ಅಶ್ವತ್ಥರ ಅಂಕಣ- ತಿರುವುಗಳಿಲ್ಲದೇ ಕೊನೆಯಾದ ದಾರಿ…
ತಿರುವುಗಳಿಲ್ಲದೇ ಕೊನೆಯಾದ ದಾರಿ… ಅದೆಂದು ಶುರುವಾಗಿದ್ದ ದಾರಿಯೊಂದು ಯಾವ ತಿರುವು ಇಲ್ಲದೆ ಕೊನೆಯಾಗಿದೆ ಕಿರು ಬೆರಳಿಡಿದ ಕೈಯೊಂದು ತಂತಾನೆ ಬಿಗಿ ಸಡಿಲಿಸಿದೆ ಹೆಜ್ಜೆಯೊಳಗೆ ಹೆಜ್ಜೆಯಾಗುತ್ತಿದ್ದ ಹೆಜ್ಜೆಗಳು ತಟಸ್ಥವಾಗಿವೆ ಸುತ್ತುವರಿದಿದ್ದ ನೆರಳೊಂದು ಕರಗಿ ಹೋಗಿದೆ ಹೌದು ಈ ಬದುಕಿನ ಹಾದಿಯಲ್ಲಿ ಅಷ್ಟೊಂದು ದೂರದಿಂದ ಜೊತೆಯಾಗಿ ಬಂದ ಭರವಸೆಯೆಂದು ಮರೆಯಾಗಿದೆ. ಹಾಗೆ ನೋಡಿದರೆ ನಮ್ಮಿಬ್ಬರ ನಡುವಿನ ತಾರ್ಕಿಕವಾದವೊನ್ದು ಇತ್ಯರ್ಥವಾಗಬೇಕಿತ್ತು, ಅದಾಗಲೇ ಇಲ್ಲ. ಅದೆಂದೋ ಧಗಧಗಿಸಿ ಕೆಂಡವಾಗಿದ್ದ ಹತಾಶೆಯೊಂದು ಶಮನವಾಗಲೇ ಇಲ್ಲ. ಜೀವಮಾನವಿಡಿ ಸವೆದರು ಆತ್ಮತೃಪ್ತಿ ಎಂಬ ಕಡೆಗೋಲು ಸಂತೃಪ್ತವಾಗಲೇ ಇಲ್ಲ….