ಶಿವಮೊಗ್ಗ ಮಹಾನಗರ ಪಾಲಿಕೆ ಭ್ರಷ್ಟಾಚಾರ- ಭಾಗ 2**ಜನಕ್ಕೆ ಸಿಗದ ಆಯುಕ್ತೆ ಸಿಗೋದೆಲ್ಲಿ?**ನಿವೃತ್ತಿಗೆ ಮುನ್ನವೇ ಕೋರ್ಟ್ ಅಶೋಕ್ ಪಾರ್ಟಿಯಲ್ಲಿ ಕಂಡಿದ್ದೇನು?**ಟೇಪ್ ಗಿರಾಕಿ ನಿಂಗೇಗೌಡರದ್ದೇನು ಕಥೆ?**ಪೂಜಾರ್ ಪೂಜೆಗೆ ದೇವತೆ ಅಸ್ತು ಅಂದಳಾ?**ಆಶ್ರಯದಾತ ಶಶಿಧರ್ ಗಂಟು ಮೂಟೆ ಕಥೆ ಏನಾಯ್ತು?*
*ಶಿವಮೊಗ್ಗ ಮಹಾನಗರ ಪಾಲಿಕೆ ಭ್ರಷ್ಟಾಚಾರ- ಭಾಗ 2*
*ಜನಕ್ಕೆ ಸಿಗದ ಆಯುಕ್ತೆ ಸಿಗೋದೆಲ್ಲಿ?*
*ನಿವೃತ್ತಿಗೆ ಮುನ್ನವೇ ಕೋರ್ಟ್ ಅಶೋಕ್ ಪಾರ್ಟಿಯಲ್ಲಿ ಕಂಡಿದ್ದೇನು?*
*ಟೇಪ್ ಗಿರಾಕಿ ನಿಂಗೇಗೌಡರದ್ದೇನು ಕಥೆ?*
*ಪೂಜಾರ್ ಪೂಜೆಗೆ ದೇವತೆ ಅಸ್ತು ಅಂದಳಾ?*
*ಆಶ್ರಯದಾತ ಶಶಿಧರ್ ಗಂಟು ಮೂಟೆ ಕಥೆ ಏನಾಯ್ತು?*
ಶಿವಮೊಗ್ಗದ ನಗರ ಪಾಲಿಕೆಯಲ್ಲಿ ಟೇಪ್ ಹಿಡಿದು ನಿಲ್ಲುವ ಗಿರಾಕಿಯೊಬ್ಬರಿದ್ದಾರೆ. ಎಕ್ಸಿಕ್ಯೂಟಿವ್ ಇಂಜಿನಿಯರ್ ನಿಂಗೇಗೌಡರು ವಾಹನಗಳ ನಿರ್ವಹಣೆಯಲ್ಲಿ ಇಂಥ ಟೇಪು ಹಿಡಿದು ಪೆಟ್ರೋಲ್, ಡೀಸೆಲ್ ಮಟ್ಟ ಅಳೆಯುತ್ತಿರುತ್ತಾರೆ. ಅಳತೆ ಯಾವಾಗಾದರೂ ಯಾಮಾರಿದ್ದುಂಟಾ? ಮಂಗಳರೂರಿನಲ್ಲಿದ್ದಾಗಿನ ಕಥೆಗಳು ಏನು ಹೇಳುತ್ತವೆ?
ಕಂದಾಯಾಧಿಕಾರಿ ಪೂಜಾರ್ ಪೂಜೆ ಮಾತ್ರ ಟ್ರೆಮಂಡಸ್. ಸಂಜೆ ಏಳರ ನಂತರ ಪೂಜೆ ಸಾಮಾನಿನ ಕಡತ ಕೊಟ್ಟು ಪ್ರಸಾದ ಮಾತ್ರ ಒಬ್ಬರಿಗಷ್ಟೇ ತಲುಪಿಸುತ್ತಾರಾ? ಪ್ರತಿನಿತ್ಯ ಪೂಜೆ ಸಫಲವಾಗುತ್ತಿದೆಯಾ? ದೇವತಾ ಆಶೀರ್ವಾದ ದಕ್ಕುತ್ತಿದೆಯಾ?
