ರಾಜ್ಯದಲ್ಲಿ ಹೆಚ್ಚುತ್ತಿರುವ ಹಠಾತ್ ಹೃದಯಾಘಾತ ಪ್ರಕರಣ ಹೃದಯಾಘಾತ ತಡೆಗಟ್ಟಲು ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ವ್ಯವಸ್ಥೆ ಕಲ್ಪಿಸಿ – ಡಾ.ಧನಂಜಯ ಸರ್ಜಿ
ರಾಜ್ಯದಲ್ಲಿ ಹೆಚ್ಚುತ್ತಿರುವ ಹಠಾತ್ ಹೃದಯಾಘಾತ ಪ್ರಕರಣ
ಹೃದಯಾಘಾತ ತಡೆಗಟ್ಟಲು ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ವ್ಯವಸ್ಥೆ ಕಲ್ಪಿಸಿ – ಡಾ.ಧನಂಜಯ ಸರ್ಜಿ
ಬೆಂಗಳೂರು : ಹೃದಯಾಘಾತವಾದಂತಹ ಸಂಧರ್ಭದಲ್ಲಿ ಇ.ಸಿ.ಜಿ ಪರೀಕ್ಷೆ ಮಾಡಲಾಗುತ್ತದೆ. ಆದರೆ ಇ.ಸಿ.ಜಿ ಪರೀಕ್ಷೆಯಿಂದ ಸ್ಪಷ್ಟವಾಗಿ ದೃಢವಾಗುವುದಿಲ್ಲ, ಹೃದಯ ಸಂಬಂಧಿ ಕಾಯಿಲೆ ಇದ್ದು ಧೂಮಪಾನದ ಅಭ್ಯಾಸವಿದ್ದರೆ ಟಿ.ಎಂ.ಟಿ ಮಾಡಬೇಕು ಆದರೆ ರಾಜ್ಯದ ಯಾವ ತಾಲೂಕು ಆಸ್ಪತ್ರೆಯಲ್ಲೂ ಟಿ.ಎಂ.ಟಿ ವ್ಯವಸ್ಥೆ ಇಲ್ಲ. ಹೃದಯಾಘಾತದ ಲಕ್ಷಣ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನೂ ಗುರುತಿಸುವುದಕ್ಕೆ ಟ್ರೋಪೋನಿನ್ ಐ ಪರೀಕ್ಷೆ ಮಾಡಲಾಗುತ್ತದೆ ಆದರೆ ರಾಜ್ಯದ ಆದರೆ ಟ್ರೋಪೋನಿನ್ ಐ ರಾಜ್ಯದ ಯಾವ ತಾಲೂಕು ಆಸ್ಪತ್ರೆಯಲ್ಲಿ ಲಭ್ಯವಿಲ್ಲ ಎಂದು ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಸೋಮವಾರ ನಡೆದ ವಿಧಾನ ಪರಿಷತ್ ಅಧಿವೇಶನದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡು ರಾವ್ ಅವರಿಗೆ ಹೇಳಿದರು.
