ಸಾರಂಗರಾಜ್ ರವರ ಮೂರು ಮುಖ್ಯ ಕವಿತೆಗಳು
ಹುಚ್ಚು ಪ್ರೀತಿ *********** ಮೊದಲು ಅರಿಯದೆ ಮೆಚ್ಚಿಕೊಂಡೆ ಹಚ್ಚಿಕೊಳ್ಳಲಿಲ್ಲ,? ಈಗ ಅರಿತು ಮೆಚ್ಚಿಕೊಂಡೆ ಬಿಟ್ಟೂಬಿಡದೆ ಹಚ್ಚಿಕೊಂಡೆ..! ಸಿಗುವುದು ತಡವಾಯಿತು ಎಂದು ತಲೆ ಚಚ್ಚಿಕೊಂಡೆ.., ಸ್ನೇಹ ಪ್ರೀತಿಯ ಉದ್ದಗಲಕೂ ಈಜಾಡಿ ಹುಚ್ಚು ಹೆಚ್ಚಿಸಿಕೊಂಡೆ..! ೨ ಸಿಹಿಕಹಿ ಪಯಣ **************** ಮೋಡದ ಗೂಡಲ್ಲಿ ಹದವಾಗುತ, ಮೆಲ್ಲನೆ ಗೂಡ ಕದವ ತೆರೆದು, ರಪ್ಪನೆ ನೆಲಕ್ಕೆ ಅಪ್ಪಳಿಸಿ ತಾನೇ ಖುಷಿ ಫಡುವ ಹನಿಗಳ ಬಾಲೆ ನನ್ನ ಗೆಳತಿ.., ಕಾಡು ಮೇಡು ಹಳ್ಳಕೊಳ್ಳ ಅಲೆದು, ಝರಿತೊರೆ ನದಿಯ ಹೆಸರು ತೊಟ್ಟು, ಹಸಿದ ಹೊಟ್ಟೆಗೆ ಅನ್ನವನಿಟ್ಟು,…