ವಸುಧೇಂದ್ರ ಬರೆದ ಕಥೆ…ಗುಲ್ಝಾರ್
ಗುಲ್ಜಾರರಿಗೆ ಜ್ಞಾನಪೀಠ ಸಿಕ್ಕ ನೆಪದಲ್ಲಿ ಅವರ ಕತೆಯೊಂದನ್ನು ಓದೋಣ. 25 ವರ್ಷ ಹಿಂದೆ ಅನುವಾದಿಸಿದ್ದು. ಹತ್ತು ಪೈಸೆ ಮತ್ತು ಅಜ್ಜಿ ====≠=========== ಬರೀ ಹತ್ತು ಪೈಸೆಗಾಗಿ ಅಜ್ಜಿಯೊಡನೆ ಜಗಳವಾಡಿದ್ದೇ ನೆಪವಾಗಿ ಚಕ್ಕು ಮನೆ ಬಿಟ್ಟು ಹೊರ ಬಂದಿದ್ದ. ಹಾಗೆ ನೋಡಿದರೆ ಹತ್ತು ಪೈಸೆಯೇನೂ ದೊಡ್ಡದಲ್ಲ. ಗೆಳೆಯ ರಾಮುವಿನ ಕಿಸೆ ಯಾವಾಗಲೂ ಹಣದಿಂದ ಝಣಗುಡುತ್ತದೆ. ಯಾವಾಗ ಬೇಕೆಂದರೆ ಆವಾಗ ರಾಮು ಗಾಳಿಪಟ ಕೊಂಡುಕೊಳ್ಳಬಹುದು. ಒಂದು ಗಾಳಿಪಟ ಕಳೆದುಹೋದ ತಕ್ಷಣ ಅವನು ಮತ್ತೊಂದಕ್ಕೆ ಬಾಲಂಗೋಸಿ ಕಟ್ಟುತ್ತಾನೆ. ಅವನ ದಾರದ ಉಂಡಿಯಲ್ಲಿ…