ಪಡಿತರ ಅಕ್ಕಿ ವಿತರಣೆ*; *ಈ ತಿಂಗಳಿಂದ ಹಣದ ಬದಲು 5 ಕೆ.ಜಿ.ಹೆಚ್ಚು ಅಕ್ಕಿ*
*ಪಡಿತರ ಅಕ್ಕಿ ವಿತರಣೆ*; *ಈ ತಿಂಗಳಿಂದ ಹಣದ ಬದಲು 5 ಕೆ.ಜಿ.ಹೆಚ್ಚು ಅಕ್ಕಿ* ಶಿವಮೊಗ್ಗ; ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯಡಿ ಅಂತ್ಯೋದಯ ಮತ್ತು ಆದ್ಯತಾ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮುಖಾಂತರ ಹಣ ವರ್ಗಾಯಿಸಲಾಗುತ್ತಿದ್ದು, ಫೆಬ್ರವರಿ-2025 ರಿಂದ ಜಾರಿಗೆ ಬರುವಂತೆ 5 ಕೆ.ಜಿ. ಅಕ್ಕಿಯನ್ನು ಮಾರ್ಚ್-2025ರ ಮಾಹೆಯ ಪಡಿತರ ವಿತರಣೆಯೊಂದಿಗೆ ಸೇರಿಸಿ ವಿತರಿಸಲು ಸರ್ಕಾರವು ಆದೇಶಿಸಿದೆ. ಅಂತ್ಯೋದಯ ಪಡಿತರ ಚೀಟಿಗೆ ಕೇಂದ್ರದಿಂದ 3 ಸದಸ್ಯರವರೆಗಿನ ಪಡಿತರ ಚೀಟಿಗೆ 35 ಕೆ.ಜಿ. ಹಾಗೂ ರಾಜ್ಯದಿಂದ 4 ಸದಸ್ಯ…