ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಮಹಿಳಾ ದಿನಾಚರಣೆ ಹೆಣ್ತನವೇ ಈ ಪ್ರಕೃತಿಯ ಅಂತಿಮ ಸತ್ಯ; ಡಾ.ಶುಭ ಮರವಂತೆ
ಶಿವಮೊಗ್ಗ: ಹೆಣ್ತನವೇ ಈ ಪ್ರಕೃತಿಯ ಅಂತಿಮ ಸತ್ಯ. ಅದೇ ಈ ಜಗತ್ತನ್ನು ಕಾಪಾಡುವ ಶಕ್ತಿ ಎಂದು ಸಹ್ಯಾದ್ರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಶುಭಾ ಮರವಂತೆ ಹೇಳಿದರು. ಅವರು ಶನಿವಾರ ಸಂಜೆ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದಿಂದ ಆದಿ ಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದು ನಮ್ಮ ಮುಂದೆ ಇರುವುದು ಪ್ರಬುದ್ಧ ಮಹಿಳೆಯ ಚಿಂತನೆಯಾಗಿದೆ. ಮಹಿಳೆಯರು ತಮಗಿರುವ ಅಡೆ ತಡೆಗಳ ಬಗ್ಗೆ ಯೋಚಿಸದೇ ಅವುಗಳನ್ನು ಮೀರಿ ಚಿಂತಿಸಬೇಕಾಗಿದೆ. ಮಹಿಳೆಯರಿಗೆ…