಕ್ಕೆ ದಬ್ಬಿ, ತಾನೂ ಬೆಳೆಯದಂತೆ ಬಿಜೆಪಿ ಅದ್ಯಾವ ಮಟ್ಟದ ದ್ವೇಷದ ರಾಜಕಾರಣ ಮಾಡುತ್ತಿದೆ ಎಂಬುದು ಅರ್ಥವಾಗದೇ ಕಾಂತೇಶ್ ಪಿಳಿಪಿಳಿ ಕಣ್ಣುಬಿಟ್ಟುಕೊಂಡು ನೋಡುವಂತಾಗಿದೆ.

ಬಿಜೆಪಿ ಹೈಕಮಾಂಡ್ ಮೂಲಕ ಯಡಿಯೂರಪ್ಪರವರು ಈಶ್ವರಪ್ಪ ಮತ್ತವರ ಮಗ ಕಾಂತೇಶ್ ಗೆ ಮಾರಿಹಬ್ಬದ ಹರಕೆ ಕುರಿ ಮಾಡಿ ರಾಜಕೀಯವಾಗಿ ಬಲಿಕೊಟ್ಟಿದ್ದಾರೆ! ಹಾಗೆಂದು, ಈಶ್ವರಪ್ಪ ಬೆಂಬಲಿಗರ ಚರ್ಚೆ…

– *ಶಿ.ಜು.ಪಾಶ*
(13/3/24)