ಕೇರಳ ರಾಜ್ಯದ ಕಾಸರಗೋಡು ಕನ್ನಡ ಭವನದ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಡಾ. ಕೆ .ಜಿ. ವೆಂಕಟೇಶ್ ಆಯ್ಕೆ
ಕೇರಳ ರಾಜ್ಯದ ಕಾಸರಗೋಡು ಕನ್ನಡ ಭವನದ
ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಡಾ. ಕೆ .ಜಿ. ವೆಂಕಟೇಶ್ ಆಯ್ಕೆ
ಶಿವಮೊಗ್ಗ
ಕೇರಳ ರಾಜ್ಯದ ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯದ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಡಾ. ಕೆ.ಜಿ. ವೆಂಕಟೇಶ್ ಅವರನ್ನು ಆಯ್ಕೆ ಮಾಡಲಾಗಿದೆ.
ಕನ್ನಡ ಭವನ ಮತ್ತು ಗ್ರಂಥಾಲಯಕ್ಕೆ 25 ವರ್ಷ ತುಂಬಿದ್ದು ಅದಕ್ಕಾಗಿ ಈ ಸಂಸ್ಥೆಯ ಜಿಲ್ಲಾ ಘಟಕವನ್ನು ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಕಾರ್ಯಕ್ರಮಗಳನ್ನು ಮಾಡುವ ಸಲುವಾಗಿ ಸ್ಥಾಪಿಸಲಾಗಿದೆ.
ಕೇರಳ ರಾಜ್ಯದ ಕಾಸರಗೋಡಿನಲ್ಲಿ 25 ವರ್ಷದ ಹಿಂದೆ ಕನ್ನಡ ಭವನ ಮತ್ತು ಗ್ರಂಥಾಲಯವನ್ನು
ಡಾ. ವಾಮನರಾವ್ ಬೇಕಲ್ ರವರು ಸ್ಥಾಪಿಸಿದ್ದು, ಈ ಭವನದಲ್ಲಿ 15 ಸಾವಿರಕ್ಕೂ ಹೆಚ್ಚು ಅಧ್ಯಯನ ಯೋಗ್ಯವಾದ ಗ್ರಂಥಗಳಿದ್ದು ಅದನ್ನು ಸಂಶೋಧನಾರ್ಥಿಗಳಿಗೆ ಓದಲು ಅವಕಾಶ ಮಾಡಿಕೊಟ್ಟು ಪರಸ್ಥಳದವರು ಅಧ್ಯಯನಕ್ಕೆ ಬಂದರೆ ಕಾಸರಗೋಡಿನಲ್ಲಿ ಇರಲು ಉಚಿತವಾಗಿ ರೂಮಿನ ವ್ಯವಸ್ಥೆಯನ್ನು ಈ ಕನ್ನಡ ಭವನ ಮಾಡುತ್ತಿತ್ತು.
25 ವರ್ಷಗಳ ಕಾಲ ನಿರಂತರವಾಗಿ ಈ ಕಾರ್ಯವನ್ನು ಸರ್ಕಾರದ ನೆರವಿಲ್ಲದೆ ಡಾ.ವಾಮನ್ ರಾವ್ ಬೇಕಲ್ ಮತ್ತು ಅವರ ಧರ್ಮಪತ್ನಿಯಾದ ಸಂಧ್ಯಾ ರಾಣಿ ಟೀಚರ್ ರವರು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.
25 ವರ್ಷಗಳಿಂದ ಕೂಡ ಕಾಸರಗೋಡಿನಲ್ಲಿರುವ ಕನ್ನಡಿಗರನ್ನು ಮತ್ತು ಇತರರಾಜ್ಯದ ಕನ್ನಡಿಗ ವಿದ್ಯಾರ್ಥಿಗಳನ್ನು ಸಂಘಟಿಸಿ ಕನ್ನಡ ಭಾಷೆಯ ಅನೇಕ ಸ್ಪರ್ಧೆಗಳನ್ನು ಮಾಡಿ ಬಹುಮಾನವನ್ನು ನೀಡಲಾಗುತ್ತಿದೆ.
ಪ್ರಬಂಧ ಸ್ಪರ್ಧೆ ಚಿತ್ರ ರಚನಾ ಸ್ಪರ್ಧೆ ಕವಿಗೋಷ್ಠಿ, ಕಥಾ ಗೋಷ್ಠಿ ,ಕಥೆ ಮತ್ತು ಕವನ ಬರೆಯುವ ಸ್ಪರ್ಧೆ ನಡೆಸಲಾಗುತ್ತದೆ. ವಿದ್ವಾಂಸರನ್ನು ಗುರುತಿಸಿ ಅವರಿಗೆ ಕನ್ನಡ ಪಯಸ್ವಿನಿ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡುತ್ತಾ ಬಂದಿದೆ. ಹಾಗೆ ಪಂಜೆ ಮಂಗೇಶರಾಯ ಪ್ರಶಸ್ತಿ ಗಡಿನಾಡು ಕನ್ನಡಿಗ ಪ್ರಶಸ್ತಿ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಶಸ್ತಿ ನೀಡುತ್ತಾ ಬಂದಿದೆ. ಈ ಪ್ರಶಸ್ತಿಯನ್ನು ಪಡೆದವರಲ್ಲಿ ಯಕ್ಷಗಾನ ಕಲಾವಿದ ಶ್ರೇಣಿ ಗೋಪಾಲಕೃಷ್ಣ ಭಟ್ ಕವಿ ಸಾಹಿತಿ ಕಯ್ಯಾರ ಕಿಯಣ್ಣರೈ
ಕೆ ವಿ ತಿರುಮಲೇಶ್ ಮುಂತಾದವರಿದ್ದಾರೆ.
