Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಹ್ಯಾದ್ರಿ ಉತ್ಸವಕ್ಕೆ ಸಂಭ್ರಮದ ಚಾಲನೆಜನಪದ ಕಲೆಗಳು ನಮ್ಮ ಮೂಲ ಸಂಸ್ಕೃತಿಯ ಬೇರುಗಳು: ಜನಪದ ಗಾಯಕ ಮಹದೇವಸ್ವಾಮಿ

ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಹ್ಯಾದ್ರಿ ಉತ್ಸವಕ್ಕೆ ಸಂಭ್ರಮದ ಚಾಲನೆ ಜನಪದ ಕಲೆಗಳು ನಮ್ಮ ಮೂಲ ಸಂಸ್ಕೃತಿಯ ಬೇರುಗಳು: ಜನಪದ ಗಾಯಕ ಮಹದೇವಸ್ವಾಮಿ ಶಂಕರಘಟ್ಟ ಡಿಸೆಂಬರ್ 09: ವಿವಿಧ ಪ್ರಕಾರದ ಜನಪದ ಕಲೆಗಳು ನಮ್ಮ ಬೇರಾಗಿದ್ದು ಅವನ್ನು ಕಲಿಯುವುದು ಜ್ಞಾನ, ಗೌರವ, ಹಣಗಳಿಕೆ ಎಲ್ಲಕ್ಕೂ ದಾರಿ ಎಂದು ಜನಪದ ಹಾಡುಗಾರ ಮಳವಳ್ಳಿ ಮಹದೇವಸ್ವಾಮಿ ಸಲಹೆಯಿತ್ತರು. ಇಲ್ಲಿನ ಕುವೆಂಪು ವಿಶ್ವವಿದ್ಯಾಲಯ ಪಠ್ಯೇತರ ಚಟುವಟಿಕೆ ವಿಭಾಗದ ವತಿಯಿಂದ ವಿಶ್ವವಿದ್ಯಾಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ ‘ಸಹ್ಯಾದ್ರಿ ಉತ್ಸವ- 2024’ಅನ್ನು ಡಿ.09-11ರ ವರೆಗೆ ಆಯೋಜಿಸಲಾಗಿದ್ದು,…

Read More

ಶಿವಮೊಗ್ಗದ ಬಸ್ ನಿಲ್ದಾಣದಲ್ಲಿ  ರಸ್ತೆ ಸುರಕ್ಷತಾ ಅರಿವು ಮೂಡಿಸಿದ ಟ್ರಾಫಿಕ್ ಪಿಎಸ್ ಐ ತಿರುಮಲೇಶ್

ಶಿವಮೊಗ್ಗದ ಬಸ್ ನಿಲ್ದಾಣದಲ್ಲಿ  ರಸ್ತೆ ಸುರಕ್ಷತಾ ಅರಿವು ಮೂಡಿಸಿದ ಟ್ರಾಫಿಕ್ ಪಿಎಸ್ ಐ ತಿರುಮಲೇಶ್ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಆಚರಿಸಲಾಗುತ್ತಿರುವ *ಅಪರಾಧ ತಡೆ ಮಾಸಾಚರಣೆ–2024* ರ ಅಂಗವಾಗಿ ಇಂದು ಬೆಳಗ್ಗೆ  ತಿರುಮಲೇಶ್ ಪಿಎಸ್ಐ, ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ರವರು ಶಿವಮೊಗ್ಗ ನಗರದ ಖಾಸಗಿ ಬಸ್ ನಿಲ್ದಾಣ ಹಾಗೂ KSRCT ಬಸ್ ನಿಲ್ದಾಣದ ಹತ್ತಿರ* ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡು, ಸಾರ್ವಜನಿಕರು, ವಿಧ್ಯಾರ್ಥಿಗಳು, ಬಸ್ ಚಾಲಕರು ಹಾಗೂ ಆಟೋ ಚಾಲಕರಿಗೆ ರಸ್ತೆ ಸುರಕ್ಷತೆ ಬಗ್ಗೆ …

