Headlines

ದೂರದೃಷ್ಟಿಯ ಅಭಿವೃದ್ಧಿ ಪರ ಬಜೆಟ್ ಎಂದ ರಾಜ್ಯ ಜವಳಿ ಮೂಲ ಸೌಲಭ್ಯ ನಿಗಮದ ಅಧ್ಯಕ್ಷ ಚೇತನ್ ಕೆ ಗೌಡ

ದೂರದೃಷ್ಟಿಯ ಅಭಿವೃದ್ಧಿ ಪರ ಬಜೆಟ್ ಎಂದ ರಾಜ್ಯ ಜವಳಿ ಮೂಲ ಸೌಲಭ್ಯ ನಿಗಮದ ಅಧ್ಯಕ್ಷ ಚೇತನ್ ಕೆ ಗೌಡ ಶಿವಮೊಗ್ಗ :ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನ ಸಭೆಯಲ್ಲಿ ಮಂಡಿಸಿದ ೨೦೨೬- ೨೭ ನೇ ಸಾಲಿ‌ನ ಬಜೆಟ್ ದೂರದೃಷ್ಟಿಯ ಆಲೋಚನೆಯ ಅಭಿವೃದ್ದಿ ಪರ ಬಜೆಟ್ ಆಗಿದ್ದು, ಎಲ್ಲಾ ಕ್ಷೇತ್ರಗಳಿಗೆ ಆದ್ಯತೆ‌ ನೀಡಿರುವುದು ವಿಶೇಷವಾಗಿದೆ ಎಂದು ರಾಜ್ಯ ಜವಳಿ ಮೂಲ ಸೌಲಭ್ಯ ನಿಗಮದ ಅಧ್ಯಕ್ಷ ಚೇತನ್ ಕೆ ಗೌಡ ಅಭಿಪ್ರಾಯಿಸಿದ್ದಾರೆ. ರಾಜ್ಯದ ಜನರ ಜನಮನ್ನಣೆ ಪಡೆದ ಪಂಚ ಗ್ಯಾರಂಟಿ…

Read More

ಯುವ ಸಮುದಾಯಕ್ಕೆ ಕೊಡುಗೆ ನೀಡಿದ ಬಜೆಟ್ ; ಹೆಚ್.ಪಿ.ಗಿರೀಶ್

ಯುವ ಸಮುದಾಯಕ್ಕೆ ಕೊಡುಗೆ ನೀಡಿದ ಬಜೆಟ್ ; ಹೆಚ್.ಪಿ.ಗಿರೀಶ್ *ಮುಖ್ಯಮಂತ್ರಿ ಸಿದ್ದರಾಮಯ್ಯನವರ 17ನೇ ಬಜೆಟ್ – ಬದ್ಧತೆಯ ಬಜೆಟ್ ಆಗಿದೆ, ಗ್ಯಾರೆಂಟಿ ಯೋಜನೆಗಳ ಜೊತೆಗೆ ,ಅಭಿವೃದ್ಧಿಪರ ,ಉದ್ಯೋಗಕ್ಕೆ ಆದ್ಯತೆ ಬಜೆಟ್ ನಲ್ಲಿ ನೀಡಿದ್ದಾರೆ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಗೆ 54,000 ಸರ್ಕಾರಿ ಹುದ್ದೆಗಳ ನೇಮಕಕ್ಕೆ ಒತ್ತು ನೀಡಿದ್ದು, ಖಾಸಗಿ ವಲಯದ ಉದ್ಯೋಗ ಸೃಷ್ಟಿಗೆ ವ್ಯಾಪಾರ, ಕೈಗಾರಿಕಾ ಕ್ಷೇತ್ರದಲ್ಲಿ ಪೂರಕವಾದ ಯೋಜನೆಯನ್ನು ಜಾರಿ ಮಾಡಿ ಸಾಕಷ್ಟು ಒತ್ತು ನೀಡಿರುವುದು ಯುವ ಸಮುದಾಯಕ್ಕೆ ನೀಡಿದ ಕೊಡುಗೆಯಾಗಿದೆ* *ಹೆಚ್….

