*ಮಲೆನಾಡು ಎಕ್ಸ್ ಪ್ರೆಸ್ ಪತ್ರಿಕೆಯ ಕ್ಯಾಲೆಂಡರ್-೧ ಬಿಡುಗಡೆ ಮಾಡಿದ ಪತ್ರಿಕಾ ವಿತರಕರು*

*ಮಲೆನಾಡು ಎಕ್ಸ್ ಪ್ರೆಸ್ ಪತ್ರಿಕೆಯ ಕ್ಯಾಲೆಂಡರ್-೧ ಬಿಡುಗಡೆ ಮಾಡಿದ ಪತ್ರಿಕಾ ವಿತರಕರು* ಶಿ.ಜು.ಪಾಶ ಸಂಪಾದಕತ್ವದ ಮಲೆನಾಡು ಎಕ್ಸ್ ಪ್ರೆಸ್ ಪತ್ರಿಕೆಯ 2026ರ ಮೊದಲ ಹಂತದ ವಿಶೇಷ ಕ್ಯಾಲೆಂಡರ್ ನ್ನು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟವು ಜಿಲ್ಲಾಧ್ಯಕ್ಷ ಮಾಲತೇಶ್ ನೇತೃತ್ವದಲ್ಲಿ ಬಿಡುಗಡೆ ಮಾಡಿ ವಿತರಿಸಿದೆ. ಕ್ಯಾಲೆಂಡರ್ ಬಿಡುಗಡೆ ಸಂದರ್ಭದಲ್ಲಿ ಪತ್ರಿಕಾ ಏಜೆಂಟರಾದ ಉಮೇಶ್, ಸತೀಶ್, ಯೋಗೇಶ್, ಮೌಲಾನಾ, ಧನಂಜಯ್, ಪ್ರಾಣೇಶ್, ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

Read More

*ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ನಿರ್ದೇಶಕರಾಗಿ ಎಸ್. ಪಿ .ಶೇಷಾದ್ರಿ ಅವಿರೋಧ ಆಯ್ಕೆ*

*ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ನಿರ್ದೇಶಕರಾಗಿ ಎಸ್. ಪಿ .ಶೇಷಾದ್ರಿ ಅವಿರೋಧ ಆಯ್ಕೆ* *ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳ ನಿ., ಬೆಂಗಳೂರು ಇದರ ನಿರ್ದೆಶಕರಾಗಿ ಅವಿರೋಧವಾಗಿ ಎಸ್.ಪಿ.ಶೇಷಾದ್ರಿ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯ ಂ ನಿರ್ದೇಶಕರೂ ಹಾಗೂ ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿಯ ಮಾಜಿ ಛೇರ್ಮನ್ ಆದಂತಹ ಎಸ್.ಪಿ. ಶೇಷಾದ್ರಿ ಯವರನ್ನು ಶಿವಮೊಗ್ಗ ಹೌಸಿಂಗ್ ಕೋ ಅಪರೇಟಿವ್ ಸೊಸೈಟಿಯ ಅಧ್ಯಕ್ಷರಾದ  ಎಸ್.ಕೆ.ಮರಿಯಪ್ಪ ಸನ್ಮಾಸಿದರು. ಈ ಸಂದರ್ಭದಲ್ಲಿ ಸೊಸೈಟಿಯ ಖಜಾಂಚಿಯಾದ…

