ಶಿವಮೊಗ್ಗದ ಈದ್ಗಾ ಮೈದಾನ ಕೇವಲ ಆಟದ ಮೈದಾನ; ಏ.5 ರಂದು ಪಾಲಿಕೆ ಜಾಗ ಉಳಿಸಲು ಒತ್ತಾಯಿಸಿ ರಾಷ್ಟ್ರಭಕ್ತರ ಧರಣಿ – ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗದ ಈದ್ಗಾ ಮೈದಾನ ಕೇವಲ ಆಟದ ಮೈದಾನ;

ಏ.5 ರಂದು ಪಾಲಿಕೆ ಜಾಗ ಉಳಿಸಲು ಒತ್ತಾಯಿಸಿ ರಾಷ್ಟ್ರಭಕ್ತರ ಧರಣಿ

– ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ

ಡಿಸಿ ಕಚೇರಿ ಎದುರು ಇರೋ ಜಾಗ ಈದ್ಗಾ ಮೈದಾನ ಅಲ್ಲ ಆಟದ ಮೈದಾನ. ಅದನ್ನು ಕಬಳಿಸಲು ಮುಸ್ಲೀಮರು ಪ್ರಯತ್ನಿಸ್ತಿದ್ದಾರೆ. ಜಿಲ್ಲಾಡಳಿತ, ಪಾಲಿಕೆ ಯೋಚನೆ ಮಾಡಿ ಕಾನೂನು ಬದ್ಧವಾಗಿ ಕಾಲಿಡಲಿ.

ಮ್ಯಾಪಲ್ಲಿ ಗ್ರೀನ್ ಕಲರ್ ಇದೆ. ನಗರಾಭಿವೃದ್ಧಿ ಪ್ಲಾನ್ ಪ್ರಕಾರ, ಆಟದ ಮೈದಾನ, ಪಾರ್ಕ್, ಸ್ಮಶಾನ ಆಗಿರಬೇಕು. ಹೇಗೆ ಹೇಗೋ ಅವರು ತಮ್ಮ ವಶದಲ್ಲಿಟ್ಟುಕೊಂಡಿದ್ದಾರೆ. ಹಣ್ಣಿನ ಅಂಗಡಿ ಎಲ್ಲ ತೆರವುಗೊಳಿಸಬೇಕು.

ಪಾಲಿಕೆಯ ಖಾತೆ ಮಾತು ಹೇಳುತ್ತಿದ್ದಾರೆ. ದರ್ಗಾದಲ್ಲಿ 36 ಗುಂಟೆ ಈದ್ಗಾ ಮೈದಾನ ಎಂದು ಮಹಾನಗರ ಪಾಲಿಕೆಯ ಆಯುಕ್ತರೇ ಬರೆದ ಪತ್ರದಲ್ಲಿದೆ. ಭಂಡತನದಲ್ಲಿ ನಮ್ಮದು ನಮ್ಮದು ಎಂದು ಮುಸ್ಲೀಮರು ಹೇಳುತ್ತಿದ್ದಾರೆ.

ಗೆಜೆಟ್ ನೋಟಿಫಿಕೇಷನಲ್ಲಿ ಈದ್ಗಾ ಸುನ್ನಿ ಶಿವಮೊಗ್ಗ ಎಂದಿದ್ದು, ಅದರಲ್ಲಿ ಅಡ್ರೆಸ್ಸೇ ಇಲ್ಲ. ಖಾತೆ ಆಗಿದೆ. ಆದರೆ, ಕಾನೂನುಬಾಹಿರ.

ರೈಲ್ವೆ ಹಳಿಯಲ್ಲಿ ಬೇಲಿ ಹಾಕಿದವರನ್ನು ಬಂಧಿಸಿ. ಕಾರ್ಪೊರೇಷನ್ ಜಾಗವನ್ನು ಕಾರ್ಪೊರೇಷನ್ನಿಗೇ ಉಳಿಸಿ ಎಂದು ಒತ್ತಾಯಿಸಿ ರಾಷ್ಟ್ರಭಕ್ತರ ಬಳಗದಿಂದ
ಏ.5 ರಂದು ಡಿಸಿ ಕಚೇರಿ ಎದುರು ಧರಣಿ.