ನೈರುತ್ಯ ಪದವೀಧರ ಕ್ಷೇತ್ರ; ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ಎಸ್.ಪಿ.ದಿನೇಶ್ ಡಿಕೆಶಿ, ಸುರ್ಜೀವಾಲಾ, ಮಯೂರ್ ಜಯಕುಮಾರ್,ಮಂಜುನಾಥ ಭಂಡಾರಿ, ಆರ್.ಪ್ರಸನ್ನ ಕುಮಾರ್, ಕಲಗೋಡು ರವರೆಲ್ಲ ಕನ್ವಿನ್ಸ್ ಮಾಡಲು ಪ್ರಯತ್ನಿಸಿದ್ದು ನಿಜ. ಆದರೆ, ಜಿಲ್ಲಾ ಮಂತ್ರಿಗಳು ಸಂಪರ್ಕಿಸಿಲ್ಲ ಎಂದ ಎಸ್.ಪಿ.ದಿನೇಶ್

ನೈರುತ್ಯ ಪದವೀಧರ ಕ್ಷೇತ್ರ;

ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ಎಸ್.ಪಿ.ದಿನೇಶ್

ಡಿಕೆಶಿ, ಸುರ್ಜೀವಾಲಾ, ಮಯೂರ್ ಜಯಕುಮಾರ್,ಮಂಜುನಾಥ ಭಂಡಾರಿ, ಆರ್.ಪ್ರಸನ್ನ ಕುಮಾರ್, ಕಲಗೋಡು ರವರೆಲ್ಲ ಕನ್ವಿನ್ಸ್ ಮಾಡಲು ಪ್ರಯತ್ನಿಸಿದ್ದು ನಿಜ. ಆದರೆ, ಜಿಲ್ಲಾ ಮಂತ್ರಿಗಳು ಸಂಪರ್ಕಿಸಿಲ್ಲ ಎಂದ ಎಸ್.ಪಿ.ದಿನೇಶ್

ನೈರುತ್ಯ ಪದವೀಧರ ಕ್ಷೇತ್ರಕ್ಕೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹಿರಿಯ ಕಾಂಗ್ರೆಸ್ಸಿಗರಾದ ಎಸ್.ಪಿ.ದಿನೇಶ್, ತಮ್ಮನ್ನು ಕಾಂಗ್ರೆಸ್ಸಿನ ಹಿರಿಯರೆಲ್ಲ ಸಂಪರ್ಕಿಸಿ ನಾಮಪತ್ರ ವಾಪಸ್ ಪಡೆಯಲು ಮನವಿ ಮಾಡಿದ್ದು ನಿಜ. ಆದರೆ, ಜಿಲ್ಲಾ ಮಂತ್ರಿಗಳಾದ ಮಧು ಬಂಗಾರಪ್ಪರವರು ನನಗೆ ಸಂಪರ್ಕಿಸಿ ನಾಮಪತ್ರ ವಾಪಸ್ ಪಡೆಯಲು ಒತ್ತಾಯಿಸಿದರೆಂಬ ಮಾತು ಸುಳ್ಳು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಮಲೆನಾಡು ಎಕ್ಸ್ ಪ್ರೆಸ್.ಕಾಂ ನಲ್ಲಿ ಪ್ರಕಟವಾಗಿರುವ ಸುದ್ದಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಬಂಡಾಯ ಅಭ್ಯರ್ಥಿ ಎಸ್.ಪಿ.ದಿನೇಶ್, ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಸ್ಪರ್ಧಿಸಲು ಹಾಕಿರುವ ನಾಮಪತ್ರ ವಾಪಸ್ ಪಡೆಯಲು ಕೆಪಿಸಿಸಿ ಅಧ್ಯಕ್ಷರೂ ಡಿಸಿಎಂ ಡಿಕೆ ಶಿವಕುಮಾರ್, ಕರ್ನಾಟಕದ ಉಸ್ತುವಾರಿ ಸುರ್ಜೀವಾಲಾ, ಎಐಸಿಸಿಯ ಮಂಜುನಾಥ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಪ್ರಸನ್ನ ಕುಮಾರ್, ಕಲಗೋಡು ರತ್ನಾಕರ್ ಮನವಿ ಮಾಡಿದರು. ಮುಖ್ಯವಾಗಿ ಎಐಸಿಸಿಯ ಮಯೂರ್ ಜಯಕುಮಾರ್ ರವರು ಮನೆಗೇ ಆಗಮಿಸಿ ಗೌರವ ತೋರಿ ಮಾತಾಡಿದರು. ನಾನು ಅವರೆಲ್ಲರ ಕ್ಷಮೆ ಕೋರಿ, ಸ್ಪರ್ಧಿಸುವುದು ಖಚಿತ ಎಂದು ತಿಳಿಸಿದ್ದೇನೆ ಎಂದರು.

ಎಲ್ಲ ಮುಖಂಡರಿಗೂ ಕ್ಷಮೆ ಕೋರಿಯೇ ನನ್ನ ನೋವುಗಳನ್ನು ಅವರಲ್ಲಿ ಹೇಳಿಕೊಂಡಿದ್ದೇನೆ. ಕಳೆದ ಎರಡು ತಿಂಗಳುಗಳ ಹಿಂದೆಯೇ ಪಕ್ಷದಿಂದ ಟಿಕೇಟ್ ಘೋಷಣೆಯಾದರೂ ಕೊನೆಯ ಕ್ಷಣದವರೆಗೂ ಸಂಬಂಧಪಟ್ಟವರು ಮಾತಾಡದೇ ನಿರ್ಲಕ್ಷ್ಯಿಸಿದರು. ಹಾಗಾಗಿ, ಸ್ಪರ್ಧೆ ಮಾಡುವ ತೀರ್ಮಾನಕ್ಕೆ ಬಂದಿದ್ದೇನೆ. ನಿಮ್ಮೆಲ್ಲರ ಪ್ರೀತಿಗೆ ಆಭಾರಿ…ನನ್ನ ಕೊನೆ ಕ್ಷಣದ ಈ ನಿರ್ಧಾರದ ಹಿಂದೆ ಬಹಳ ನೋವಿದೆ ಎಂದು ಕಾಂಗ್ರೆಸ್ ಹಿರೀಕರಿಗೆ ಹೇಳಿದ್ದೇನೆ ಎಂದು ಎಸ್ ಪಿ ದಿನೇಶ್ ರವರು ಸ್ಪಷ್ಟೀಕರಿಸಿದ್ದಾರೆ.

ಸ್ಪರ್ಧೆಯಿಂದ ಹಿಂದೆ ಬರದೇ ಖಚಿತ ಸ್ಪರ್ಧೆ ಮಾಡುವೆ ಎಂದಿದ್ದಾರೆ.