ತೊಂದರೆಯಲ್ಲಿರುವ ಕಾರ್ಮಿಕರ ಚಿಕಿತ್ಸೆಗೆ ಕೈ ಜೋಡಿಸಿದ ಆರ್.ಎಂ.ಮಂಜುನಾಥ ಗೌಡರು*

*ತೊಂದರೆಯಲ್ಲಿರುವ ಕಾರ್ಮಿಕರ ಚಿಕಿತ್ಸೆಗೆ ಕೈ ಜೋಡಿಸಿದ ಆರ್.ಎಂ.ಮಂಜುನಾಥ ಗೌಡರು*

ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರೂ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಡಾ. ಆರ್. ಎಂ. ಮಂಜುನಾಥ್ ಗೌಡರು, ನಗರ ಹೋಬಳಿಯ ಚಿಕ್ಕಪೇಟೆ ಹಾಗೂ ಗದ್ದೆಮನೆ ಮರ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕಾಲು ಕಳೆದುಕೊಂಡ ಕಾರ್ಮಿಕರಿಗೆ ಮತ್ತು ಕ್ಯಾನ್ಸರ್ ನಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಚಿಕಿತ್ಸೆಗೆ ಧನ ಸಹಾಯ ಮಾಡಿದರು.

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ನಗರ ಹೋಬಳಿಯ ರೈತರಿಗೆ ಮಹಿಳಾ ಸ್ವ- ಸಹಾಯ ಗುಂಪುಗಳಿಗೆ ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಡಿಸಿಸಿ ಬ್ಯಾಂಕ್ ನ ಹೊಸ ಬ್ರಾಂಚನ್ನು ಹೊಸದಾಗಿ ಆರಂಭಿಸುವ ಉದ್ದೇಶದಿಂದ ಜಾಗವನ್ನು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಸದ್ಯದಲ್ಲೇ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಶಿಮುಲ್ ಅಧ್ಯಕ್ಷರಾದ ಗುರುಶಕ್ತಿ ವಿದ್ಯಾಧರ್, ನಗರ ಶ್ರೀಕಂಠೇಶ್ವರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಅಂಬರೀಶ್, ನೀಲಕೃಷ್ಣ, ಗೋಪಾಲ ಶೆಟ್ಟಿ, ಕರುಣಾಕರ ಶೆಟ್ಟಿ, ಡಾ. ಪ್ರದೀಪ್ ಡಿಮ್ಯಾಲೋ, ಸತೀಶ್ ಪಟೇಲ್ ಮತ್ತು ಪ್ರಮುಖರು ಉಪಸ್ಥಿತರಿದ್ದರು.