ಮಾತೃ ಇಲಾಖೆಗೆ ವಾಪಸ್ ಹೋಗಲು ಗಂಟು ಮೂಟೆ ಕಟ್ಟಿಕೊಂಡಿದ್ದ ಆಶ್ರಯದಾತ ಶಶಿಧರ್ ಮತ್ತಿತರರು ಕಮೀಷನರ್ ಮತ್ತು ಶ್ಯಾಡೋ ಕಮೀಷನರ್ ಪಿ ಎ ಮಂಜು ಹೆಸರಿನ ಹುಂಡಿಗೆ ಅದೆಷ್ಟು ಉಜ್ಜಿದ್ದು? ಪಾಲಿಕೆ ಆವರಣದಲ್ಲಿರೋ ತಾಯಿ ಚೌಡೇಶ್ವರಿ ಸಾಕ್ಷಿಯಾಗಿ ಏನೂ ನಡೆದೇ ಇಲ್ಲ ಅಂತ ಇವರೆಲ್ಲ ಹೇಳಿದರೆ ಸುಖಾಂತ್ಯವಾಗಬಹುದು.
ಬಾರ್ ಗಳಲ್ಲಿ, ಹೋಟೆಲ್ ಗಳಲ್ಲಿ ಪುಗಸಟ್ಟೆ ತಿಂದೇ ಬೆಳೆಸಿಕೊಂಡ ಆರೋಗ್ಯ ನಿರೀಕ್ಷಕರಲ್ಲಿ ಕೆಲವರ ಹೊಟ್ಟೆ, ಬಟ್ಟೆ ನೋಡಿದರೆ ಅರ್ಥವಾದೀತು…ನಗರ ಪಾಲಿಕೆ ಎಷ್ಟೆಲ್ಲ ಸಮೃದ್ಧವಾಗಿ ಗಬ್ಬೆದ್ದಿದೆ ಎಂದು…
ಉಳಿದಂತೆ ಮತ್ತೊಂದು ವಿಶೇಷತೆ ಇದೆ ಕಮೀಷನರ್ & ಕೋರ್ಟ್ ಅಶೋಕ್ ಎಂಬ ಸ್ಥಂಭೀಭೂತ ವ್ಯಕ್ತಿ ಬಗ್ಗೆ…
1.
ಹಳೆಯ ಸತ್ತ ಕಡತಗಳಿಗೆ ಮರುಜೀವ ನೀಡಿ ಎತ್ತುವಳಿ ಮಾಡಿ ದಶಮ ಭಾಗ ತಂಗಿಗೆ ನೀಡಿ ಅಕ್ರಮ ಕಡತಗಳಿಗೆ ಸಹಿ ಮಾಡಿಸುತ್ತಿರುವ ತ್ಯಾಗಮಯಿ ಅಣ್ಣ ಮಂಜಣ್ಣನ ಬಹುದೊಡ್ಡ ಹಗರಣವೂ….
2.
ಟೀ ಶರ್ಟ್ ಹಾಕಿರುವ ಕೋರ್ಟ್ ಅಶೋಕರಿಗೆ ಜುಲೈ 2025 ರಲ್ಲಿ ನಿವೃತ್ತಿ…ಆದರೆ, ಈಗಲೇ ಔತಣ ಕೂಟ ಇದರಲ್ಲಿ ಕಮೀಷನರ್ ಕವಿತಾ ಯೋಗಪ್ಪನವರ್, ಸೂಪರಿಂಟೆಂಡೆಂಟ್ ಇಂಜಿನಿಯರ್, ಉಪ ಆಯುಕ್ತರು (ಆಡಳಿತ), ಮ್ಯಾನೇಜರ್ ಇನ್ನಿತರೆ ಅಧಿಕಾರಿಗಳು /ಸಿಬ್ಬಂದಿಗಳು ಭಾಗಿ…(ವಿಶೇಷ ಫೋಟೋಗಳೊಂದಿಗೆ)
ಜನರ ಕೈಗೆ ಸಿಗದ ಆಯುಕ್ತೆ ಕವಿತಾ ಯೋಗಪ್ಪನವರ್ ಮಧ್ಯಾಹ್ನವೇ ಇವರ ಕೈಗೆ ಸಿಗೋ ಚಮತ್ಕಾರ…ಜೊತೆಗೆ,
ಮ್ಯಾನೇಜರ್ ನಾಗಲಕ್ಷ್ಮೀ, ಸಿಬ್ಬಂದಿಯ ಹಾಹಾಕಾರ…
3.
ಅಂದರೆ, ಅದಕ್ಕೂ ಮೊದಲ ಭಾಗ ಮತ್ತೊಂದಿದೆ ಎಂದಾಯ್ತು…
– *ಶಿ.ಜು.ಪಾಶ*
ಸಂಪಾದಕರು
ಮಲೆನಾಡು ಎಕ್ಸ್ ಪ್ರೆಸ್ ಪತ್ರಿಕಾ
*8050112067*