Category: ಇದೀಗ ಬಂದ ಸುದ್ದಿ
ನಿವೃತ್ತಿ ಘೋಷಿಸಿದ ಓಸಿ ಡಾನ್ ಸಂದೀಪ ಮುಂದಿನ ಓಸಿ ಡಾನ್ ಅಕಾರಿ ಪ್ರಕಾಶ್?! ಯಾರು ಈ ಅಕಾರಿ ಪ್ರಕಾಶ? ಎಲ್ಲೆಲ್ಲಿ ಇವನು ಮಾಡಿದ ಓಸಿ ಆಸ್ತಿ? ಸಂದೀಪನಿಗೆ ಕೊನೆ ಮೊಳೆ ಹೊಡೆದನೇ ಸ್ಲೀಪಿಂಗ್ ಮೋಡ್ ನಲ್ಲಿದ್ದ ಅಕಾರಿ ಪ್ರಕಾಶ… ಫುಲ್ ಡೀಟೈಲ್ಸ್ ದಾಖಲೆಗಳೊಂದಿಗೆ… ಮಲೆನಾಡು ಎಕ್ಸ್ ಪ್ರೆಸ್ ವಾರಪತ್ರಿಕೆಯಲ್ಲಿ… ನಿಮ್ಮ ಪ್ರತಿ ಕಾಯ್ದಿರಿಸಿ….
ನಿವೃತ್ತಿ ಘೋಷಿಸಿದ ಓಸಿ ಡಾನ್ ಸಂದೀಪ ಮುಂದಿನ ಓಸಿ ಡಾನ್ ಅಕಾರಿ ಪ್ರಕಾಶ್?! ಯಾರು ಈ ಅಕಾರಿ ಪ್ರಕಾಶ? ಎಲ್ಲೆಲ್ಲಿ ಇವನು ಮಾಡಿದ ಓಸಿ ಆಸ್ತಿ? ಸಂದೀಪನಿಗೆ ಕೊನೆ ಮೊಳೆ ಹೊಡೆದನೇ ಸ್ಲೀಪಿಂಗ್ ಮೋಡ್ ನಲ್ಲಿದ್ದ ಅಕಾರಿ ಪ್ರಕಾಶ… ಫುಲ್ ಡೀಟೈಲ್ಸ್ ದಾಖಲೆಗಳೊಂದಿಗೆ… ಮಲೆನಾಡು ಎಕ್ಸ್ ಪ್ರೆಸ್ ವಾರಪತ್ರಿಕೆಯಲ್ಲಿ… ನಿಮ್ಮ ಪ್ರತಿ ಕಾಯ್ದಿರಿಸಿ…. – *ಶಿ.ಜು.ಪಾಶ* 8050112067
ನಿಜದ ನಾರಿಶಕ್ತಿ, ಹೊನ್ನೆಮರಡು ಸಾಹಸಿ ಶ್ರೀಮತಿ ನೊಮಿಟೋ ಕಾಮದಾರ್ ಗೆ ದೊರೆತ ಸುವರ್ಣ ಮಹೋತ್ಸವ ಪ್ರಶಸ್ತಿ*
*ನಿಜದ ನಾರಿಶಕ್ತಿ, ಹೊನ್ನೆಮರಡು ಸಾಹಸಿ ಶ್ರೀಮತಿ ನೊಮಿಟೋ ಕಾಮದಾರ್ ಗೆ ದೊರೆತ ಸುವರ್ಣ ಮಹೋತ್ಸವ ಪ್ರಶಸ್ತಿ* ಕರ್ನಾಟಕ ಸರ್ಕಾರವು ಐವತ್ತರ ಸಂಭ್ರಮದ ಪ್ರಯುಕ್ತ ಸುವರ್ಣ ಮಹೋತ್ಸವ ಪ್ರಶಸ್ತಿಗಳನ್ನು ರಾಜ್ಯೋತ್ಸವದ ಸಂದರ್ಭದಲ್ಲಿಯೇ ಘೋಷಿಸಿದ್ದು, ಶ್ರೀಮತಿ ನೊಮಿಟೋ ಕಾಮದಾರ್(ಶಿವಮೊಗ್ಗ ಜಿಲ್ಲೆ- ಸಾಗರ) ರವರಿಗೂ ಬಂದಿದೆ. ಸುವರ್ಣ ಮಹೋತ್ಸವ ಸಂಭ್ರಮದ ಪ್ರಯುಕ್ತ ರಾಜ್ಯದ 50 ಜನ ಪುರುಷರಿಗೆ ಹಾಗೂ 50 ಜನ ಮಹಿಳಾ ಸಾಧಕಿಯರಿಗೆ ಈ ಪ್ರಶಸ್ತಿಯನ್ನು ಸರ್ಕಾರ ಘೋಷಿಸಿದೆ. ಈ ಪ್ರಶಸ್ತಿಯನ್ನು ಪಡೆದಿರುವ ಶ್ರೀಮತಿ ನೊಮಿಟೋ ಕಾಮದಾರ್ ಜಗತ್ಪ್ರಸಿದ್ಧ ವ್ಯಕ್ತಿತ್ವ…
