ಓಸಿ ಕೇಡಿಗಳನ್ನು ಸದೆ ಬಡಿಯುತ್ತಿರುವ ಎಸ್ ಪಿ ಮಿಥುನ್ ಕುಮಾರ್ ಮತ್ತವರ ತಂಡ ಹೊಸ ಓಸಿ ಬಿಡ್ಡರ್ ಗಳಾದ ಸುಧಾಕರ, ರಾಜ್ ಬಾಬು, ಸದ್ದು, ಕ್ಲರ್ಕ್ ಪೇಟೆ ನಜೀರ್, ಕಾಳೂರಾಂ ಮಗ ಪ್ರವೀಣ, ಕುಂಸಿ ಕಡೆಯ ಅನಿಲ್, ಹೇಮಂತ, ವಿಶ್ವ, ವಿನಯ್, ಅನಿ ಮತ್ತು ಸುನಿಗಳ ಚೆಡ್ಡಿ ಚೀಲ ಹಸಿ ಮಾಡುತ್ತಾರೆಂಬ ನಿರೀಕ್ಷೆಯಲ್ಲಿ…ಓಸಿ ಮಟ್ಕಾ ಜೂಜಾಟ ಮಾಫಿಯಾ-ಭಾಗ-2ಪೊಲೀಸರೇ, ಇವರನ್ನೂ ಸದೆಬಡೀರಿ…

ಓಸಿ ಮಟ್ಕಾ ಜೂಜಾಟ ಮಾಫಿಯಾ-ಭಾಗ-2

ಪೊಲೀಸರೇ, ಇವರನ್ನೂ ಸದೆಬಡೀರಿ…

ಓಸಿ ಮಾಫಿಯಾದ ಡಾನ್ ಸಂದೀಪ ನೆಪ ಮಾತ್ರಕ್ಕೆ ಓಸಿ ಜಗತ್ತಿಗೆ ನಿವೃತ್ತಿ ಘೋಷಿಸಿದ್ದೇ ತಡ ಹಲವು ಓಸಿ ಸರ್ಪಗಳು ಮಟ್ಕಾ ಜೂಜಾಟಕ್ಕೆ ಬಿದ್ದ ಜನರ ಹಣ ಹೀರಲು ಹೆಡೆ ಎತ್ತಿ ಅದಾಗಲೇ ನಿಂತು ಬಿಟ್ಟಿವೆ.

ಶಿವಮೊಗ್ಗದ ‘ದೇಶ ಕುಖ್ಯಾತ’ ಹುಣಸೋಡು ಸ್ಫೋಟ ಘಟನೆಗೆ ಸಂಬಂಧಿಸಿದಂತೆ ಜೈಲು ಸೇರಿ ಸುಮಾರು ವರ್ಷಗಳ ಕಾಲ ಕಂಬಿ ಎಣಿಸಿ ಮುದ್ದೆ ಮುರಿದಿದ್ದ ಹಳೇ ಓಸಿ ಡಾನ್ ಸುಧಾಕರ್ ಕೂಡ ಓಸಿ ಮಾಫಿಯಾದಲ್ಲಿ ಅದಾಗಲೇ ಕ್ರಿಯಾಶೀಲನಾಗಿದ್ದಾನೆ!

ಜೈಲಿಂದ ಹೊರಕ್ಕೆ ಬಂದ ಕೂಡಲೇ ಓಸಿ ಮಟ್ಕಾ ಜೂಜಾಟದ ತನ್ನ ಹಳೇ ದಂಧೆ ಕಡೆ ಹೊರಳಿದ ಸುಧಾಕರ್, ಈಗಾಗಲೇ ಓಸಿ ಚೀಟಿ ಸಂಗ್ರಹಿಸುವ ಹುಡುಗರ ಪಡೆ ಕಟ್ಟಿಕೊಂಡು ಓಸಿ ಬಿಡ್ಡರ್ ಆಗಿ ಗುರುತಿಸಿಕೊಂಡಿದ್ದಾನೆ.

