ಶಿಕಾರಿಪುರದಲ್ಲಿ ಕೃಷಿ ಮತ್ತು ಕಲೆಗಳ ಉತ್ಸವ ವನ್ನು ಉದ್ಘಾಟಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ
ಶಿಕಾರಿಪುರದಲ್ಲಿ ಕೃಷಿ ಮತ್ತು ಕಲೆಗಳ ಉತ್ಸವ ವನ್ನು ಉದ್ಘಾಟಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯ, ಶಿವಮೊಗ್ಗದ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿ ಇರುವಕ್ಕಿಯ ವತಿಯಿಂದ ಶಿಕಾರಿಪುರ ತಾಲೂಕಿನ ನೆಲವಾಗಿಲು ಮುಖ್ಯ ರಸ್ತೆಯಲ್ಲಿ ಕೃಷಿ ಮೇಳವನ್ನು ಆಯೋಜಿಸಲಾಗಿತ್ತು.
ಈ ಕೃಷಿ ಮೇಳವು ಬಿಎಸ್ಸಿ ಕೃಷಿ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿರುತ್ತದೆ. ಕಾರ್ಯಕ್ರಮವು ಕಳಸ ಹೊತ್ತ ಮಹಿಳೆಯರು ಮತ್ತು ಛದ್ಮ ವೇಶ ಧರಿಸಿದ್ದ ಮಕ್ಕಳು, ಬೊಂಬೆ ಕುಣಿತ, ಅಲಂಕಾರಿತ ಹೋರಿಗಳು, ಡೊಳ್ಳು ಕುಣಿತ, ವೀರಗಾಸೆ ನೃತ್ಯಗಾರರನ್ನು ಒಳಗೊಂಡಿದ್ದ ಮೆರವಣಿಗೆ ಮೂಲಕ ಆರಂಭವಾಯಿತು. ತದನಂತರ ವೇದಿಕೆ ಕಾರ್ಯಕ್ರಮವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಅವರು, ಕೃಷಿಯನ್ನು ಬಹಳ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವುದರ ಬಗ್ಗೆ ಮಾತನಾಡಿದರು. ನಂತರ ಮಲೆನಾಡಿನ ಪ್ರದೇಶ ಸಮಿತಿಯ ಮಾಜಿ ಅಧ್ಯಕ್ಷರಾದ ಗುರುಮೂರ್ತಿಯವರು ಕೃಷಿ ವಿಶ್ವವಿದ್ಯಾನಿಲಯ ಸ್ಥಾಪನೆಯಾದ ಬಗ್ಗೆ ರೈತರಿಗೆ ತಿಳಿಸಿಕೊಟ್ಟರು. ಇದರಲ್ಲಿ ಬಿಎಸ್ ಯಡಿಯೂರಪ್ಪರವರು ಮುಖ್ಯ ಪಾತ್ರ ವಹಿಸಿದ್ದಾರೆಂದು ಹೇಳಿದರು. ತದನಂತರ ಹೊಸಕೋದನಕೊಪ್ಪ ನೆಲವಾಗಿಲು ಸುರಗಿಹಳ್ಳಿ ಹಳೆ ಮುಗುಳ್ಗೆರೆ ಗ್ರಾಮದ ರೈತರು ಮತ್ತು ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕೃಷಿ ವಿವಿಯ ಕುಲಪತಿಗಳಾದ ಡಾಕ್ಟರ್ ಆರ್.ಸಿ.ಜಗದೀಶ್ ರವರು ಕೃಷಿಯಲ್ಲಿ ಮಹಿಳೆಯರ ಪಾತ್ರದ ಮಹತ್ವದ ಕುರಿತು ರೈತರಿಗೆ ತಿಳಿಸಿಕೊಟ್ಟರು. ಹಾಗೂ ವಿಶ್ವವಿದ್ಯಾನಿಲಯದಲ್ಲಿ ಲಭ್ಯವಿರುವ ಕೋರ್ಸ್ಗಳ ಬಗ್ಗೆ ಜನರಿಗೆ ತಿಳಿಸಿಕೊಟ್ಟರು. ವೇದಿಕೆಯಲ್ಲಿ ಕಾಡಾದ ಮಾಜಿ ಅಧ್ಯಕ್ಷರಾದ ಮಹದೇವಪ್ಪ ರವರು ಮತ್ತು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಸದಸ್ಯರು ಸದಸ್ಯರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮದ ಪ್ರಗತಿಪರ ರೈತರು ಮತ್ತು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮಕ್ಕೆ ಸಹಕಾರ ನೀಡಿದವರಿಗೆ ಗೌರವವಾಗಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹೋಳಿಗಳನ್ನು ಕರೆತಂದಿದ್ದ ಹೋರಿಗಳ ಮಾಲೀಕರಿಗೆ ಸನ್ಮಾನ ಮಾಡಲಾಯಿತು.