Read More

ತುಷ್ಟೀಕರಣ  ರಾಜಕಾರಣ ಬಿಟ್ಟು ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿ; *ರಾಜ್ಯ ಸರ್ಕಾರಕ್ಕೆ ಡಿ.ಎಸ್. ಅರುಣ್ ಆಗ್ರಹ*

ತುಷ್ಟೀಕರಣ  ರಾಜಕಾರಣ ಬಿಟ್ಟು ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿ; *ರಾಜ್ಯ ಸರ್ಕಾರಕ್ಕೆ ಡಿ.ಎಸ್. ಅರುಣ್ ಆಗ್ರಹ* ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ಅನೇಕ ಬಾರಿ ಬಜೆಟ್ ಮಂಡಿಸಿರುವುದು ಒಂದು ದಾಖಲೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದರೆ ದುರದೃಷ್ಟವಶಾತ್, ಆ ದಾಖಲೆಗಳು ರಾಜ್ಯದ ಸಮಗ್ರ ಅಭಿವೃದ್ಧಿಯ ಪ್ರತಿಬಿಂಬವಾಗದೆ ಕರ್ನಾಟಕ ನಿಧಾನವಾಗಿ ಹಿನ್ನಡೆಯತ್ತ ಸಾಗುತ್ತಿರುವ ವಾಸ್ತವಿಕತೆಯನ್ನು ತೋರಿಸುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ವಿಧಾನಪರಿಷತ್ ಸದಸ್ಯರಾದ ಡಿ.ಎಸ್.ಅರುಣ್ ಹೇಳಿದ್ದಾರೆ. ಈ ಬಾರಿ ಮಂಡಿಸಿರುವ 17ನೇ ಬಜೆಟ್ ರಾಜ್ಯದ ಭವಿಷ್ಯದ ಅಭಿವೃದ್ಧಿಗೆ…

Read More

ಶಾಲಾ ಶಿಕ್ಷಣ ಮತ್ತು ರಾಜ್ಯ ಬಜೆಟ್; ಉನ್ನತೀಕರಣದತ್ತ ಹೆಜ್ಜೆ- ಮಧು ಬಂಗಾರಪ್ಪ

ಶಾಲಾ ಶಿಕ್ಷಣ ಮತ್ತು ರಾಜ್ಯ ಬಜೆಟ್; ಉನ್ನತೀಕರಣದತ್ತ ಹೆಜ್ಜೆ- ಮಧು ಬಂಗಾರಪ್ಪ 105. 2025-26ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ 184 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ ಹಾಗೂ 50 ಪ್ರೌಢ ಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುಕೂಲ ಕಲ್ಪಿಸಲಾಗಿದೆ. 106. ಖಾಸಗಿ ಶಾಲೆಗಳ ಮಾನ್ಯತೆ ಪಡೆಯುವ ಹಾಗೂ ನವೀಕರಿಸುವ ಪ್ರಕ್ರಿಯೆಯನ್ನು ಆನ್ಲೈನ್ ಮೂಲಕ ಅರ್ಜಿ ಹಾಗೂ ದಾಖಲೆಗಳನ್ನು ಸಲ್ಲಿಸಲು ಅನುಮತಿಸಿ ಸರಳೀಕರಣಗೊಳಿಸಲಾಗಿದೆ. 107. 2025–26ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುವ…

Read More

ಸಾಲದ ಸುಳಿಗೆ ಕರ್ನಾಟಕ ಅಭಿವೃದ್ಧಿಗೆ ಬೀಗ ಹಾಕಿದ ಆಯವ್ಯಯ; ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ

ಸಾಲದ ಸುಳಿಗೆ ಕರ್ನಾಟಕ ಅಭಿವೃದ್ಧಿಗೆ ಬೀಗ ಹಾಕಿದ ಆಯವ್ಯಯ; ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಬೆಂಗಳೂರು : ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್ ಅಭಿವೃದ್ಧಿ ಶೂನ್ಯವಾಗಿದ್ದು, ಕೇವಲ ಮತಬ್ಯಾಂಕ್ ರಾಜಕಾರಣಕ್ಕಾಗಿ ಕರ್ನಾಟಕದ ಭವಿಷ್ಯವನ್ನು ಸಾಲದ ಸುಳಿಗೆ ತಳ್ಳಲಾಗಿದೆ, ಸಾಲ ಮಾಡಿಯಾದರು ತುಪ್ಪ ತಿನ್ನುವ ಸಂಸ್ಕೃತಿಯನ್ನು ಸಿದ್ದರಾಮಯ್ಯನವರು ರಾಜ್ಯದ ಮೇಲೆ ಹೇರುತ್ತಿದ್ದಾರೆ ಎಂದು ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಹೇಳಿದರು. ರಾಜ್ಯದ ಒಟ್ಟು ಸಾಲವು ₹8.14 ಲಕ್ಷ ಕೋಟಿಗೆ ಏರಿದ್ದು, ಸಾಲ-ಜಿಎಸ್‌ಡಿಪಿ ಅನುಪಾತವು ನಿಗಧಿತ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಕೈ ಕೈ ಸೇರಿಬಿಟ್ಟವು; ಗೆರೆಗಳಂತೂ ಯುದ್ಧ ಮಾಡುತ್ತಲೇ ಇದ್ದವು! 2. ತುಟಿಗಳಲ್ಲಿ ಸತ್ಯವು ಕಣ್ಣುಗಳಲ್ಲಿ ಕರುಣೆಯು ಧ್ವನಿಯಲ್ಲಿ ಪ್ರಾರ್ಥನೆಯು ಕೈಗಳಲ್ಲಿ ದಾನವು ಮುಖದಲ್ಲಿ ಮುಗುಳ್ನಗೆಯು ಹೃದಯದಲ್ಲಿ ಪ್ರೀತಿಯು… ಇದ್ದುಬಿಟ್ಟರದೇ ಸುಂದರ ಜೀವನವು! – *ಶಿ.ಜು.ಪಾಶ* 8050112067 (6/3/2026)

