*ನಕಲಿ ಸಿಬಿಐ ಅಧಿಕಾರಿಗಳನ್ನು ಬಂಧಿಸಿದ ಶಿವಮೊಗ್ಗದ ಪೊಲೀಸರು…**ಗೋಪಾಳದ 72 ವರ್ಷ ವಯಸ್ಸಿನ ಆನಂದ್ ರಿಗೆ ಹೆದರಿಸಿ 41 ಲಕ್ಷ ಪೀಕಿದ್ದರು!*
*ನಕಲಿ ಸಿಬಿಐ ಅಧಿಕಾರಿಗಳನ್ನು ಬಂಧಿಸಿದ ಶಿವಮೊಗ್ಗದ ಪೊಲೀಸರು…*
*ಗೋಪಾಳದ 72 ವರ್ಷ ವಯಸ್ಸಿನ ಆನಂದ್ ರಿಗೆ ಹೆದರಿಸಿ 41 ಲಕ್ಷ ಪೀಕಿದ್ದರು!*
ವಯೋವೃದ್ಧರೊಬ್ಬರಿಗೆ ಸಿಬಿಐ ಅಧಿಕಾರಿ ಎಂದು ಹೇಳಿ ವೀಡಿಯೋ ಕಾಲ್ ಮಾಡಿ, ಅಕ್ರಮ ಹಣ ವರ್ಗಾವಣೆಯ ಕಥೆ ಹೇಳಿ ಒಟ್ಟು 41 ಲಕ್ಷ ರೂ.,ಗಳನ್ನು ಪೀಕಿದ್ದ ಉತ್ತರ ಪ್ರದೇಶ ಮೂಲದ ಇಬ್ಬರನ್ನು ಬೇಟೆಯಾಡಿ 23.89 ಲಕ್ಷ ರೂ.,ಗಳನ್ನು ವಸೂಲು ಮಾಡಿರುವ ಘಟನೆ ಶಿವಮೊಗ್ಗದ ಸಿಇಎನ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಉತ್ತರ ಪ್ರದೇಶ ಮೂಲದ ಮೊಹಮ್ಮದ್ ಅಹಮದ್ ಮತ್ತು ಅಭಿಷೇಕ್ ಕುಮಾರ್ ಶೇಠ್ ಬಂಧಿತ ಆರೋಪಿಗಳು.
*ಪೊಲೀಸ್ ಪ್ರಕಟಣೆಯಲ್ಲಿರುವ ವಿವರ ಇಲ್ಲಿದೆ*
ದಿನಾಂಕಃ 27-09-2024 ರಂದು *ಎಲ್.ಎಸ್ ಆನಂದ್, 72 ವರ್ಷ, ಗೋಪಾಳ, ಶಿವಮೊಗ್ಗ* ರವರಿಗೆ, *ಅಪರಿಚಿತ ವ್ಯಕ್ತಿಯು ಸಿ.ಬಿ.ಐ ಅಧಿಕಾರಿ ಎಂದು ಹೇಳಿ ವಿಡಿಯೋ ಕಾಲ್ ಮಾಡಿ* ನಿಮ್ಮ ಆದಾರ್ ಕಾರ್ಡ್ ಸಂಖ್ಯೆಯಲ್ಲಿ ದೊಡ್ಡ ಮಟ್ಟದ *ಹಣವು ಅಕ್ರಮವಾಗಿ ವರ್ಗಾವಣೆಯಾಗಿದ್ದರಿಂದ* ನಿಮ್ಮ ಮೇಲೆ ದೂರು ದಾಖಲಾಗಿದ್ದು ನಿಮ್ಮನ್ನು *ಅರೆಸ್ಟ್ ಮಾಡಲು ವಾರೆಂಟ್ ಜಾರಿ* ಆಗಿ ನಿಮ್ಮ ಎಲ್ಲಾ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿದ್ದು ನೀವು ಇದರಿಂದ ಹೊರ ಬರಬೇಕಾದರೇ ನಾವು ಹೇಳಿದ ಖಾತೆಗೆ ಹಣ ವರ್ಗಾವಣೆ ಮಾಡಬೇಕೆಂದು ತಿಳಿಸಿ ಪಿರ್ಯಾದಿಯವರಿಂದ ಒಟ್ಟು *41 ಲಕ್ಷ ರೂ* ಗಳನ್ನು ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದು, ಈ ಬಗ್ಗೆ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆ *ಗುನ್ನೆ ಸಂಖ್ಯೆ: 0111/24 ಕಲಂ 66(ಡಿ) ಐಟಿ ಆಕ್ಟ್ & 111,318(4), 319(2) ಬಿ.ಎನ್.ಎಸ್* ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.