ಮಧ್ಯಾಹ್ನ ಊಟದ ನಂತರ ರೈತ ಉದ್ದಿಮೆದಾರ ಮತ್ತು ರೈತರ ನಡುವೆ ಸಂವಾದವನ್ನು ಏರ್ಪಡಿಸಲಾಗಿತ್ತು. ಕೋಳಿ ಸಾಕಾಣಿಕೆಯಲ್ಲಿ ತೊಡಗಿಕೊಂಡು ಪ್ರಗತಿ ಹೊಂದಿರುವ ತೀರ್ಥಹಳ್ಳಿಯ ಸಚಿನ್, ಜೇನು ಕೃಷಿಕರಾಗಿರುವ ವಿಜ್ಞೇಶ್, ಎಕೋ ಫೈಟೋಕೇರ್ ಕಂಪನಿಯ ನಿರಂಜನ್ , ಕಲ್ಪತರು ನರ್ಸರಿಯ ಪ್ರಸನ್ನ ರವರು ರೈತರಿಗೆ ಮಾಹಿತಿಯನ್ನು ನೀಡಿದರು. ಕೃಷಿ ವಿವಿಯ ಕುಲ ಸಚಿವರಾದ ಡಾ. ಕೆ.ಸಿ ಶಶಿಧರ್ ರವರು ಯುವರೈತರು ಕೃಷಿ ಸಂಬಂಧಿತ ಉದ್ಯಮೆಯನ್ನು ಕೈಗೆತ್ತಿಕೊಂಡು ಹಳ್ಳಿಯಲ್ಲಿ ಕೃಷಿಯನ್ನು ಉಳಿಸಬೇಕು ಮತ್ತು ಹೊಸ ಚಿಂತನೆ ಹೊಸ ಉದ್ದಿಮೆ, ಯುವ ರೈತರ ಮೇಲೆ ಕೊಂಡೊಯ್ಯ ಬಹುದು. ಹಾಗೂ ವಿಶ್ವವಿದ್ಯಾಲಯದಿಂದ ನವೋದ್ಯಮ ಸೃಷ್ಟಿಸಲು ರೈತರಿಗೆ ಸಹಾಯಧನ ನೀಡಲು ಅವಕಾಶವಿದೆ ಆದರೆ ರೈತರು ಇದನ್ನು ಬಳಸಿಕೊಳ್ಳಲು ಮುಂದೆ ಬರುತ್ತಿಲ್ಲ ಎಂದು ಅವರು ಹೇಳಿಕೊಂಡರು.
ಕೃಷಿ ಮೇಳದಲ್ಲಿ 150 ಕ್ಕೂ ಅಧಿಕ ಮಳಿಗೆಗಳು ಬಂದಿದ್ದು ,ರೈತರೆಲ್ಲರೂ ಇದರ ಸದುಪಯೋಗ ಪಡೆದುಕೊಂಡರು. ಮೇಳದಲ್ಲಿ ಸುಮಾರು 5000 ಜನರು ನೆರೆದಿದ್ದರು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.