ಶಿವಮೊಗ್ಗದಲ್ಲಿ ಫೆ. 22 ರಿಂದ ಎರಡು ದಿನಗಳ ಕಾಲ *”ಶ್ರೀಕಾಂತಣ್ಣ ಕಪ್ ಸೀಸನ್ – 2″ಕ್ರಿಕೆಟ್ ಪಂದ್ಯಾವಳಿ”* ಟ್ರೋಫಿ – ಸಮವಸ್ತ್ರ ಅನಾವರಣ
ಶಿವಮೊಗ್ಗದಲ್ಲಿ ಫೆ. 22 ರಿಂದ ಎರಡು ದಿನಗಳ ಕಾಲ *”ಶ್ರೀಕಾಂತಣ್ಣ ಕಪ್ ಸೀಸನ್ – 2″ಕ್ರಿಕೆಟ್ ಪಂದ್ಯಾವಳಿ”*
ಟ್ರೋಫಿ – ಸಮವಸ್ತ್ರ ಅನಾವರಣ

ಶಿವಮೊಗ್ಗ : ಕ್ರೀಡಾಕೂಟ ಆಯೋಜನೆಗಳಿಂದ ಹಲವಾರು ಪ್ರಯೋಜನಗಳಿವೆ ಎಂದು ಭಾವಸಾರ ಕ್ಷತ್ರಿಯ ಮಹಜನ ಸಮಾಜದ ಅಧ್ಯಕ್ಷ ಗಜೇಂದ್ರನಾಥ್ ಮಾಳೋದೆ ಅಭಿಪ್ರಾಯ ವ್ಯಕ್ತಪಡಿಸಿದರು. ಬುಧವಾರ ಸಂಜೆ ನಗರದ ಹೊಟೆಲ್ ವೊಂದರಲ್ಲಿ ಆಯೋಜಿಸಲಾಗಿದ್ದ “ಶ್ರೀಕಾಂತಣ್ಣ ಕಪ್” ಕ್ರಿಕೆಟ್ ಪಂದ್ಯಾವಳಿ ಹಿನ್ನೆಲೆಯಲ್ಲಿ ಬಹುಮಾನ ಟ್ರೋಫಿಗಳ ಅನಾವರಣ ಹಾಗೂ ತಂಡಗಳ ಟೀ ಶರ್ಟ್ ಬಿಡುಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದ್ದಾರೆ. ಕ್ರೀಡಾಕೂಟಗಳ ಆಯೋಜನೆಯಿಂದಾಗಿ ಭ್ರಾತೃತ್ವ ಬೆಳೆಯುತ್ತದೆ. ಜೊತೆಗೆ ಸಮಾನ ಮನಸ್ಕರನ್ನು, ಸ್ನೇಹಿತರನ್ನು ಒಗ್ಗೂಡಿಸುತ್ತದೆ ಎಂದರು. ಎಲ್ಲಾ ಕ್ರೀಡೆಗಳಲ್ಲಿ ಸೋಲು ಗೆಲುವು ಎಂಬುದು ಸಹಜವಾಗಿದ್ದು, ಇದನ್ನು ಯುವಕರು, ಸಮಾನವಾಗಿ ಸ್ವೀಕರಿಸಬೇಕು. ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸಬೇಕು. ಕ್ರೀಡೆಯಿಂದ ಮನಸ್ಸು ಮತ್ತು ದೇಹ ಸದೃಢವಾಗಿರುತ್ತದೆ ಎಂದರು. ಅದರಲ್ಲೂ ಸಮುದಾಯಗಳ ನಡುವಿನ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುತ್ತಿರುವುದು ನಿಜಕ್ಕೂ ಹರ್ಷದಾಯಕ ವಿಚಾರವಾಗಿದ್ದು, ಶ್ರೀಕಾಂತಣ್ಣ ಕಪ್ ಪಂದ್ಯಾವಳಿ ಸಮಯೋಚಿತವಾಗಿದೆ ಎಂದು ಹೇಳಿದರು.
ಈ ವೇಳೆ ಶ್ರೀಕಾಂತಣ್ಣ ಕಪ್ ಕ್ರಿಕೆಟ್ ಪಂದ್ಯಾವಳಿಯ ಬಹುಮಾನ ಟ್ರೋಫಿ ಅನಾವರಣಗೊಳಿಸಲಾಯಿತು. ಜೊತೆಗೆ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿರುವ 12 ತಂಡಗಳ ಸಮವಸ್ತ್ರಗಳನ್ನು ಕೂಡ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಆಯೋಜಕರಾದ ವಿನಯ್ ತಾಂದ್ಲೆ ಹಾಗೂ ಮಂಜುನಾಥ್ ಬೇದ್ರೆ ಇವರು ಪಂದ್ಯಾವಳಿ ಕುರಿತು ಎಲ್ಲಾ ತಂಡಗಳ ಆಟಗಾರರಿಗೆ ಮಾಹಿತಿ ನೀಡಿದರು. ನಗರದ ATNCC ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿರುವ ಶ್ರೀಕಾಂತಣ್ಣ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ 12 ತಂಡಗಳ ಲೀಗ್ ಹಂತದ 6 ಓವರ್ ಗಳ ಪಂದ್ಯಗಳಾಗಿರುತ್ತದೆ. ಈ ಪಂದ್ಯಾವಳಿಯ ಪ್ರಥಮ ಬಹುಮಾನ 30,000 ರೂ. ಹಾಗೂ ಆಕರ್ಷಕ ಟ್ರೋಫಿ ದ್ವಿತೀಯ ಬಹುಮಾನ 15,000 ರೂ. ಹಾಗೂ ಆಕರ್ಷಕ ಟ್ರೋಫಿ. ಈ ಕ್ರಿಕೆಟ್ ಪಂದ್ಯಾವಳಿ ಗಲ್ಲಿ ಕ್ರಿಕೆಟ್ ಯುಟ್ಯೂಬ್ ಚಾನೆಲ್ ನಲ್ಲಿ ಲೈವ್ ಇರುತ್ತದೆ. MBC ಇವರ ನೇತೃತ್ವದಲ್ಲಿ ಈ ಪಂದ್ಯಾವಳಿ ನಡೆಯಲಿದೆ. ಮುಂದಿನ ವರ್ಷ ಇನ್ನು ಹೆಚ್ಚು ತಂಡಗಳು ಈ ಪಂದ್ಯಾವಳಿಯಲ್ಲಿ ಸೇರ್ಪಡೆಯಾಗಲಿವೆ ಎಂದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀರಾಮಸೇವಾ ಭಾವಸಾರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಸಂತೋಷ್ ಸಾಕ್ರೆ, ಹಿರಿಯ ಪತ್ರಕರ್ತರಾದ ಗೋ.ವ. ಮೋಹನಕೃಷ್ಣ, ಕಾಂಗ್ರೆಸ್ ಮುಖಂಡರಾದ ಭಾಸ್ಕರ್, ಅನಿಲ್, ಉಮೇಶ್, ಸಂತೋಷ್, ಗ್ಯಾರಂಟಿ ಯೋಜನೆ ಸದಸ್ಯರಾದ ಬಸವರಾಜ್, ಯುವ ಮುಖಂಡರಾದ ಆರ್,ಟಿ,ಆರ್ ಮಂಜು, ಹಾಲೇಶ್, ಸತ್ಯನಾರಾಯಣ, ವಿನಯ್, ಮೋಹನ್, ಅನಿಲ್, ರಂಜನ್, ದರ್ಶನ್ ಸೇರಿದಂತೆ ಹಲವರಿದ್ದರು