ಪಂಚಾಯ್ತಿ ಎಲೆಕ್ಷನ್ ಸಂಬಂಧ ಕೊಲೆ;* *ಕುಮಾರ ನಾಯ್ಕನಿಗೆ ಜೀವಾವಧಿ ಶಿಕ್ಷೆ*

*ಪಂಚಾಯ್ತಿ ಎಲೆಕ್ಷನ್ ಸಂಬಂಧ ಕೊಲೆ;*
*ಕುಮಾರ ನಾಯ್ಕನಿಗೆ ಜೀವಾವಧಿ ಶಿಕ್ಷೆ*

ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಹೊಳೆಬೆನವಳ್ಳಿ ದೊಡ್ಡ ತಾಂಡಾದ ಕುಮಾರ ನಾಯ್ಕನಿಗೆ ಜೀವಾವಧಿ ಶಿಕ್ಷೆ, 23,500₹ ದಂಡ ಹಾಗೂ ದಂಡ ಕಟ್ಟಲು ವಿಫಲವಾದಲ್ಲಿ ಹೆಚ್ಚುವರಿ 3 ವರ್ಷ ಸಾದಾ ಸಜೆ ವಿಧಿಸಿ ಶಿವಮೊಗ್ಗದ ಘನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಬಿ.ಆರ್.ಪಲ್ಲವಿ ಆದೇಶ ಹೊರಡಿಸಿದ್ದಾರೆ.

2017ರ ಮೇ 5 ರಂದು ಮಹೇಶನಾಯ್ಕ ಎಂಬಾತನನ್ನು ಪಂಚಾಯಿತಿ ಚುನಾವಣೆಗೆ ಸಹಕರಿಸಲಿಲ್ಲವೆಂದು ದ್ವೇಷ ಬೆಳೆಸಿಕೊಂಡಿದ್ದ ಕುಮಾರ ನಾಯ್ಕ ಮತ್ತು ಗ್ಯಾಂಗ್ ಹೊಳೆಬೆನವಳ್ಳಿ ಚಾನಲ್ ಹತ್ತಿರ ಅಡ್ಡಗಟ್ಟಿ ಹರಿತ ಆಯುಧದಿಂದ ಕುತ್ತಿಗೆ ಮತ್ತು ಮೈ ಕೈಗೆ ಚುಚ್ಚಿ ಕೊಲೆ ಮಾಡಿದ್ದರು.

ಈ ಸಂಬಂಧ ಕೊಲೆಯಾದ ಮಹೇಶ ನಾಯ್ಕನ ಪತ್ನಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರ ಹಿನ್ನೆಲೆಯಲ್ಲಿ ಪೊಲೀಸರು 0175/17 ರಂತೆ ಕಲಂ 149, 302 ರಂತೆ ಮೊಕದ್ದಮೆ ದಾಖಲಿಸಿಕೊಂಡಿದ್ದರು.

ಈ ಪ್ರಕರಣದ ತನಿಖಾಧಿಕಾರಿಯಾಗಿ ಆಗಿನ ಗ್ರಾಮಾಂತರ ವೃತ್ತದ ಸಿಇಐ ಲೋಕೇಶ್ ತನಿಖೆ ಕೈಗೊಂಡು ಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಶ್ರೀಮತಿ ಪುಷ್ಪಾವತಿ ಪ್ರಕರಣದಲ್ಲಿ ವಾದ ಮಂಡಿಸಿದ್ದರು.