ಈ ಮಧ್ಯೆ ಸಂದೀಪ ನಿವೃತ್ತಿ ಘೋಷಿಸಿರುವುದು ಸುಧಾಕರಿಗೆ ಹಾಲು ಕುಡಿದಷ್ಟೇ ಸಂತೋಷ ಉಂಟು ಮಾಡಿದಂತಿದೆ. ಸಂದೀಪನೂ ಸುಧಾಕರನಿಗೆ ತನ್ನ ಓಸಿ ಚೀಟಿ ಹುಡುಗರನ್ನು ದಾನ ಮಾಡಿದ್ದಾನೆಂಬ ಪುಕಾರುಗಳಿವೆ.

ಶಿವಮೊಗ್ಗ ನಗರವನ್ನು ಸಂದೀಪನೇ ಸುಧಾಕರನಿಗೆ ಬಿಟ್ಟುಕೊಟ್ಟಿದ್ದಾನಾ? ಸುಧಾಕರನ ಜೊತೆ ಈಗ ಶಿವಮೊಗ್ಗದ ಓಸಿ ಜಗತ್ತಿನಲ್ಲಿ ಹರಿದಾಡುತ್ತಿರುವ ಹಾವುಗಳು ರಾಜ್ ಬಾಬು, ಸದ್ದು, ಕ್ಲರ್ಕ್ ಪೇಟೆ ನಜೀರ್ ಮತ್ತು ಕುಖ್ಯಾತ ಕಾಳೂರಾಮನ ಮಗ ಪ್ರವೀಣ. ಶಿವಮೊಗ್ಗ ನಗರದ ಓಸಿ ಮಾಫಿಯಾದೊಳಗೆ ಈ ಪಂಚ ಹಾವುಗಳು ಸಳ ಸಳ ಸದ್ದು ಮಾಡುತ್ತಿವೆ. ಶಿವಮೊಗ್ಗ ನಗರದ ಓಸಿ ಮಾಫಿಯಾಕ್ಕೆ ಈ ಐದು ಜನರೇ ಸದ್ಯದ ಡಾನ್ ಗಳು!

ಈ ಐವರಲ್ಲಿ ಸುಧಾಕರನದು ಒಂದು ಕಥೆಯಾದರೆ, ರಾಜ್ ಬಾಬುದು ಮತ್ತೊಂದು ರೀತಿಯ ಕಥೆ. ಒಳಗೊಳಗೇ ಓಸಿ ಬಿಡ್ಡರ್ ಆಗಿ ಕುಳಿತ ಈತ ಸಂದೀಪನ ಅತ್ಯಾಪ್ತ ಎಂದೇ ಹೇಳಲಾಗುತ್ತಿದೆ. ಕೆಲವು ತಿಂಗಳ ಹಿಂದೆ ದೊಡ್ಡಪೇಟೆ ಪೊಲೀಸರು ಈತನಿದ್ದ ಜಾಗದ ಮೇಲೆ ದಾಳಿ ಮಾಡಿದಾಗ ರಾಜ್ ಬಾಬು ಪರಾರಿಯಾಗಿ ಆತನ ಮಗ ಮತ್ತು ಗ್ಯಾಂಗ್ ಸಿಕ್ಕಿಬಿದ್ದಿತ್ತು. ಪೊಲೀಸರು ಕೇಸು ಜಡಿದಿದ್ದರು. ಎರಡು ಲಕ್ಷ ವಶಕ್ಕೆ ಪಡೆದು 420 ಕೇಸು ಜಡಿದರೆಂದು ಪೊಲೀಸ್ ಇಲಾಖೆ ಮೂಲಗಳೇ ತಿಳಿಸುತ್ತವೆ.ಪೊಲೀಸರ ಲಾಠಿ ರುಚಿಯಿಂದ ತಪ್ಪಿಸಿಕೊಂಡಿದ್ದ ರಾಜ್ ಬಾಬು ಓಸಿ ಬಿಡ್ಡರ್ ಗಿರಿ ಮುಂದುವರೆಸಿಯೇ ಇದ್ದಾನೆ.

