ಅಮಿತ್ ಶಾ ಡೆಲ್ಲಿ ಭೇಟಿ ನಿರಾಕರಣೆ; ಕೆ ಎಸ್ ಈ ಒಗ್ಗರಣೆ ಹೋಗು- ನಾಮಿನೇಷನ್ ಮಾಡು- ಗೆದ್ದು ಬಾ ಎಂಬುದೇ ಶಾ ಬಯಕೆ ಇರಬಹುದು; ಈಶ್ವರಪ್ಪ
ಅಮಿತ್ ಶಾ ಡೆಲ್ಲಿ ಭೇಟಿ ನಿರಾಕರಣೆ; ಕೆ ಎಸ್ ಈ ಒಗ್ಗರಣೆ
ಹೋಗು- ನಾಮಿನೇಷನ್ ಮಾಡು- ಗೆದ್ದು ಬಾ ಎಂಬುದೇ ಶಾ ಬಯಕೆ ಇರಬಹುದು; ಈಶ್ವರಪ್ಪ
ವಾಪಾಸ್ಸು ಹೋಗು, ನಾಮಪತ್ರ ಸಲ್ಲಿಸು, ಗೆದ್ದು ಬಾ ಎಂಬುವುದು ಉಕ್ಕಿನ ಮನುಷ್ಯ ಅಮಿತ್ ಶಾ ಅವರ ಬಯಕೆಯಾಗಿತ್ತು ಎಂದು ಕಾಣುತ್ತದೆ. ಹಾಗಾಗಿಯೇ ಅವರು ನನ್ನನ್ನು ಭೇಟಿಗೆ ಅವಕಾಶ ನೀಡಲಿಲ್ಲ. ಒಂದು ರೀತಿಯಲ್ಲಿ ಅವರು ಆಶೀರ್ವಾದ ಮಾಡಿದ್ದಾರೆ ಎಂದು ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಮಿತ್ ಶಾ ದೆಹಲಿಗೆ ಬರಲು ಹೇಳಿದ್ದರು ಅಷ್ಟು ದೊಡ್ಡವರು ಕರೆದಾಗ ಗೌರವ ಕೊಟ್ಟು ದೆಹಲಿಗೆ ಹೋದೆ. ರಾಜೇಶ್ ಜಿ ಅವರ ಮನೆಗೆ ತೆರಳಲು ಸೂಚಿಸಿದ್ದರು ನಾನು ದೆಹಲಿ ತಲುಪಿ ಅಮಿತ್ ಶಾ ಮನೆಗೆ ಫೋನ್ ಮಾಡಿದೆ ಫೋನ್ ಮೂಲಕ ಭೇಟಿ ಅವಶ್ಯಕತೆ ಇಲ್ಲ ಎಂದು ತಿಳಿಸಿದರು ವಾಪಸು ಮನೆಗೆ ಹೋಗಲು ತಿಳಿಸಿದರು ಈ ಮೂಲಕ ಶಿವಮೊಗ್ಗದಲ್ಲಿ ಸ್ಪರ್ಧೆ ಮಾಡಿ ಗೆಲ್ಲಲು ಎಂದು ಸೂಚನೆ ಸಿಕ್ಕಿದೆ ಎಂದರು.
