ಜೈವಿಕ ಇಂಧನ ಜೀವಸಂಕುಲಕ್ಕೆ ಚಂದನ*

*ಜೈವಿಕ ಇಂಧನ ಜೀವಸಂಕುಲಕ್ಕೆ ಚಂದನ*

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ 2024 ಹಾಗೂ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಬೆಂಗಳೂರು, ಇವರ ಅಡಿಯಲ್ಲಿ ಜೈವಿಕ ಇಂಧನ ತರಬೇತಿ ಕಾರ್ಯಕ್ರಮವನ್ನು ಶಿಕಾರಿಪುರ ತಾಲೂಕಿನ ಹೊಸಗೊದ್ದನಕೊಪ್ಪ ಗ್ರಾಮದಲ್ಲಿ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಹೊನ್ನಪ್ಪ, ಪ್ರಧಾನ ಸಂಶೋಧಕರು, ಜೈವಿಕ ಇಂಧನ ಉದ್ಯಾನ, ಇರುವಕ್ಕಿಯಿಂದ ಆಗಮಿಸಿದ್ದರು.

ಜಾಗತಕ ತಾಪಮಾನ ಏರುತ್ತಿರುವ ಹಾಗೂ ಪೆಟ್ರೋಲಿಯಂ ಇಂಧನಗಳ ವೆಚ್ಚವು ಹೆಚ್ಚಾಗುತ್ತಿರುವ ಈಗಿನ ಕಾಲದಲ್ಲಿ ಜೈವಿಕ ಇಂಧನಗಳ ಬಳಕೆಯು ಹಾಗೂ ಜೈವಿಕ ಇಂಧನ ತಯಾರಿಕೆಗೆ ಸೂಕ್ತ ಮರಗಳಾದ ಹಿಪ್ಪೆ, ಹೊಂಗೆ,ಬೇವು, ಕಾಡು ಔಡಲ,ಸೀಮರೂಬ ಹೀಗೆ ಮುಂತಾದ ಮರಗಳನ್ನು ಬೆಳೆಸುವುದು ಅತ್ಯವಶ್ಯಕವಾಗಿದೆ.

*ಜೈವಿಕ ಇಂಧನದ ಮೂಲಗಳು*
1. *ಜೈವಿಕ ಏಥನಾಲ್*: ಇದನ್ನು ಸಿಹಿಗೆಣಸು, ಸಿಹಿಬೀಟ್ರೂಟ್, ಸಿಹಿಜೋಳ ಹಾಗೂ ಕೃಷಿ ತ್ಯಾಜ್ಯಗಳಾದ ಕಬ್ಬಿನ ಸಿಪ್ಪೆ, ಭತ್ತದ ಹುಲ್ಲು, ನಿರುಪಯುಕ್ತ ಹಣ್ಣುಗಳಿಂದ ತಯಾರಿಸಲಾಗುತ್ತದೆ.
2. *ಜೈವಿಕ ಡೀಸಲ್:* ಇದನ್ನು ಅಖಾದ್ಯ ತೈಲ ಬೀಜಗಳು ಹಾಗೂ ಪ್ರಾಣಿಗಳ ಕೊಬ್ಬಿನಿಂದ ಮಾಡಲಾಗುತ್ತದೆ.
3. *ಬಯೋ ಗ್ಯಾಸ್* ಇದನ್ನು ಸಕ್ಕರೆ ಕಾರ್ಖಾನೆಗಳಲ್ಲಿ ದೊರೆಯುವ ತ್ಯಾಜ್ಯ ವಸ್ತುಗಳು ಹಾಗೂ ಅನುಪಯುಕ್ತ ಆಹಾರ ಪದಾರ್ಥಗಳನ್ನು ಬಳಸಿಕೊಂಡು ತಯಾರಿಸಲಾಗುತ್ತದೆ.
*ಜೈವಿಕ ಇಂಧನದ ಪ್ರಯೋಜನಗಳು*
1. ನವೀಕರಿಸಬಹುದಾದ ಜೈವಿಕ ಇಂಧನಗಳಲ್ಲಿ ಗಂಧಕದ ಪ್ರಮಾಣವು ಕಡಿಮೆ ಇರುತ್ತದೆ.
2. ರೈತರು ಹಾಗೂ ಕೃಷಿ ಕಾರ್ಮಿಕರಿಗೆ ಎಣ್ಣೆ ಬೀಜಗಳ ಮಾರಾಟದಿಂದ ನೇರ ಆರ್ಥಿಕ ಲಾಭ.
3. ಡೀಸಲ್ನೊಂದಿಗೆ ಬೆರೆಸಿ ಅಥವಾ ಡೀಸೆಲ್ ಗೆ ಬದಲಿಯಾಗಿ ಬಳಸಬಹುದು.
4. ಜೈವಿಕ ಇಂಧನ ಬಳಸುವುದರಿಂದ ಸ್ಥಳೀಯ ಸಂಪನ್ಮೂಲಗಳ ಬಳಕೆ ಹಾಗೂ ಇಂಧನ ಸ್ವಾವಲಂಬನೆಯಾಗಬಹುದು.

ಈ ತರಬೇತಿ ಕಾರ್ಯಕ್ರಮದಲ್ಲಿ ವಿವಿಧ ಮರಗಳ ಬೀಜಗಳಿಂದ ತಯಾರಿಸಲಾಗಿದ್ದ ಡೀಸೆಲ್ ಗಳನ್ನು ತೋರಿಸಿ, ರೈತರಿಗೆ ಸಸಿಗಳನ್ನು ವಿತರಿಸಲಾಯಿತು.