ಲಾಡ್ಜ್, ಪೇಯಿಂಗ್ ಗೆಸ್ಟ್ , ಹೋಂ ಸ್ಟೇಗಳ ತೀವ್ರ ತಪಾಸಣೆ ನಡೆಸಿದ ಪೊಲೀಸರು* *ಯಾಕೆ ಈ ತೀವ್ರ ತಪಾಸಣೆ?*

*ಲಾಡ್ಜ್, ಪೇಯಿಂಗ್ ಗೆಸ್ಟ್ , ಹೋಂ ಸ್ಟೇಗಳ ತೀವ್ರ ತಪಾಸಣೆ ನಡೆಸಿದ ಪೊಲೀಸರು*

*ಯಾಕೆ ಈ ತೀವ್ರ ತಪಾಸಣೆ?*

ಶಿವಮೊಗ್ಗ ಜಿಲ್ಲೆಯಾದ್ಯಂತ ಇರುವ ಲಾಡ್ಜ್ ಗಳು, ಹೋಂ ಸ್ಟೇಗಳ ಮೇಲೆ ಪೊಲೀಸರು ಕಾವಲು ಕಣ್ಣು ಹಾಕಿದ್ದು, ತೀವ್ರ ತಪಾಸಣೆ ಮಾಡಲಾರಂಭಿಸಿದ್ದಾರೆ.

ಎಸ್ ಪಿ ಮಿಥುನ್ ಕುಮಾರ್ ಜಿ. ಕೆ, ಹೆಚ್ಚುವರಿ ಎಸ್ ಪಿಗಳಾದ ಕಾರಿಯಪ್ಪ ಎ ಜಿ, ಎಸ್ ರಮೇಶ್ ಕುಮಾರ್,* ಹೆಚ್ಚುವರಿ ಪೊಲೀಸ್ ಮಾರ್ಗದರ್ಶನದಲ್ಲಿ, ಜಿಲ್ಲೆಯ ವಿವಿಧ ಪೊಲೀಸ್ ಉಪ ವಿಭಾಗಗಳ ಪೊಲೀಸ್ ಉಪಾಧೀಕ್ಷಕರವರ ಮೇಲ್ವಿಚಾರಣೆಯಲ್ಲಿ, ಶಿವಮೊಗ್ಗ ಜಿಲ್ಲೆಯದ್ಯಂತ ಪೊಲೀಸ್ ನಿರೀಕ್ಷಕರು ಹಾಗೂ ಪೊಲೀಸ್ ಉಪ ನಿರೀಕ್ಷಕರವರ ನೇತೃತ್ವದಲ್ಲಿ ಸಿಬ್ಬಂದಿಗಳ ತಂಡವು ಆಯಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿರುವ ಲಾಡ್ಜ್, ಪೇಯಿಂಗ್ ಗೆಸ್ಟ್ ಮತ್ತು ಹೋಂ ಸ್ಟೇ ಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು.

ತಪಾಸಣೆಯ ಸಂದರ್ಭದಲ್ಲಿ ಲಾಡ್ಜ್, ಪಿ.ಜಿ. ಮತ್ತು ಹೋಂ ಸ್ಟೇ ಗಳಿಗೆ ಬಂದು ತಂಗಿರುವ ಗ್ರಾಹಕರ ಮಾಹಿತಿಯನ್ನು ರಿಜಿಸ್ಟರ್ ನಲ್ಲಿ ನಮೂದು ಮಾಡಿರುವುದನ್ನು ಮತ್ತು ಲಾಡ್ಜ್ ಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿರುವ ಬಗ್ಗೆ ಹಾಗೂ ಅವುಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಸುತ್ತಿರುವ ಬಗ್ಗೆ, ವಿಶೇಷವಾಗಿ ಕಳೆದ 15 ದಿನಗಳಲ್ಲಿ ಬಂದು ತಂಗಿದ್ದ ಗ್ರಾಹಕರ ಮಾಹಿತಿಯನ್ನು ಪರಿಶೀಲನೆ ಮಾಡಿದರು.

ಆನಂತರ ಲಾಡ್ಜ್, ಪಿ.ಜಿ. ಮತ್ತು ಹೋಂ ಸ್ಟೇಗಳ ವ್ಯವಸ್ಥಾಪಕರಿಗೆ ತಂಗಲು ಬರುವ ಗ್ರಾಹಕರುಗಳ ಹೆಸರು, ವಿಳಾಸ ಹಾಗೂ ಮೊಬೈಲ್ ನಂಬರ್ ಸೇರಿದತೆ ಸಂಪೂರ್ಣ ಮಾಹಿತಿಯನ್ನು ಪಡೆದು ರಿಜಿಸ್ಟರ್ ನಲ್ಲಿ ನಮೂದು ಮಾಡಲು, ಗ್ರಾಹಕರು ನೀಡುವ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿ ಅವರದ್ದೇ ಮೊಬೈಲ್ ನಂಬರ್ ಎಂದು ಖಚಿತ ಪಡಿಸಿಕೊಳ್ಳಲು, ಗ್ರಾಹಕರ ಐಡಿ ಕಾರ್ಡ್ ನ ಜೆರಾಕ್ಸ್ ಪ್ರತಿಯನ್ನು ಪಡೆಯಲು, ಲಾಡ್ಜ್ ಗೆ ಬರುವ ಗ್ರಾಹಕರ ತಂಗುವ ಉದ್ದೇಶವನ್ನು ಕೇಳಿ ಪಡೆದು ರಿಜಿಸ್ಟರ್ ನಲ್ಲಿ ನೋಂದಾಯಿಸಲು ಸೂಚನೆ ನೀಡಿದರು.

ಒಂದುವೇಳೆ ಗ್ರಾಹಕರುಗಳ ಬಗ್ಗೆ ಯಾವುದೇ ಅನುಮಾನ ಕಂಡು ಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸೂಚನೆಗಳನ್ನು ಸಹಾ ನೀಡಿದ್ದಾರೆ.