ಅಡಿಕೆ ಗೋಡನ್ ಮೇಲೆ ದಾಳಿ- ರಸಾಯನಿಕ ಬಣ್ಣ ಬಳಸಿದಲ್ಲಿ ಕಾನೂನು ಕ್ರಮ : ಡಾ.ಮೈತ್ರಿ
ಅಡಿಕೆ ಗೋಡನ್ ಮೇಲೆ ದಾಳಿ- ರಸಾಯನಿಕ ಬಣ್ಣ ಬಳಸಿದಲ್ಲಿ ಕಾನೂನು ಕ್ರಮ : ಡಾ.ಮೈತ್ರಿ ಶಿವಮೊಗ್ಗ : ಶಿವಮೊಗ್ಗ ನಗರದ ಹೊರವಲಯ ಬುಳ್ಳಾಪುರದಲ್ಲಿ ರೈತರಿಂದ ಅಡಿಕೆ ಖರೀದಿಸಿ, ಅದನ್ನು ಸಂಸ್ಕರಿಸಿ, ದೊಡ್ಡಪ್ರಮಾಣದಲ್ಲಿ ರಾಜ್ಯ, ಹೊರರಾಜ್ಯಗಳಿಗೆ ರವಾನಿಸುವ ಘಟಕಕ್ಕೆ ಭೇಟಿ ನೀಡಿ ಶಿವಮೊಗ್ಗ ಉಪವಿಭಾಗಾಧಿಕಾರಿ ಡಾ.ಮೈತ್ರಿ ಅವರು ಕಂದಾಯ ಇಲಾಖಾ ಅಧಿಕಾರಿಗಳೊಂದಿಗೆ ಭೇಟಿ ಪರಿಶೀಲಿಸಿದರು. ಅಡಿಕೆ ಗೋಡನ್ಗಳಲ್ಲಿ ಅಡಿಕೆಗೆ ಹೆಚ್ಚು ಕೆಂಪು, ಆಕರ್ಷಕ ಬಣ್ಣ ಬರಲೆಂದು ನಿಷೇಧಿತ ಹಾಗೂ ಕಾನೂನು ಬಾಹಿರವಾದ ರಸಾಯನಿಕಯುಕ್ತ ಕೈಗಾರಿಕಾ ಬಣ್ಣಗಳನ್ನು ಬಳಸುತ್ತಿರುವ ಬಗ್ಗೆ…