ಹಸೆ ಚಿತ್ತಾರ ಕರಕುಶಲ ಕಲಾವಿದರಾದ ಸಿರಿವಂತೆ ಚಂದ್ರಶೇಖರ್ ರವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
ಹಸೆ ಚಿತ್ತಾರ ಕರಕುಶಲ ಕಲಾವಿದರಾದ ಸಿರಿವಂತೆ ಚಂದ್ರಶೇಖರ್ ರವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ÷÷÷÷÷÷÷÷÷÷÷÷÷÷÷÷÷÷÷÷÷÷÷ 2024 ಸಾಲಿನ ಕನ್ನಡ ರಾಜ್ಯೋತ್ಸವದ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ ಕರಕುಶಲ ವಿಭಾಗ ದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿನ ಸಾಗರ ತಾಲೂಕಿನ” ಸಿರಿವಂತೆ ಚಂದ್ರಶೇಖರ್ ” ರವರ ಹೆಸರನ್ನು ಘೋಷಿಸಲಾಗಿದೆ. ಸಿರಿವಂತೆ ಚಂದ್ರಶೇಖರ್ ರವರು ಹಸೆ ಚಿತ್ತಾರ ಬಿಡಿಸುವ ಕಾರ್ಯದಲ್ಲಿ ತಮ್ಮ ವೃತ್ತಿಯ ಸಾಧನೆಯಲ್ಲಿ ಪ್ರಶಂಸಿನಿಯ ಮಹತ್ವದ ಕೆಲಸ ಮಾಡಿದ್ದಾರೆ . ಕಳೆದ ಎರಡೂವರೆ ದಶಕದಿಂದ ಹಸೆ ಚಿತ್ತಾರ ಗಳನ್ನುರಚಿಸಿ…
ಯೋಜನಾ ಸಂತ್ರಸ್ತರು ಹಾಗೂ ಭೂಹಕ್ಕಿನ ಸಮಸ್ಯೆ ನಿವಾರಣೆಗೆ ಟಾಸ್ಕ್ ಫೋರ್ಸ್ ಆಗಬೇಕು: ಸಚಿವ ಎಸ್ ಮಧು ಬಂಗಾರಪ್ಪ
ಯೋಜನಾ ಸಂತ್ರಸ್ತರು ಹಾಗೂ ಭೂಹಕ್ಕಿನ ಸಮಸ್ಯೆ ನಿವಾರಣೆಗೆ ಟಾಸ್ಕ್ಫೊರ್ಸ್ ಆಗಬೇಕು: ಸಚಿವ ಎಸ್ ಮಧು ಬಂಗಾರಪ್ಪ ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಜಲವಿದ್ಯುತ್ ಯೋಜನೆಗಳು ಹಾಗೂ ನೀರಾವರಿ ಯೋಜನೆಗಳ ಸಂತ್ರಸ್ತರ ಪುನರ್ವಸತಿ, ಭೂಮಿ ಸಮಸ್ಯೆ ಹಾಗೂ ಇತರೆ ಭೂ ಹಕ್ಕಿನ ಸಮಸ್ಯೆಗಳ ಪರಿಹಾರಕ್ಕಾಗಿ ಹಿರಿಯ ಐ.ಎ.ಎಸ್. ಅಧಿಕಾರಿ ನೇತೃತ್ವದಲ್ಲಿ ಟಾಸ್ಕ್ಫೋರ್ಸ್ ರಚನೆಯಾಗಬೇಕು ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್. ಮಧು ಬಂಗಾರಪ್ಪ ಅವರು ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಿದರು. ಶರಾವರಿ…
