
ಸಂಗೀತ ರವಿರಾಜ್ ಇಂದಿನ ಅಂಕಣ- ಕಡಲ ತಡಿಯ ಭಾರ್ಗವದ ವಿದ್ಯಾಲಯದಲ್ಲಿ ಅರಳಿದ ಮಹಿಳಾ ದಿನಾಚರಣೆ
ಕಡಲ ತಡಿಯ ಭಾರ್ಗವದ ವಿದ್ಯಾಲಯದಲ್ಲಿ ಅರಳಿದ ಮಹಿಳಾ ದಿನಾಚರಣೆ ವಿದ್ಯಾಲಯವೆಂದರೆ ಹೀಗಿರಬೇಕು ಎನ್ನುವ ಉದ್ಘಾರ ದೊಂದಿಗೆ ಮಹಿಳಾ ದಿನಾಚರಣೆಯ ಪ್ರಯುಕ್ತ ಕಾರ್ಯಕ್ರಮವೊಂದನ್ನು ಮುಗಿಸಿ ಪೆರುವಾಜೆಯ ಡಾ . ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ವಿದ್ಯಾಲಯದಿಂದ ಬೀಳ್ಗೊಂಡೆವು. ಇಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರವು ಇದೆ. ಜ್ಞಾನಪೀಠ ಪ್ರಶಸ್ತಿಯನ್ನು ಮುಡಿಗೇರಿಸಿದ ಕಾರಂತರು, ತಮ್ಮ ಹೆಸರಿಟ್ಟ ಈ ವಿದ್ಯಾಲಯವನ್ನು , ಅದರ ಪರಿಸರವನ್ನು ಸ್ವರ್ಗದಿಂದಲೇ(ಅವರದನ್ನು ನಂಬುತ್ತಿರಲಿಲ್ಲ ಎಂಬುದು ಬೇರೆ ಮಾತು) ನೋಡುತ್ತಾ ಎಷ್ಟು ಆನಂದ ಪಡುತ್ತಿರುವರೋ ಎಂದೊಮ್ಮೆ ನನಗೆ…