ಕುಟುಂಬ ರಾಜಕಾರಣ ಕಾಂಗ್ರೆಸ್ ತರಹ ಕರ್ನಾಟಕದ ಬಿಜೆಪಿ ಪಕ್ಷದಲ್ಲಿದೆ ಮತ್ತು ಹಿಂದುತ್ವ ಪರವಾದ ನಾಯಕರನ್ನು ಮೂಲೆಗುಂಪು ಮಾಡಿದ್ದಾರೆ ನನ್ನ ಹಾಗೆ ಅನೇಕರಿಗೆ ಅನ್ಯಾಯವಾಗಿದೆ ಈ ಎಲ್ಲಾ ಪ್ರಶ್ನೆ ಗಳಿಗೆ ಅವರ ಬಳಿ ಉತ್ತರ ಇಲ್ಲ ಹಾಗಾಗಿ ಭೇಟಿಯಾಗದೆ ಸ್ಪರ್ಧೆ ಮಾಡಲು ಸೂಚನೆ ಸಿಕ್ಕಂತಾಗಿದೆ. ನಾನು ಸ್ಪರ್ಧೆ ಮಾಡಿ ಗೆದ್ದು ದೆಹಲಿಗೆ ತೆರಳಿ ಮೋದಿ ಪರವಾಗಿ ಕೈಎತ್ತುತ್ತೇನೆ ಎಂದರು.
ನನ್ನನ್ನು ಭೇಟಿಯಾಗದೆ ಅವರು ತೆಗೆದುಕೊಂಡ ತೀರ್ಮಾನ ರಾಜಕೀಯ ಚಾಣಾಕ್ಷನ ತೀರ್ಮಾನ ಸ್ವಾಗತಿಸುತ್ತೇನೆ. ಈ ಮೂಲಕ ನನಗೆ ಚುನಾವಣೆಯಲ್ಲಿ ಸ್ಪರ್ದೆ ಮಾಡಿ ಗೆಲ್ಲುವ ಸೂಚನೆ ಸಿಕ್ಕಂತಾಗಿದೆ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ವಿಜಯೇಂದ್ರ ರಾಜ್ಯದ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಅವರಿಗೆ ಸೋಲಿನ ಭೀತಿ ಶುರುವಾಗಿದೆ. ಗೊಂದಲ ಸೃಷ್ಠಿಸುವ ಹೇಳಿಕೆ ನೀಡಿದರೆ ವಿಜಯೇಂದ್ರಗೆ ಬೇರೆಯದೇ ಭಾಷೆಯಲ್ಲಿ ಉತ್ತರಿಸಬೇಕಾಗುತ್ತದೆ ಎಂದು ಆಕ್ರೋಶದಿಂದ ನುಡಿದರು.
ನಾನು ಗೀತಾ ಶಿವರಾಜ್ ಕುಮಾರ್ ಬಗ್ಗೆ ಹಗುರವಾಗಿ ಮಾತನಾಡುತ್ತಿಲ್ಲ. ಅವರು ನನ್ನ ಸಹೋದರಿ ಇದ್ದಂತೆ ಮಧು ಬಂಗಾರಪ್ಪ ಮನಸ್ಸು ಮುಟ್ಟಿಕೊಂಡು ಹೇಳಲಿ ಶಿಕಾರಿಪುರದಲ್ಲಿ ಯಡಿಯೂರಪ್ಪ ಹೊಂದಾಣಿಕೆ ರಾಜಕಾರಣ ಮಾಡಲಿಲ್ಲವೇ ಎಂದು ಪ್ರಶ್ನೆ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವಿಶ್ವಾಸ್, ಕಾಂಚಿನಕಟ್ಟೆ ಸತ್ಯನಾರಾಯಣ, ಸುವರ್ಣ ಶಂಕರ್, ಆರತಿ ಅ.ಮಾ.ಪ್ರಕಾಶ್, ಮಹಾಲಿಂಗಶಾಸ್ತ್ರಿ, ಭೂಪಾಲ್, ಶ್ರೀಪಾಲ್, ಲಕ್ಷ್ಮೀಶಂಕರನಾಯಕ, ಜಾಧವ್, ಅನಿತಾ, ಸತೀಶ್, ಉಮಾಮೂರ್ತಿ, ರೇಖಾ, ಲಕ್ಷ್ಮೀದೇವಿ, ರಾಧರಾಮಚಂದ್ರ, ಚಿದಾನಂದ್, ಮಹೇಶ್, ಪ್ರಕಾಶ್ ಸೇರಿದಂತೆ ಹಲವರಿದ್ದರು.