ಕರ್ನಾಟಕ ಸಂರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ;* *ಶಿವಮೊಗ್ಗಕ್ಕೆ ದಕ್ಕಿದ್ದು ಒಂದೇ ಒಂದು!*
*ಕರ್ನಾಟಕ ಸಂರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ;* *ಶಿವಮೊಗ್ಗಕ್ಕೆ ದಕ್ಕಿದ್ದು ಒಂದೇ ಒಂದು!* ಕರ್ನಾಟಕ ಸರ್ಕಾರ ೨೦೨೪ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳನ್ನು ಘೋಷಿಸಿದ್ದು, ಶಿವಮೊಗ್ಗ ಜಿಲ್ಲೆಗೆ ಒಂದೇ ಒಂದು ಪ್ರಶಸ್ತಿ ಲಭ್ಯವಾಗಿದೆ. ಹಸೆ ಚಿತ್ತಾರಕ್ಕೆ ಚಂದ್ರಶೇಖರ ಸಿರಿವಂತೆಯವರನ್ನು ಗುರುತಿಸಿ ಪ್ರಶಸ್ತಿ ಘೋಷಿಸಿದೆ.
ನವೆಂಬರ್ 1ರಿಂದ 3 ಬೈಂದೂರು ಉತ್ಸವ- 24ಸರ್ವಾಧ್ಯಕ್ಷೆಯಾಗಿ ಶಿವಮೊಗ್ಗದ ಡಾ.ಶುಭಾ ಮರವಂತೆ ಆಯ್ಕೆ
ನವೆಂಬರ್ 1ರಿಂದ 3 ಬೈಂದೂರು ಉತ್ಸವ- 24 ಸರ್ವಾಧ್ಯಕ್ಷೆಯಾಗಿ ಶಿವಮೊಗ್ಗದ ಡಾ.ಶುಭಾ ಮರವಂತೆ ಆಯ್ಕೆ ಶಿವಮೊಗ್ಗ : ನವೆಂಬರ್ ೧, ೨, ೩ ರಂದು ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆಯುವ ‘ಬೈಂದೂರು ಉತ್ಸವ 2024’ರ ಅಂಗವಾಗಿ ನಡೆಯುವ ಸಾಹಿತ್ಯ ಸಂಚಯ -ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶಿವಮೊಗ್ಗದ ಖ್ಯಾತ ವಾಗ್ಮಿ, ಲೇಖಕಿ, ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ, ಪ್ರಾಧ್ಯಾಪಕಿ ಡಾ. ಶುಭಾ ಮರವಂತೆ ಇವರನ್ನು ಆಯ್ಕೆ ಮಾಡಲಾಗಿದೆ. ಸಮೃದ್ಧ ಬೈಂದೂರು ಪರಿಕಲ್ಪನೆಯಡಿಯಲ್ಲಿ ರೂಪಿಸಲಾದ ಬೈಂದೂರು ಉತ್ಸವದಲ್ಲಿ ಕಲೆ…
ಕವಿಸಾಲು
*ಕವಿಸಾಲು* 1. ಹೃದಯಕ್ಕೆ ತೀರಾ ಹತ್ತಿರ ನಿನಗೆ ಯಾರಿದ್ದಾರೆಂದು ಕೇಳಿದರು; ನಾನು ನಿನ್ನ ತೋರಿಸಿದೆ… 2. ಕೇಳಿದ್ದೆ… ಪ್ರತಿ ಪ್ರಶ್ನೆಗೂ ಉತ್ತರ ನಿನ್ನ ಬಳಿ ಇದೆ ಎಂದು; ಈಗ ಅರ್ಥವಾಗುತ್ತಿದೆ… ನೀನೊಂದು ಉತ್ತರ ಪತ್ರಿಕೆ! 3. ನಿನ್ನ ದರ್ಶನವಾಗಿಬಿಟ್ಟರೆ ಈ ಕಣ್ಣುಗಳಿಗೆ ಅವತ್ತು ಏನೇ ಇದ್ದರೂ ಹಬ್ಬವೇ… 4. ನಿನ್ನ ಮರೆತು ಬಿಡಬಹುದು ಸುಲಭವಾಗಿ; ಆದರೆ, ನೀನು ನೀನು ಮಾತ್ರ ಆಗಿ ಉಳಿದಿಲ್ಲ ಈಗ! – *ಶಿ.ಜು.ಪಾಶ* 8050112067