Read More

ಕುವೆಂಪು ವಿವಿಯಲ್ಲಿ ಗಮನ ಸೆಳೆಯುತ್ತಿರುವ ಸಹ್ಯಾದ್ರಿ ಉತ್ಸವ*

*ಕುವೆಂಪು ವಿವಿಯಲ್ಲಿ ಗಮನ ಸೆಳೆಯುತ್ತಿರುವ ಸಹ್ಯಾದ್ರಿ ಉತ್ಸವ* ಕುವೆಂಪು ವಿಶ್ವವಿದ್ಯಾಲಯದ ಪಠ್ಯತರ ಚಟುವಟಿಕೆ ವಿಭಾಗವು ವಿವಿಯ ಆವರಣದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಅಯೋಜಿಸಿರುವ ಮೂರು ದಿನಗಳ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಸಹ್ಯಾದ್ರಿ ಉತ್ಸವಕ್ಕೆ ವಿಶ್ವವಿದ್ಯಾಲಯದ ಕುಲಪತಿ ಶರತ್ ಅನಂತಮೂರ್ತಿ ಅವರು ವಿವಿ ಅವರಣದಲ್ಲಿನ ಕುವೆಂಪು ಪುತ್ತಲಿಗೆ ಮಾಲಾರ್ಪಣೆ ಮಾಡುವ ಮೂಲಕ ಸಾಂಸ್ಕೃತಿಕ ಪಥ ಸಂಚಲನಕ್ಕೆ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ವಿವಿ ಕುಲಸಚಿವ ಎ. ಎಲ್. ಮಂಜುನಾಥ್, ಎಸ್. ಎಂ. ಗೋಪಿನಾಥ್, ಕಾರ್ಯಕ್ರಮ…

Read More

ಕ್ಲಾಟ್ ನಲ್ಲಿ ಕರ್ನಾಟಕಕ್ಕೆ 7ನೇ ರಾಂಕ್ ಪಡೆದ ಅನಿಕೇತನ್; ಯುವ ವಿದ್ಯಾರ್ಥಿಯ ಅಪ್ರತಿಮ ಸಾಧನೆಗೆ ಅಪಾರ ಮೆಚ್ಚುಗೆ

ಕ್ಲಾಟ್ ನಲ್ಲಿ ಕರ್ನಾಟಕಕ್ಕೆ 7ನೇ ರಾಂಕ್ ಪಡೆದ ಅನಿಕೇತನ್; ಯುವ ವಿದ್ಯಾರ್ಥಿಯ ಅಪ್ರತಿಮ ಸಾಧನೆಗೆ ಅಪಾರ ಮೆಚ್ಚುಗೆ ಶಿವಮೊಗ್ಗ : ಮೇಲಿನ ಹನಸವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಡಿ. ವತ್ಸಲ ಹಾಗೂ ‘ಎಚ್ಚರಿಕೆ’ ಪತ್ರಿಕೆಯ ಸಂಪಾದಕ ವೈ.ಕೆ. ಸೂರ್ಯ ನಾರಾಯಣ ದಂಪತಿಯ ಪುತ್ರ ವೈ. ಎಸ್. ಅನಿಕೇತನ್ ಅವರು ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ( ಕ್ಲಾಟ್ )ಯಲ್ಲಿ ಅಖಿಲ ಭಾರತ ಮಟ್ಟದಲ್ಲಿಯೇ ೮೪ನೇ ಶ್ರೇಯಾಂಕದಲ್ಲಿ ತೇರ್ಗಡೆಯಾಗುವ ಮೂಲಕ ಅತ್ತುತ್ತಮ ಸಾಧನೆ ಮಾಡಿದ್ದಾರೆ. ಅನಿಕೇತನ್ ಅವರದ್ದು…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* 1. ನೆಮ್ಮದಿಯ ಮಾತಾಡಬೇಡ ಹೃದಯವೇ, ಬಾಲ್ಯದ ಆ ಭಾನುವಾರ ಮತ್ತೆಲ್ಲಿ ಬರುವುದು?! 2. ಹಸಿವು-ಮೃತ್ಯು-ಪ್ರೇಮ; ದೇವರಂತೆ ಕ್ರೂರಿಯೂ… 3. ಪ್ರತಿಯೊಬ್ಬರ ಗಡಿಯಾರವೂ ಬೇರೆ ಬೇರೆ… ಸಮಯ ಕೂಡ! 4. ಅವಳು ಸೂರ್ಯನಂತಿರಬೇಕು; ಕಂಡವರು ನೋಡಿದರೆ ಕಣ್ಣು ಕುರುಡಾಗಬೇಕು… ಚಂದಿರನಂತಿದ್ದರೂ ಅವತ್ತು ಅಮವಾಸ್ಯೆ ಆವರಿಸಿರಬೇಕು! 5. ಸೇಡು ತೀರಿಸಿಕೊಳ್ಳುವುದಕ್ಕಿಂತ ಸೇತುವೆ ಆಗಿಬಿಡಬೇಕು; ನಂಬಿಕೆಯಿಂದ ಹೆಜ್ಜೆಯಿಟ್ಟು ದಾಟುವರು ಜನ ಆಗಲಾದರೂ… – *ಶಿ.ಜು.ಪಾಶ* 8050112067 (9/12/24)