Read More

*ಮೊತ್ತ ಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ  ಸಿ ಎಂ ಸಿದ್ದರಾಮಯ್ಯರ ಬಜೆಟ್ ನೇರ ಪ್ರಸಾರ*

*ಮೊತ್ತ ಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ  ಸಿ ಎಂ ಸಿದ್ದರಾಮಯ್ಯರ ಬಜೆಟ್ ನೇರ ಪ್ರಸಾರ* ಬೆಂಗಳೂರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 6 ರಂದು (ಶುಕ್ರವಾರ) ವಿಧಾನಸೌಧದಲ್ಲಿ ಮಂಡಿಸಲಿರುವ 2026–27ನೇ ಸಾಲಿನ ರಾಜ್ಯದ ಆಯವ್ಯಯದ ಬಜೆಟ್ ಭಾಷಣವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಾಜ್ಯದ ಆಯ್ದ ಬಸ್ ನಿಲ್ದಾಣಗಳಲ್ಲಿರುವ ಎಲ್‌ಇಡಿ ಮತ್ತು ಟಿವಿ ಪರದೆಗಳ ಮೂಲಕ ಮೊತ್ತ ಮೊದಲ ಬಾರಿಗೆ ನೇರ ಪ್ರಸಾರ ಮಾಡುತ್ತಿದೆ. ಆರ್ಥಿಕ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 17ನೇ ಬಾರಿ…

Read More

*ಶಿವಮೊಗ್ಗದ ದುರ್ಗಿಗುಡಿಯಲ್ಲಿ ಟ್ರಾಫಿಕ್ ಪೊಲೀಸರು ಮಾಡಿದ್ದೇನು?* *ಜನಪ್ರೀತಿ ಗಳಿಸುತ್ತಿರುವ ಟ್ರಾಫಿಕ್ ಪೊಲೀಸರು!*

*ಶಿವಮೊಗ್ಗದ ದುರ್ಗಿಗುಡಿಯಲ್ಲಿ ಟ್ರಾಫಿಕ್ ಪೊಲೀಸರು ಮಾಡಿದ್ದೇನು?* *ಜನಪ್ರೀತಿ ಗಳಿಸುತ್ತಿರುವ ಟ್ರಾಫಿಕ್ ಪೊಲೀಸರು!* ಶಿವಮೊಗ್ಗದ ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಟ್ರಾಫಿಕ್ ಪೊಲೀಸರು, ವಾಹನ ಸವಾರರು ಹಾಗೂ ಸ್ಥಳೀಯ ಅಂಗಡಿ ವರ್ತಕರಿಗೆ ಒನ್ ವೇ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಸಂಚರಿಸುವುದರ ಬಗ್ಗೆ ಎಚ್ಚರಿಕೆ ನೀಡಿದರು. ಸಂಚಾರ ನಿಯಮ ಉಲ್ಲಂಘನೆಗಳಿಗೆ ITMS ಚಲನ್ ವ್ಯವಸ್ಥೆಯ ಮೂಲಕ ದಂಡವನ್ನು ವಿಧಿಸಲಾಗುತ್ತದೆ ಎಂಬ ಬಗ್ಗೆ ತಿಳಿಸಿ, ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಾಗೃತಿ ಮೂಡಿಸಿದರು. ಅದೇ ಸಮಯದಲ್ಲಿ ಒನ್…

