ಶಿವಮೊಗ್ಗದ ಕಕೂನ್ ಶಾಲೆಯಲ್ಲಿ ಗಮನ ಸೆಳೆಯುತ್ತಿರುವ ಮಕ್ಕಳ ಫುಡ್ ಫಾರ್ ಥಾಟ್!*

*ಶಿವಮೊಗ್ಗದ ಕಕೂನ್ ಶಾಲೆಯಲ್ಲಿ ಗಮನ ಸೆಳೆಯುತ್ತಿರುವ ಮಕ್ಕಳ ಫುಡ್ ಫಾರ್ ಥಾಟ್!*

ಮೊಹಮ್ಮದ್ ಶರೀಫ್ ಎಜ್ಯುಕೇಷನಲ್ ಅ್ಯಂಡ್ ವೆಲ್ ಫೇರ್ ಟ್ರಸ್ಟ್ ಅಡಿಯಲ್ಲಿ ನಡೆಯುತ್ತಿರುವ ಕಕೂನ್ ಸ್ಕೂಲ್ ಬಹಳ ವಿಶೇಷವಾದ ಕಾರ್ಯಕ್ರಮವೊಂದನ್ನು ಮಕ್ಕಳ ಮೂಲಕ ಆಯೋಜಿಸಿದ್ದು, ಫೆ.24 ಮತ್ತು 25 ರಂದು ಎರಡು ದಿನಗಳ ಕಾಲ *ಫುಡ್ ಫಾರ್ ಥಾಟ್* ನಡೆಯಲಿದೆ.

ಶಿವಮೊಗ್ಗದ ಮದಾರಿಪಾಳ್ಯದ ಬಳಿ ಇರುವ ಹೆವೆನ್ ಪ್ಯಾಲೆಸ್ ನಲ್ಲಿ ಈ ವಿಶೇಷ ಕಾರ್ಯಕ್ರಮ ನಡೆಯುತ್ತಿದೆ. ಯಾವ ಆಹಾರದಿಂದ ಏನು ಲಾಭ? ಏನು ನಷ್ಟ? ಯಾವ ತರಕಾರಿಗಳಿಂದ ಯಾವ ವಿಟಮಿನ್ ದೊರೆಯುತ್ತೆ? ಎಂಬ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ನಡೆಯುತ್ತಿದೆ. ಪೋಷಕರು, ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.

ಸುಮಾರು 200 ಮಕ್ಕಳು ಈ ಫುಡ್ ಫಾರ್ ಥಾಟ್ ನಲ್ಲಿ ಭಾಗವಹಿಸಿದ್ದು, ಜಂಕ್ ಫುಡ್, ಕಂಪನಿ ಪಾನೀಯಗಳಿಗೆ ಮಾರು ಹೋಗಿರುವ ಜನರಿಗೆ ಆಗುತ್ತಿರುವ ಆರೋಗ್ಯದ ಸಮಸ್ಯೆಗಳ ಬಗ್ಗೆಯೂ ಮಕ್ಕಳೇ ಹೇಳಿ ವಿವರಿಸುತ್ತಿದ್ದಾರೆ.

ಶೇಖ್ ಜಫರುಲ್ಲರವರ ಮಾರ್ಗದರ್ಶನದಲ್ಲಿ  ಹೆಚ್ ಎಂ ಶೇಖ್ ಶಗುಪ್ತರವರು ಹಾಗೂ ತಂಡದ ಉಸ್ತುವಾರಿಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಸಾಕಷ್ಟು ಜನರ ಗಮನ ಸೆಳೆಯುತ್ತಿದೆ. ಪ್ರತಿವರ್ಷ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಆಡಳಿತ ಮಂಡಳಿ ಹಮ್ಮಿಕೊಳ್ಳುತ್ತಾ ಬಂದಿರುವುದು ವಿಶೇಷ.