ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಟಾಂಗ್…**ಜೆಡಿಎಸ್ ನಾಯಕರು ಹೆಣ್ಣು ಮಕ್ಕಳ ಬಾಳು ಹಾಳು ಮಾಡಿದ ಪ್ರಜ್ವಲ್, ಗಂಡು ಮಕ್ಕಳ ಬಾಳು ಹಾಳು ಮಾಡಿದ ಸೂರಜ್ ರೇವಣ್ಣ ವಿರುದ್ಧ ಮೊದಲು ಹೋರಾಟ ಮಾಡಲಿ…*

*ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಟಾಂಗ್…*

*ಜೆಡಿಎಸ್ ನಾಯಕರು ಹೆಣ್ಣು ಮಕ್ಕಳ ಬಾಳು ಹಾಳು ಮಾಡಿದ ಪ್ರಜ್ವಲ್, ಗಂಡು ಮಕ್ಕಳ ಬಾಳು ಹಾಳು ಮಾಡಿದ ಸೂರಜ್ ರೇವಣ್ಣ ವಿರುದ್ಧ ಮೊದಲು ಹೋರಾಟ ಮಾಡಲಿ…*

2896 ಹೆಣ್ಣು ಮಕ್ಕಳ ಜೀವನ ಹಾಳು ಮಾಡಿದ ಕಾಮುಕ ಪ್ರಜ್ವಲ್ ರೇವಣ್ಣ ಹಾಗೂ ಗಂಡು ಮಕ್ಕಳ ಜೀವನ ಹಾಳು ಮಾಡಿದ ಸಲಿಂಗಿ ಸೂರಜ್ ರೇವಣ್ಣ ಏಕೈಕ ಕನ್ನಡಿಗ ಮಾಜಿ ಪ್ರಧಾನ ಮಂತ್ರಿ ಎಚ್ ಡಿ ದೇವೇಗೌಡ ರವರ ಗೌರವಕ್ಕೆ ದಕ್ಕೆ ತಂದವರು. ಅವರ ವಿರುದ್ಧ ಮೊದಲು ಜೆಡಿಎಸ್ ನಾಯಕರು ಹೋರಾಟ ಮಾಡಲಿ ಎಂದು ಕಾಂಗ್ರೆಸ್ ನ ಭದ್ರಾವತಿ ಕ್ಷೇತ್ರದ ಶಾಸಕ ಬಿ.ಕೆ.ಸಂಗಮೇಶ್ ಟಾಂಗ್ ಕೊಟ್ಟಿದ್ದಾರೆ.

ಪ್ರತಿಭಟಿಸುವ ಹಕ್ಕು ಸಂವಿಧಾನ ನೀಡಿದೆ ಎಂದು ಸುಮ್ನೆ ಹೋರಾಟ ಮಾಡಲಿಕ್ಕೆ ಆಗಲ್ಲ. ಯಾವ ನೈತಿಕತೆ ಇದೇ ನಿಮಗೆ ಹೋರಾಟ ಮಾಡಲಿಕ್ಕೆ? ಎಂದು ಸಂಗಮೇಶ್ ಪ್ರಶ್ನಿಸಿದ್ದಾರೆ.

ಜೆಡಿಎಸ್ ಫೆ.14 ರಂದು ಭದ್ರಾವತಿಯಲ್ಲಿ ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಶಾಸಕರ ವಿರುದ್ಧದ ಪ್ರತಿಭಟನೆಗೆ ಶಾಸಕ ಸಂಗಮೇಶ್ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.