ಸದರಿ ಪ್ರಕರಣದಲ್ಲಿ ಆರೋಪಿತರ ಪತ್ತೆಗಾಗಿ *ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್,* ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, *ಶ್ರೀ ಅನಿಲ್ ಕುಮಾರ್ ಭೂಮ್ ರಡ್ಡಿ* ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-01 ಮತ್ತು *ಶ್ರೀ ಕಾರಿಯಪ್ಪ ಎ, ಜಿ,* ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-02 ಮಾರ್ಗದರ್ಶನದಲ್ಲಿ, *ಶ್ರೀ ಕೃಷ್ಣಮೂರ್ತಿ ಕೆ ಡಿ.ವೈ.ಎಸ್ಪಿ. ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆ ಶಿವಮೊಗ್ಗ ಮೇಲ್ವಿಚಾರಣೆಯಲ್ಲಿ, ಶ್ರೀ ಮಂಜುನಾಥ ಪಿ.ಐ ರವರ ನೇತೃತ್ವದ ಶೇಖರ ಎ.ಎಸ್.ಐ ಮತ್ತು ಸಿಬ್ಬಂದಿಗಳಾದ ಆರ್ ವಿಜಯ್ ಹೆಚ್.ಸಿ, ರವಿ ಬಿ ಸಿಪಿಸಿ ಮತ್ತು ಶರತ್ ಕುಮಾರ್ ಬಿ.ಎಸ್ ಸಿಪಿಸಿ* ರವರುಗಳನ್ನು ಒಳಗೊಂಡ *ತನಿಖಾ ತಂಡವನ್ನು* ರಚಿಸಲಾಗಿರುತ್ತದೆ.
ಸದರಿ ತನಿಖಾ ತಂಡವು ದಿನಾಂಕ: 12-11-2024 ರಂದು ಪ್ರರಕಣದ ಆರೋಪಿಗಳಾದ *1) ಮೊಹಮ್ಮದ್ ಅಹಮದ್, 45 ವರ್ಷ, ವಲಿದಪುರ ನಗರ, ಜಿ.ಎನ್ ಪುರ ಮಾರ್ಗ, ಮೌನಾತ್ ಬಂಜನ್ ಜಿಲ್ಲೆ, ಉತ್ತರ ಪ್ರದೇಶ ಮತ್ತು 2) ಅಭಿಶೇಕ್ ಕುಮಾರ್ ಶೇಟ್, 27 ವರ್ಷ, ಮೊಹುಡಿಯಾ ಗ್ರಾಮ, ಅಜಂಗಡ ಜಿಲ್ಲೆ, ಉತ್ತರ ಪ್ರದೇಶ* ಇವರನ್ನು ದಸ್ತಗಿರಿ ಮಾಡಿ ಆರೋಪಿತರಿಂದ ಒಟ್ಟು 23,89,751/- ರೂ ಹಣವನ್ನುಅಮಾನತ್ತುಪಡಿಸಿಕೊಂಡಿರುತ್ತಾರೆ.
ಸದರಿ ತನಿಖಾ ತಂಡದ *ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ* ಅಭಿನಂದಿಸಿರುತ್ತಾರೆ.