ಇದೇನು ನಡೆದಿದೆ ಶಿವಮೊಗ್ಗದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ?!ಗಣಿ ಅಧಿಕಾರಿ ಜ್ಯೋತಿ ಮೌನದ ಹಿಂದೇನಿದೆ ಕಥೆ?ಕೋಟೆ ಠಾಣೆಯಲ್ಲಿ ನಿಂತ ಅಕ್ರಮ ಮರಳಿನ ಎರಡು ಲಾರಿಗಳ ವಿಚಾರದಲ್ಲಿ ಯಾಕೀ ಅನುಮಾನಾಸ್ಪದ ನಡೆ?

ಇದೇನು ನಡೆದಿದೆ ಶಿವಮೊಗ್ಗದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ?!

ಗಣಿ ಅಧಿಕಾರಿ ಜ್ಯೋತಿ ಮೌನದ ಹಿಂದೇನಿದೆ ಕಥೆ?

ಕೋಟೆ ಠಾಣೆಯಲ್ಲಿ ನಿಂತ ಅಕ್ರಮ ಮರಳಿನ ಎರಡು ಲಾರಿಗಳ ವಿಚಾರದಲ್ಲಿ ಯಾಕೀ ಅನುಮಾನಾಸ್ಪದ ನಡೆ?

ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಎರಡು ಅಕ್ರಮ ಮರಳು ಸಾಗಿಸುತ್ತಿದ್ದ ಲಾರಿಗಳು ಎರಡು ದಿನಗಳಿಂದ ನಿಂತಿವೆ. ಯಾರ ಲಾರಿಗಳು? ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಯಾವುದನ್ನೂ ಸ್ಪಷ್ಟೀಕರಿಸದೇ ಇಡೀ ಪ್ರಕರಣವನ್ನು ಅನುಮಾನಾಸ್ಪದವಾಗಿ ಇಡುತ್ತಿರುವುದೇಕೆ?

ಪಿಳ್ಳಂಗೆರೆ ಕಡೆಯಿಂದ ಅಕ್ರಮ ಮರಳು ತುಂಬಿಕೊಂಡು ಬರುತ್ತಿದ್ದ ಎರಡು ಲಾರಿಗಳನ್ನು ಶುಕ್ರವಾರ ಅಂದರೆ, ಜ.17 ರಂದು ಶಿವಮೊಗ್ಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಿಜ್ಞಾನಿ ಕೆ ಕೆ ಜ್ಯೋತಿ ನೇತೃತ್ವದ ತಂಡ ದಾಳಿ ಮಾಡಿ ವಶಕ್ಕೆ ಪಡೆದು ಕೋಟೆ ಠಾಣೆಯ ಪೊಲೀಸರಿಗೆ ಒಪ್ಪಿಸಿದೆ.

ಆದರೆ, ಈ ವರೆಗೆ ಈ ಎರಡು ಲಾರಿಗಳು(KA 41,5598 ಮತ್ತು KA 09,1724) ಯಾರಿಗೆ ಸೇರಿವೆ? ಏನು ಕಥೆ? ಸ್ವತಃ ಠಾಣೆಯಲ್ಲಿರುವ ಪೊಲೀಸರಿಗೂ ತಿಳಿಸದೇ ಗುಪ್ತವಾಗಿಡಲಾಗಿದೆ!

ಗಣಿ ಮತ್ರು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಅಕ್ರಮ ಮರಳಿನ ವಿಚಾರದಲ್ಲಿ ಕಣ್ಣಾಮುಚ್ಚಾಲೆ ಯಾಕೆ ಆಡುತ್ತಿದ್ದಾರೆ? ಇಲಾಖೆಯ ಹಿರಿಯ ಭೂ ವಿಜ್ಞಾನಿ ಪಿ.ಕೆ.ನಾಯಕ್ ರವರ ಬಳಿಯೂ ಈ ಬಗ್ಗೆ ಮಾಹಿತಿ ಇಲ್ಲ. ಮಾಹಿತಿ ತಿಳಿದು ಫೋನ್ ಮಾಡುವ ಭರವಸೆಯನ್ನು ಅವರು ನೀಡಿದ್ದಾರೆ.

ಆದರೆ, ಇಡೀ ಪ್ರಕರಣದ ಮಾಹಿತಿ ಇರುವ ವಿಜ್ಞಾನಿ ಕೆ ಕೆ ಜ್ಯೋತಿಯವರು ಮಾತ್ರ ಯಾವ ಕರೆಯನ್ನೂ ಸ್ವೀಕರಿಸುತ್ತಿಲ್ಲ. ಈ ಅಕ್ರಮ ಮರಳಿನ ಎರಡು ಲಾರಿಗಳು ಗುಂಡಾ ಮತ್ತು ದಿನೇಶ @ ದಿನೀಗೆ ಸೇರಿದ್ದೆಂದು ಹೇಳಲಾಗುತ್ತಿದೆ!