ಇದು ಶಿವಮೊಗ್ಗ ನಗರದ ಓಸಿ ಮಾಫಿಯಾ ಆದರೆ, ಕೆಲವೊಂದು ಬಡಾವಣೆಗಳಲ್ಲೂ ಓಸಿ ಡಾನ್ ಗಳು ಹುಟ್ಟಿಕೊಂಡಿದ್ದಾರೆ. ಅನಿಲ್ ಎಂಬಾತ ಆಯನೂರು, ಕುಂಸಿಗಳಲ್ಲಿ ಓಸಿ ಬಿಡ್ಡರ್ ಆಗಿ ಸಕ್ರಿಯನಾಗಿದ್ದಾನೆ.

ಇನ್ನು ಶಿವಮೊಗ್ಗ ನಗರವನ್ನೇ ಅಂಟಿಕೊಂಡಿರುವ ವಿನೋಬ ನಗರವನ್ನು ಹೇಮಂತ್, ವಿಶ್ವ, ವಿನಯ್ ಓಸಿ ಜಗತ್ತನ್ನು ಆಳುತ್ತಿದ್ದಾರೆ. ಇವರಿಗೆಲ್ಲ ಈ ಓಸಿ ಸಿಂಹಾಸನ ಕೊಟ್ಟಿದ್ದು ಸಂದೀಪನೇ. ಹಾಗೆಯೇ, ಬೊಮ್ಮನಕಟ್ಟೆಯಲ್ಲಿ ಅನಿ ಮತ್ತು ಸುನಿ ಓಸಿ ಬಿಡ್ಡರ್ ಆಗಿ ಅದಾಗಲೇ ಕುಖ್ಯಾತರಾಗಿದ್ದಾರೆ.

ಒಂದು ಕಡೆ ಓಸಿ ಲೋಕದಿಂದ ನಿವೃತ್ತನಾದ ಸಂದೀಪ, ಇನ್ನೊಂದು ಕಡೆ ಇವರೆಲ್ಲರ ಓಸಿ ಪಟ್ಟಿ ತೆಗೆದುಕೊಳ್ಳದೇ, ಯಾವುದಕ್ಕೂ ರೆಸ್ಪಾನ್ಸ್ ಕೊಡದೇ ಕುಳಿತಿರುವ ಶನ್ನು- ಹಾಗಾದರೆ, ಅಕಾರಿ ಪ್ರಕಾಶನೇ ಸದ್ಯಕ್ಕೆ ಡಾನ್ ಆಗಿದ್ದಾನಾ? ಅಥವಾ ಸಂದೀಪನೇ ಇವರನ್ನೆಲ್ಲ ಮುನ್ನೆಲೆಗೆ ಬಿಟ್ಟು ಹಿಂದೆ ಸರಿದಂತೆ ನಾಟಕವಾಡುತ್ತಿದ್ದಾನಾ?

ಓಸಿ ಕೇಡಿಗಳನ್ನು ಸದೆ ಬಡಿಯುತ್ತಿರುವ ಎಸ್ ಪಿ ಮಿಥುನ್ ಕುಮಾರ್ ಮತ್ತವರ ತಂಡ ಹೊಸ ಓಸಿ ಬಿಡ್ಡರ್ ಗಳಾದ ಸುಧಾಕರ, ರಾಜ್ ಬಾಬು, ಸದ್ದು, ಕ್ಲರ್ಕ್ ಪೇಟೆ ನಜೀರ್, ಕಾಳೂರಾಂ ಮಗ ಪ್ರವೀಣ, ಕುಂಸಿ ಕಡೆಯ ಅನಿಲ್, ಹೇಮಂತ, ವಿಶ್ವ, ವಿನಯ್, ಅನಿ ಮತ್ತು ಸುನಿಗಳ ಚೆಡ್ಡಿ ಚೀಲ ಹಸಿ ಮಾಡುತ್ತಾರೆಂಬ ನಿರೀಕ್ಷೆಯಲ್ಲಿ….