Read More

ಮಣ್ಣು ರೈತನ ಕಣ್ಣು*ವಿಶ್ವ ಮಣ್ಣಿನ ದಿನ ಆಚರಿಸಿದ ಕೆಳದಿ ಕೃಷಿ- ತೋಟಗಾರಿಕಾ ವಿವಿ

*ಮಣ್ಣು ರೈತನ ಕಣ್ಣು* ವಿಶ್ವ ಮಣ್ಣಿನ ದಿನ ಆಚರಿಸಿದ ಕೆಳದಿ ಕೃಷಿ- ತೋಟಗಾರಿಕಾ ವಿವಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹೊಸಗೊದ್ದನಕೊಪ್ಪ ಗ್ರಾಮದಲ್ಲಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ,ಶಿವಮೊಗ್ಗ, ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ವಿಶ್ವ ಮಣ್ಣಿನ ದಿನವನ್ನು ಆಚರಿಸಿದರು. ವಿಶ್ವ ಮಣ್ಣು ದಿನ 2024 ರ ಘೋಷ ವಾಕ್ಯ *ಮಣ್ಣಿನ ಕಾಳಜಿ: ಅಳತೆ,ಮೇಲ್ವಿಚಾರಣೆ, ನಿರ್ವಹಣೆ* ಆಗಿದೆ. ಡಿಸೆಂಬರ್ 5 ಅನ್ನು ಏಕೆ ಆಯ್ಕೆ…

Read More

ಕೃಷಿ ಅರಣ್ಯದ ಲಾಭಗಳು – ಡಾ. ಮಹೇಶ್ವರಪ್ಪ

ಕೃಷಿ ಅರಣ್ಯದ ಲಾಭಗಳು – ಡಾ. ಮಹೇಶ್ವರಪ್ಪ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ ಶಿವಮೊಗ್ಗ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿಯ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ 2024 ಹಳೇಮುಗಳಗೆರೆ ಗ್ರಾಮದಲ್ಲಿ ಅರಣ್ಯ ಕೃಷಿ ವಿಷಯದ ಕುರಿತು ಗುಂಪು ಚರ್ಚೆ ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಮಹಾವಿದ್ಯಾಲಯದ ಕೃಷಿ ಅರಣ್ಯ ಪ್ರಾಧ್ಯಾಪಕರಾದ ಡಾ. ಮಹೇಶ್ವರಪ್ಪ ಮಾತನಾಡಿ ಪ್ರಸ್ತುತ ದಿನಗಳಲ್ಲಿ ರೈತರು ಕೃಷಿಗಾಗಿ ಸಾಕಷ್ಟು ವೆಚ್ಚ ಮಾಡುತ್ತಿದ್ದು, ಇದನ್ನು ಕಡಿಮೆ…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* 1. ನೋವೇ ನಮಗೆ ನಲಿವು ಬೇವೇ ನಮಗೆ ಸಿಹಿಯು… 2. ಹತ್ತಿರದ ಸುಖವನ್ನು ದೂರ ಎಂಬುದು ಕಲಿಸುತ್ತಲ್ಲ ಹೃದಯವೇ… 3. ಬಾಡಿಗೆಯ ಮೇಲೆ ಸಿಕ್ಕಿದೆ ಈ ಬದುಕು… ನೋಂದಣಿ ಮಾಡಿಸಿಕೊಳ್ಳುವ ಪ್ರಯತ್ನವಂತೂ ವ್ಯರ್ಥವೇ… 4. ನನ್ನ ಒಳ್ಳೆಯ ಕಾಲ ನಾನು ಏನೆಂಬುದನ್ನು ಜಗತ್ತಿಗೆ ತಿಳಿಸಿತು… ನನ್ನ ಕೆಟ್ಟ ಕಾಲ ಜಗತ್ತೇನೆಂಬುದನ್ನು ನನಗೆ ತಿಳಿಸಿತು! 5 ಪ್ರೇಮವೆಂಬುದು ಅರಳಿಮರದ ಬೀಜ; ಎಲ್ಲಿ ಹುಟ್ಟಲು ಸಾಧ್ಯವಿಲ್ಲವೋ ಅಲ್ಲಿ ಅರಳಿ ನರಳಿ ನಳನಳಿಸುತ್ತೆ! – *ಶಿ.ಜು.ಪಾಶ* 8050112067…

Read More