ಅಡಿಕೆ ಬೆಳೆಯಲ್ಲಿ ಕೀಟಗಳ ನಿರ್ವಹಣೆಯಿಂದ ಹೆಚ್ಚಿನ ಇಳುವರಿ
ಅಡಿಕೆ ಬೆಳೆಯಲ್ಲಿ ಕೀಟಗಳ ನಿರ್ವಹಣೆಯಿಂದ ಹೆಚ್ಚಿನ ಇಳುವರಿ
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ, ಶಿವಮೊಗ್ಗ ಕೃಷಿ ಮಹಾವಿದ್ಯಾಲಯ ಇರುವಕ್ಕಿ ಯ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯನುಭವ ಕಾರ್ಯಕ್ರಮ- 2024 ಹಳೇಮುಗಳಗೆರೆ ಗ್ರಾಮ
ಕೃಷಿ ಮಹಾವಿದ್ಯಾಲಯದ ಮಣ್ಣು ವಿಜ್ಞಾನಿಗಳ ವಿಜ್ಞಾನಿಗಳಾದ ಡಾ ನಿರಂಜನ ಕೆ ಎಸ್ ಮತ್ತು ಕೀಟಶಾಸ್ತ್ರದ ವಿಜ್ಞಾನಿಗಳಾದ ಡಾ ನವೀನ್ ರವರು ರೈತರ ಜಮೀನಿಗೆ ಭೇಟಿ ನೀಡಿದ್ದರು. ಹಳೇ ಮುಗಳಗೆರೆ ಗ್ರಾಮದ ರೈತರಾದ ಪ್ರದೀಪ್ ಗೌಡ ಜಿ ಎಸ್, ಅರುಣ್ ಕುಮಾರ್, ಚಂದ್ರಣ್ಣ (ಜೆಸಿಬಿ), ಶಂಭುಲಿಂಗಯ್ಯ, ಸಿದ್ದನಗೌಡ ರವರ ಜಮೀನುಗಳನ್ನು ವೀಕ್ಷಿಸಿದರು. ನಂತರ ಮಾತನಾಡಿದ ಅವರು *ಅಡಕೆ ಸುಳಿ ತಿಗಣೆ*, *ಬ್ಲಾಕ್ ಸ್ಕೇಲ್, ಹಿಂಗಾರು ತಿನ್ನುವ ಹುಳ, ಹುಡಿ ತಿಗಣೆ*,ಕೀಟಗಳು ಕಂಡು ಬಂದವು ಅವುಗಳಿಂದ ಹಾನಿಯಾಗಿರುವ ಮಾದರಿಗಳನ್ನು ಸಂಗ್ರಹಿಸಿದೆವು ಅವುಗಳನ್ನು ಮಾಹಿತಿ ಕೇಂದ್ರದಲ್ಲಿ ಇಡುವಂತೆ ಸೂಚಿಸಿದರು. ವೈಜ್ಞಾನಿಕವಾಗಿ ಯಾವ ರೀತಿ ಅವುಗಳನ್ನು ತಡೆಯಬೇಕು ಮತ್ತು ಹೇಗೆ ನಿರ್ವಹಣೆ ಮಾಡಬೇಕೆಂದು ತಿಳಿಸಿದರು. ಮಣ್ಣು ವಿಜ್ಞಾನಿಗಳು ಮಣ್ಣು ಪರೀಕ್ಷೆಯನ್ನು 2 ವರ್ಷಕ್ಕೊಮ್ಮೆ ಮಾಡಿಸಬೇಕು ಮಣ್ಣು ಮಾದರಿ ಯಾವ ರೀತಿ ಸಂಗ್ರಹಿಸಬೇಕು ಎಂದು ತಿಳಿಸಿದರು.