ಅಶ್ವತ್ಥ್ ಕಲ್ಲೇದೇವರಹಳ್ಳಿ ಅಂಕಣ- ರಸ್ತೆ ನದಿ ಮರ ನೆರಳು ಇವಿಷ್ಟೇ ಡೊಂಕು ಮನಸ್ಸುಗಳು..?
ಬದುಕಿನ ಅನೇಕ ಮಜಲುಗಳಲ್ಲಿ ನಮ್ಮ ದೃಷ್ಟಿಕೋನಗಳು ಕಾಲ ಕಾಲಕ್ಕೆ ಬದಲಾಗುವುದು ಎಷ್ಟು ಸತ್ಯವೂ ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಕೂಡ ಅಷ್ಟೇ ಸತ್ಯ ಹೀಗಿರುವಾಗ ನಮ್ಮ ನಡುವಿನ ಸಂಬಂಧಗಳು ತಿದ್ದಿ ತೀಡಿದಷ್ಟು ಡೊಂಕಾಗಿಯೇ ಉಳಿದುಬಿಡುವುದು ಮತ್ತೊಂದು ರೀತಿಯ ವಿಪರ್ಯಾಸ. ಯಾವಾಗಲೋ ಕರಗಿ ಹೋಗುವ ಮೇಣದಬತ್ತಿಗೆ ಅಡ್ಡಲಾಗಿ ಏನನ್ನಾದರೂ ಮರೆಮಾಚುತ್ತೇವೆ. ಇದರ ಉದ್ದೇಶ ಬೆಳಕು ಇಡೀ ಕೋಣೆಗೆ ಆವರಿಸುತ್ತದೆ ಅನ್ನುವುಕ್ಕಿಂತ ಆ ಮೇಣದಬತ್ತಿಯ ಕ್ಷಣಕಾಲದ ಜೊತೆಗಾರಿಕೆ ಕತ್ತಲೆಯ ಭಯವನ್ನು ಹೋಗಲಾಡಿಸಿ ಒಂದಷ್ಟು ಧೈರ್ಯ ಮತ್ತು ಭರವಸೆಯನ್ನು ಕೊಡುತ್ತದೆ. ಬೆಳಕಿನ ಜೊತೆ ಬದುಕುತ್ತಿದ್ದೇವೆನ್ನುವ…