ಸಾಗರದ ಕಾರ್ಗಲ್ ಬಳಿ ದೆವ್ವದ ಅಟ್ಯಾಕ್;ಸುಳ್ಳು ಸುದ್ದಿ ಹರಡಿದರೆ ಕಠಿಣ ಕ್ರಮ ಎಂದ ಪೊಲೀಸ್ಏನಿದು ದೆವ್ವದ ಕಥೆ?
ಸಾಗರದ ಕಾರ್ಗಲ್ ಬಳಿ ದೆವ್ವದ ಅಟ್ಯಾಕ್; ಸುಳ್ಳು ಸುದ್ದಿ ಹರಡಿದರೆ ಕಠಿಣ ಕ್ರಮ ಎಂದ ಪೊಲೀಸ್ ಏನಿದು ದೆವ್ವದ ಕಥೆ? ಕಳೆದ 27 ರಂದು ರಾತ್ರಿ ಸಾಗರ ತಾಲ್ಲೂಕಿನ ಕಾರ್ಗಲ್ ನ ಸಮೀಪ *ಕಂಚಿಕೈ ರಸ್ತೆಯಲ್ಲಿ ಎರಡು ಜನ ಬೈಕ್ ಸವಾರರಿಗೆ ದೆವ್ವ ಎದುರಾಗಿ* ಒಬ್ಬರಿಗೆ ತುಂಬಾ ಸೀರಿಯಸ್ ಆಗಿ ಮಣಿಪಾಲ್ ಆಸ್ಪತ್ರೆಯಲ್ಲಿ ಮತ್ತು ಇನ್ನೊಬ್ಬರು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ *ಅಡ್ಮಿಟ್ ಆಗಿರುತ್ತಾರೆಂದು ಪೋಟೋ ಮತ್ತು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಕೆಲವರು. *ಇದು ಸುಳ್ಳು ಸುದ್ದಿ*….
ಸೂಡಾ ಊರಗಡೂರು ನಿವೇಶನಕ್ಕೆ ಅರ್ಜಿ ಸಲ್ಲಿಸಲು*ಅವಧಿ ವಿಸ್ತರಣೆ*
ಸೂಡಾ ಊರಗಡೂರು ನಿವೇಶನಕ್ಕೆ ಅರ್ಜಿ ಸಲ್ಲಿಸಲು *ಅವಧಿ ವಿಸ್ತರಣೆ* ಶಿವಮೊಗ್ಗ -ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಶಿವಮೊಗ್ಗದ ಊರಗಡೂರು ವಸತಿ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಕುರಿತು ಆಗಸ್ಟ್-2024ರಲ್ಲಿ ಪ್ರಕಟಣೆ ನೀಡಲಾಗಿದ್ದು, ನಿವೇಶನ ಹಂಚಿಕೆಯ ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ನವೆಂಬರ್ 25ರ ವರೆಗೆ ವಿಸ್ತರಿಸಲಾಗಿದೆ ಎಂದು ಶಿ-ಭ ನಗರಾಭಿವೃದ್ಧಿ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.