ಆರೋಗ್ಯ ಸಚಿವರ ಉಲ್ಲೇಖದ ಪ್ರಕಾರ ರಾಜ್ಯದಲ್ಲಿ 2022ರಲ್ಲಿ 5,800 ಜನ, 2023ರಲ್ಲಿ 15,000 ಜನ, 2024 ರಿಂದ 2025 ರೊಳಗೆ 17,000 ಜನ ಕಾರ್ಡಿಯಾಕ್ ನಿಂದ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ 61,299 ಜನರನ್ನು ಪರೀಕ್ಷೆಗೆ ಒಳಪಡಿಸಿದಾಗ ಅದರ ವರದಿಯ ಪ್ರಕಾರ ಶೇ 60% ಧೂಮಪಾನದಿಂದ, ಡಯಾಬಿಟೀಸ್ ಶೇ 10%, ಒತ್ತಡದಿಂದ ಶೇ 10 %, ಬೊಜ್ಜಿನಿಂದ ಶೇ 10%, ತಂದೆ-ತಾಯಿಗಳಿಂದ ಶೇ 10 % ಎಂದು ವರದಿ ಹೇಳುತ್ತದೆ. ಈ ವರದಿಯನ್ನು ನೋಡಿದರೇ ಕೇವಲ ಇ.ಸಿ.ಜಿ ಯಿಂದ ಮಾತ್ರ ಹೃದಯಾಘಾತ ಇರುವುದು ದೃಢವಾಗುವುದಿಲ್ಲ. ಹೃದಯಘಾತವನ್ನು ಕಂಡುಹಿಡಿಯಲು ಉತ್ತಮ ಪರೀಕ್ಷೇ ಎಂದರೆ ಟಿ.ಎಂ.ಟಿ ಪರೀಕ್ಷೆ, ರಾಜ್ಯದ ಯಾವ ತಾಲೂಕು ಆಸ್ಪತ್ರೆಯಲ್ಲೂ ಟಿ.ಎಂ.ಟಿ ಪರೀಕ್ಷೆ ಲಭ್ಯವಿಲ್ಲ, ಟಿ.ಎಂ.ಟಿ ಪರೀಕ್ಷೆ ಮಾಡುವುದಕ್ಕೆ ಕಷ್ಟವಾದರೆ ಎಲ್ಲಿ ಕ್ಯಾತ್ ಲ್ಯಾಬ್ ವ್ಯವಸ್ಥೆ ಇದೆ ಆ ಸ್ಥಳಗಳಲ್ಲಿ ರಾಜ್ಯ ಸರ್ಕಾರ ಟಿ.ಎಂ.ಟಿ ಪರೀಕ್ಷೆಯನ್ನು ಆಯುಷ್ಮಾನ್ ಮತ್ತು ಎ.ಬಿ.ಆರ್.ಕೆ ಯೋಜನೆ ಅಡಿ ಉಚಿತವಾಗಿ ಮಾಡಲಿ ಎಂದು ಒತ್ತಾಯಿಸಿದರು.
ಹೃದಯಾಘಾತವನ್ನು ಕಂಡು ಹಿಡಿಯಲು ಇನ್ನೊಂದು ಉತ್ತಮ ಪರೀಕ್ಷೆ ಎಂದರೆ ಟ್ರೋಪೋನಿನ್ ಐ ಪರೀಕ್ಷೆ, ಟ್ರೋಪೋನಿನ್ ಐ ಎನ್ನುವುದು ಹೃದಯ ಸ್ನಾಯು ಮತ್ತು ಅಸ್ಥಿಪಂಜರದ ಸ್ನಾಯುಗಳಲ್ಲಿ ಕಂಡುಬರುವ ಒಂದು ಪ್ರೋಟೀನ್ ಅಂಶ, ಹೃದಯಾಘಾತದ ಸಂಧರ್ಭದಲ್ಲಿ ಈ ಪ್ರೋಟೀನ್ ಹೆಚ್ಚಾಗುತ್ತದೆ. ಹೃದಯಾಘಾತವಾದಾಗ ಅವರ ರಕ್ತದಲ್ಲಿ ಈ ಪ್ರೊಟೀನ್ ಪರೀಕ್ಷೆ ಮಾಡಬೇಕು, ಆ ಪ್ರೋಟೀನ್ ಹೆಚ್ಚಿದ್ದರೆ ಅವರಿಗೆ ಹೃದಯಾಘಾತ ಆಗಿದೆ ಎಂದು ದೃಢವಾಗುತ್ತದೆ. ಆದ್ದರಿಂದ ಟ್ರೋಪೋನಿನ್ ಐ ಪರೀಕ್ಷೆ ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಲಭ್ಯವಿರುವ ವ್ಯವಸ್ಥೆಯನ್ನು ಸರ್ಕಾರ ಮತ್ತು ಆರೋಗ್ಯ ಇಲಾಖೆ ಮಾಡಬೇಕು. ಮತ್ತು ಟೆನೆಕ್ಟೆಪ್ಲೇಸ್ ಇಂಜೆಕ್ಷನ್ ಅಂತ ಹೃದಯಾಘಾತವಾದ ಸಂದರ್ಭದಲ್ಲಿ ಈ ಇಂಜೆಕ್ಷನ್ ನೀಡಿದರೆ ಪ್ರಾಣ ಉಳಿಸಬಹುದು, ಈ ಟೆನೆಕ್ಟೆಪ್ಲೇಸ್ ಇಂಜೆಕ್ಷನ್ ಕೆಲವೊಂದು ತಾಲೂಕುಗಳಲ್ಲಿ ಮಾತ್ರ ಲಭ್ಯವಿದೆ. ಆದರಿಂದ ಯಾವ ಯಾವ ಜಿಲ್ಲೆಗಳಲ್ಲಿ ಸ್ಟಂಟ್ ಹಾಕುವ ವ್ಯವಸ್ಥೆ ಇಲ್ಲ ಉದಾಹರಣೆಗೆ ಹಾವೇರಿ, ಸಿರಸಿ ಮತ್ತು ಮಡಿಕೇರಿ ಚಾಮರಾಜನಗರ ಇಂತಹ ಜಿಲ್ಲೆಗಳಲ್ಲಿ ಸ್ಟಂಟ್ ಹಾಕುವ ವ್ಯವಸ್ಥೆ ಇಲ್ಲ ಅದಕ್ಕಾಗಿ ಈ ಎಲ್ಲ ತಾಲೂಕುಗಳಲ್ಲಿ ಈ ಇಂಜೆಕ್ಷನ್ ಸಿಗುವಂತೆ ಮಾಡಬೇಕು. ಹೃದಯಾಘಾತವದ ಶೇ 10 % ರೋಗಿಗಳಿಗೆ ಕಾರ್ಡಿಯಾಕ್ ಬೈ ಪಾಸ್ ಸರ್ಜರಿ ಮಾಡಬೇಕಾದ ಅವಶ್ಯಕತೆ ಇರುತ್ತದೆ. ಬೆಂಗಳೂರಿನ ಜಯದೇವ ಆಸ್ಪತ್ರೆ ಮತ್ತು ಗುಲ್ಬರ್ಗದಲ್ಲಿ ಮಾತ್ರ ಈ ವ್ಯವಸ್ಥೆ ಇದೆ, ಮಧ್ಯ ಕರ್ನಾಟಕದಿಂದ 500 ಕಿ ಮೀ ದೂರ ಈ ಚಿಕಿತ್ಸೆಗೆ ಹೋಗಬೇಕು ಆದ್ದರಿಂದ ಮಧ್ಯ ಕರ್ನಾಟಕದಲ್ಲಿ ಶಿವಮೊಗ್ಗ ಮತ್ತು ಹುಬ್ಬಳ್ಳಿಯಲ್ಲಿ ಕಾರ್ಡಿಯಾಕ್ ಬೈ ಪಾಸ್ ಸರ್ಜರಿ ಸಿಗುವಂತೆ ರಾಜ್ಯ ಸರ್ಕಾರ ಕ್ರಮ ವಹಿಸಬೇಕು. ಯಾವ ಯಾವ ಜಿಲ್ಲೆಗಳಲ್ಲಿ ಕ್ಯಾತ್ ಲ್ಯಾಬ್ ವ್ಯವಸ್ಥೆ ಇಲ್ಲ ಉದಾಹರಣೆಗೆ ಚಾಮರಾಜನಗರ, ಚಿಕ್ಕಮಗಳೂರು, ಹಾವೇರಿ, ಶಿರಸಿ ಅದೇ ರೀತಿ ಯಾವ ಯಾವ ಜಿಲ್ಲೆಯಲ್ಲಿ ರೋಗಿಗಳು ಹೆಚ್ಚಿದ್ದಾರೆ ಉದಾಹರಣೆಗೆ ಉಡುಪಿ ಮತ್ತು ಮಂಗಳೂರು ಜಿಲ್ಲೆಗಳಿಗೆ ಕ್ಯಾತ್ ಲ್ಯಾಬ್ ವ್ಯವಸ್ಥೆ ಕಲ್ಪಿಸಬೇಕು ಅಥವಾ ಎಲ್ಲ ಸರ್ಕಾರೀ ಮೆಡಿಕಲ್ ಕಾಲೇಜು ಗಳಲ್ಲಿ ಈ ವ್ಯವಸ್ಥೆ ಸಿಗುವಂತೆ ವ್ಯವಸ್ಥೆ ಮಾಡಬೇಕು, ಮುಂದುವರೆದು ಗ್ಯಾರಂಟೀ ಯೋಜನೆಗಳ ಜಾಹಿರಾತಿಗೆ ಸರ್ಕಾರ ಕೋಟಿಗಟ್ಟಲೆ ದುಡ್ಡನ್ನು ವ್ಯಯಿಸುತ್ತಿದೆ ಅದರ ಬದಲಾಗಿ ಸರ್ಕಾರ ರಾಜ್ಯದಲ್ಲಿ ಹೃಧಯಾಘಾತ ಹೆಚ್ಚುತ್ತಿರುವ ಸಂದರ್ಭದಲ್ಲಿ ರಾಜ್ಯದ ಪತ್ರಿಕೆಗಲ್ಲಿ, ಮಾಧ್ಯಮಗಳಲ್ಲಿ ಮತ್ತು ಸಿನಿಮಾ ಮಂದಿರಗಳಲ್ಲಿ ಜಾಹಿರಾತು ನೀಡಿ, ಆರೋಗ್ಯ ಜಾಗೃತಿ ಮೂಡಿಸಲಿ ಇದರಿಂದ ರಾಜ್ಯದ ಜನತೆಯ ಆರೋಗ್ಯ ಕಾಪಾಡಬಹುದು ಎಂದು ಒತ್ತಾಯಿಸಿದರು.
ಈ ವೇಳೆ ಪ್ರತಿಕ್ರಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡು ರಾವ್ ಆಯುಷ್ಮಾನ್ ಯೋಜನೆ ಅಡಿ ವೈದ್ಯಕೀಯ ವ್ಯವಸ್ಥೆಯನ್ನು ನೀಡಲು ಪ್ರಯತ್ನ ಮಾಡುತ್ತೇವೆ, ಟ್ರೋಪೋನಿನ್ ಐ ಪರೀಕ್ಷೆ ಎಲ್ಲ ಆಸ್ಪತ್ರೆಗಳಲ್ಲೂ ಸಿಗುವಂತೆ ಅವಕಾಶ ಮಾಡಿಕೊಡುತ್ತೇವೆ ಟೆನೆಕ್ಟೆಪ್ಲೇಸ್ ಇಂಜೆಕ್ಷನ್ ರಾಜ್ಯದ 86 ತಾಲೂಕು ಆಸ್ಫತ್ರೆಗಳಲ್ಲಿ ಲಭ್ಯವಿದೆ ಇದನ್ನು ಪ್ರತಿ ತಾಲೂಕಿನಲ್ಲಿ ಲಭ್ಯವಿರುವಂತೆ ವ್ಯವಸ್ಥೆ ಕಲ್ಪಿಸುತ್ತೇವೆ. ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣ ಪ್ರಕಾಶ್ ಪಾಟೀಲ್ ಅವರ ಜೊತೆಗೆ ಚರ್ಚೆ ನಡೆಸಿ ಎಲ್ಲೆಲ್ಲಿ ಕ್ಯಾತ್ ಲ್ಯಾಬ್ ವ್ಯವಸ್ಥೆ ಬೇಕಾಗುತ್ತದೆ ಅಲ್ಲಿ ಸಿಗುವಂತೆ ಮಾಡಿತ್ತೇವೆ ಎಂದರು. ಗೃಹ ಆರೋಗ್ಯ ಯೋಜನೆ ಅಡಿ ಹೃದಯ ಸಂಬಂಧಿ ಕಾಯಿಲೆ ಇರುವ ರೋಗಿಗಳನ್ನು ಪತ್ತೆ ಹಚ್ಚಲು ಮತ್ತು ಈ ಬಗ್ಗೆ ಜಾಗೃತಿ ಮೂಡಿಸಲು ಶ್ರಮಿಸುತ್ತಿದೆ ಎಂದು ಹೇಳಿದರು.