Read More

ಕುವೆಂಪು ವಿವಿ ನಿವೃತ್ತ ಬೋಧಕೇತರ ನೌಕರರ ಸಂಘ ಅಸ್ತಿತ್ವಕ್ಕೆ: ನೂತನ ಅಧ್ಯಕ್ಷರಾಗಿ ರಮೇಶ್ ಶಂಕರಘಟ್ಟ

ಕುವೆಂಪು ವಿವಿ ನಿವೃತ್ತ ಬೋಧಕೇತರ ನೌಕರರ ಸಂಘ ಅಸ್ತಿತ್ವಕ್ಕೆ: ನೂತನ ಅಧ್ಯಕ್ಷರಾಗಿ ರಮೇಶ್ ಶಂಕರಘಟ್ಟ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾನಿಲಯದ ನಿವೃತ್ತ ಬೋಧಕೇತರ ನೌಕರರ ಸಂಘವು ಅಸ್ತಿತ್ವಕ್ಕೆ ಬಂದಿದ್ದು, ಇದರ ನೂತನ ಅಧ್ಯಕ್ಷರಾಗಿ ಕುವೆಂಪು ವಿವಿಯ ನಿವೃತ್ತ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿದ್ದ ಎಂ.ರಮೇಶ್ ಶಂಕರಘಟ್ಟ ನೇಮಕಗೊಂಡಿದ್ದಾರೆ. ಇತ್ತೀಚೆಗೆ ಶಿವಮೊಗ್ಗ ನೆಕ್ಷ್ಟ್ ಇನ್ ಹೋಟೆಲ್‍ನಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವಿರೋಧವಾಗಿ ಇವರು ನೇಮಕಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಎಲ್.ಹೆಚ್. ಬಸವರಾಜ್, ಬಿ,ಎಂ. ಆಮೀರ್, ಕಾರ್ಯದರ್ಶಿಯಾಗಿ ಎಂ.ಸಿದ್ದರಾಮ, ಸಹಕಾರ್ಯದರ್ಶಿಯಾಗಿ ಗಂಗಯ್ಯ, ಹೆಚ್.ಎ.ಪುಟ್ಟೇಗೌಡ, ಖಚಾಂಜಿಯಾಗಿ ಮಂಜುನಾಥ,…

Read More

*ಗಾಂಜಾ ಮಾರುತ್ತಿದ್ದ ಇಬ್ಬರನ್ನು ಬಂಧಿಸಿದ ದೊಡ್ಡಪೇಟೆಯ ಪಿಎಸ್ ಐ ನಾರಾಯಣ ಮಧುಗಿರಿ* *ಏನಿದು ಪ್ರಕರಣ?*

*ಗಾಂಜಾ ಮಾರುತ್ತಿದ್ದ ಇಬ್ಬರನ್ನು ಬಂಧಿಸಿದ ದೊಡ್ಡಪೇಟೆಯ ಪಿಎಸ್ ಐ ನಾರಾಯಣ ಮಧುಗಿರಿ* *ಏನಿದು ಪ್ರಕರಣ?* ಶಿವಮೊಗ್ಗದ ಇಲ್ಯಾಜ್ ನಗರ, ಫಾತಿಮಾ ರಸ್ತೆ, ಮೌಂಟ್ ಹೀರಾ ಶಾಲೆಯ ಬಳಿ, ತುಂಗಾಚಾನಲ್ ಸಮೀಪ ದ್ವಿಚಕ್ರ ವಾಹನ ನಿಲ್ಲಿಸಿಕೊಂಡು ಗಾಂಜಾ ಮಾರುತ್ತಿದ್ದ ಇಬ್ಬರನ್ನು ಬಂಧಿಸಿ ದೊಡ್ಡಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತರನ್ನು ಸವಾಯಿ ಪಾಳ್ಯದ ಮೊಹಮ್ಮದ್ ಹಮ್ಜದ್ ಅಜರುದ್ದೀನ್ @ ಅಜರ್ @ ಫುಕು(28) ಮತ್ತು ವಾದಿಯೇ ಹುದಾದ ವಸೀಂ ಅಕ್ರಂ @ ಸೈಲೆಂಟ್ @ ಗೋಗೋ ಎಂದು ಗುರುತಿಸಲಾಗಿದೆ. *ಪೊಲೀಸ್…

Read More