ಶಿವಮೊಗ್ಗದಲ್ಲಿ ಮತ್ತೆ ಮಾರ್ಚ್ 2ರಿಂದ ಸಂದೀಪನ ಓಸಿ ಸಾಮ್ರಾಜ್ಯ ಆರಂಭ?*
*ಶಿವಮೊಗ್ಗದಲ್ಲಿ ಮತ್ತೆ ಮಾರ್ಚ್ 2ರಿಂದ ಸಂದೀಪನ ಓಸಿ ಸಾಮ್ರಾಜ್ಯ ಆರಂಭ?* ಓಸಿ ಗೋಪಿಯ ನಂತರದಲ್ಲಿ ಶಿವಮೊಗ್ಗವೂ ಸೇರಿದಂತೆ ಕಾಲು ಕರ್ನಾಟಕದ ಜಿಲ್ಲೆಗಳಲ್ಲಿ ಓಸಿ ಡಾನ್ ಆಗಿ ಮೆರೆಯುತ್ತಿದ್ದ ಯುವ ಮೀಸೆಯ ಹುಡುಗ ಸಂದೀಪ ಮತ್ತೆ ಓಸಿ ಫೀಲ್ಡಿಗಿಳಿಯಲಿದ್ದು, ಇದೇ ಮಾರ್ಚ್ 2 ಕ್ಕೆ ಕುಂಬಳಕಾಯಿ ಒಡೆಯುವ ಮೂಲಕ ಓಸಿ ದಂಧೆ ಆರಂಭಿಸಲಿದ್ದಾನೆಂಬ ಮಾಹಿತಿಗಳು ಹೊರಬಿದ್ದಿವೆ! ಸಾಕಾಗಿ ಹೋಗಿದೆ, ರೋಸಿ ಹೋಗಿದ್ದೇನೆಂದಲ್ಲ ಹೇಳುತ್ತಲೇ ವ್ಯವಸ್ಥಿತವಾಗಿ ಓಸಿ ಮಾಫಿಯಾವನ್ನು ನಡೆಸುತ್ತಾ, ಬಹಳಷ್ಟು ಕೇಸುಗಳನ್ನು ಪೊಲೀಸರಿಂದ ಜಡಿಸಿಕೊಳ್ಳುತ್ತಾ, ಮತ್ತೊಂದು ಕಡೆ ಅಕ್ರಮವಾಗಿ…