ಇವರ ಕನ್ನಡ ಬೆಳವಣಿಗೆಗೆ ಮಾಡುವ ಕಾಯಕಲ್ಪವನ್ನು ಕಂಡು ದಾರವಾಡ ಕರ್ನಾಟಕ ಗ್ರಂಥಾಲಯ ಸಮ್ಮೇಳನದಲ್ಲಿ, ಮೈಸೂರು ಕನ್ನಡ ಸಮ್ಮೇಳನದಲ್ಲಿ ಇವರನ್ನು ಕರೆಸಿ ಗೌರವಿಸಲಾಗಿದೆ.
ಕನ್ನಡ ಪತ್ರಿಕೆಯ ಕಾಸನಗೋಡಿನ ವರದಿಗಾರರು ಇವರೊಂದಿಗೆ ಕೈಜೋಡಿಸಿದ್ದಾರೆ ಪ್ರದೀಪ್ ಬೇಕಲ್, ಜಗದೀಶ್ ಕೂಡ್ಲು, ನವೀನ್ ಚಂದ್ರ ಅಣಂಗುರು, ದಯಾನಂದ ಮುಂತಾದವರು ಇವರೊಂದಿಗೆ ನಿಂತಿದ್ದು ಕಾಸರಗೋಡಿನ ಹಿರಿಯ ಕವಿ ಕೆ ರಾಧಾಕೃಷ್ಣ ಉಳಿಯತಡ್ಕ ಇವರು ಈ ಗ್ರಂಥಾಲಯ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಕೇರಳ ಕರ್ನಾಟಕ ಕನ್ನಡ ಸಂಸ್ಕೃತಿ ಉತ್ಸವ, ನಡೆಸುತ್ತಾರೆ.
2024ರಲ್ಲಿ ಕೇರಳ ಕರ್ನಾಟಕ ಕನ್ನಡ ಸಂಸ್ಕೃತಿ ಉತ್ಸವ ಕೋಲಾರ ಸ್ವರ್ಣಭೂಮಿ ಸಂಸ್ಥೆಯ ಸಹಯೋಗದಲ್ಲಿ ಕೇರಳ ಗಡಿನಾಡ ಕನ್ನಡ ಸಾಹಿತ್ಯ ಉತ್ಸವ, ಗುರು ನಮನ ಕಾರ್ಯಕ್ರಮವನ್ನು ಮಾಡಿದೆ.
ಕವಿತಾ ಸಂಕಲನಗಳಿಗೆ ನೀಡುವ ಕನ್ನಡ
ಕವಿ ಶ್ರೇಷ್ಠಪ್ರಶಸ್ತಿಯು 2024ರಲ್ಲಿ ಡಾ. ಕೆ.ಜಿ .ವೆಂಕಟೇಶ್ ರವರ ಕನಸು ಗರಿಗೆದರುವ ಮುನ್ನ ಕವಿತಾ ಸಂಕಲನಕ್ಕೆ ಬಂದಿದೆ.ಹಲವು ವರ್ಷದ ಹಿಂದೆ ಇವರ ಸಂಶೋಧನಾ ಗ್ರಂಥಕ್ಕೆ ಕನ್ನಡ ಪಯಸ್ವಿನಿ ಪ್ರಶಸ್ತಿ ಬಂದಿತ್ತು.
ಇದೀಗ ಶಿವಮೊಗ್ಗ ಜಿಲ್ಲಾ ಘಟಕಕ್ಕೆ ಇವರೇ ಅಧ್ಯಕ್ಷರಾಗಿದ್ದು ಕಾಸರಗೋಡಿನ ಬೇಕಲ್ ಗೆ ಸಂಶೋಧನೆಗೆ ಅಥವಾ ಐತಿಹಾಸಿಕ ಪ್ರವಾಸಕ್ಕೆ ಹೋಗುವವರು ಇದ್ದಲ್ಲಿ ಉಚಿತ ವಸತಿಗೆ ಕನ್ನಡ ಭವನದಲ್ಲಿ ವ್ಯವಸ್ಥೆ ಮಾಡಲಾಗುವುದು. ಅಗತ್ಯವಿದ್ದವರು ಸಂಪರ್ಕಿಸಬಹುದು.