Read More

*ಆಯನೂರಿನ ವಿದ್ಯಾವೃಕ್ಷ ಶಾಲೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ*

*ಆಯನೂರಿನ ವಿದ್ಯಾವೃಕ್ಷ ಶಾಲೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ* ಆಯನೂರಿನ ವಿದ್ಯಾ ವೃಕ್ಷ ಶಾಲೆಯಲ್ಲಿ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಹೊಸ ವರ್ಷವನ್ನು ಸಂಭ್ರಮಿಸಲಾಯಿತು. ಸಮಾಜಸೇವಕರೂ ಕಾಂಗ್ರೆಸ್ ಮುಖಂಡರೂ ಆದಂತಹ ಚಿರಂಜೀವಿ ಬಾಬು ಮಕ್ಕಳಿಗೆ ಕೇಕ್ ಹಂಚುವ ಮೂಲಕ ಸಂಭ್ರಮಿಸಿದರು. ಈ ಸಂಧರ್ಭದಲ್ಲಿ ವಿನಯ್ ಹಾಗು ಪ್ರಮುಖರು ಹಾಗು ಸಂಸ್ಥೆಯ ಅಧ್ಯಕ್ಷರಾದ ಯೋಗೇಶ್ ಗೌಡ, ನಿರ್ದೇಶಕರಾದ ಸುನೀತಾ, ಮುಖ್ಯೋಪಾಧ್ಯಾಯರಾದ ಗೀತಾ ಹಾಗು ಶಾಲೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Read More

ದಾವಣಗೆರೆಯಲ್ಲಿ ಜ. 4 ರಂದು “ಕಲ್ಟ್” ಚಿತ್ರದ ಹಾಡು ಬಿಡುಗಡೆ

ದಾವಣಗೆರೆಯಲ್ಲಿ ಜ. 4 ರಂದು “ಕಲ್ಟ್” ಚಿತ್ರದ ಹಾಡು ಬಿಡುಗಡೆ ‘ಬನಾರಸ್’ ಖ್ಯಾತಿಯ ಝೈದ್ ಖಾನ್, ರಚಿತಾ ರಾಮ್ ಹಾಗೂ ಮಲೈಕಾ ವಸುಪಾಲ್ ನಟನೆಯ, ಅನಿಲ್ ಕುಮಾರ್ ಅವರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಕಲ್ಟ್ ಚಿತ್ರವು ಗಣರಾಜ್ಯೋತ್ಸವದ ಅಂಗವಾಗಿ ಜ.23 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಅದಕ್ಕೂ ಮುನ್ನ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಿಗೆ ತೆರಳಿ ಚಿತ್ರತಂಡ ಫ್ರಚಾರ ನಡೆಸುತ್ತಿದ್ದು, ‘ಕರ್ನಾಟಕ ಕಲ್ಟ್ ಪ್ರವಾಸ’ ಎಂಬ ಮನರಂಜನಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರಂಗವಾಗಿ ಜನವರಿ 4ರಂದು ದಾವಣಗೆರೆಯ…

Read More

*ಎಣ್ಣೆ ಏಟಿನಲ್ಲಿ ಕಿರಿಕ್ಕಿಗೊಳಗಾದ ಸಂಭ್ರಮಾಚರಣೆ!* *ಶಿವಮೊಗ್ಗದ ಅಡಿಕೆ ಮಂಡಿ ಕ್ಲಬ್ಬಲ್ಲಿ ಕುರ್ಚಿ ಹೊಡೆದಾಟ*

*ಎಣ್ಣೆ ಏಟಿನಲ್ಲಿ ಕಿರಿಕ್ಕಿಗೊಳಗಾದ ಸಂಭ್ರಮಾಚರಣೆ!* *ಶಿವಮೊಗ್ಗದ ಅಡಿಕೆ ಮಂಡಿ ಕ್ಲಬ್ಬಲ್ಲಿ ಕುರ್ಚಿ ಹೊಡೆದಾಟ* ಹೊಸ ವರ್ಷದ ಸಂಭ್ರಮಾಚರಣೆ ಎಣ್ಣೆ ಏಟಿಗೆ ಒಳಗಾಗಿ ಕಿರಿಕ್ ಪಾರ್ಟಿಯಾಗಿ ಬದಲಾದ ಘಟನೆ ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಅಡಿಕೆ ಮಂಡಿ ಮರ್ಚಂಟ್ ಕ್ಲಬ್ಬಿನಲ್ಲಿ ಡಿ.31 ರ ತಡರಾತ್ರಿ ನಡೆದಿದೆ. ಕುಡಿದ ಮತ್ತಿನಲ್ಲಿ ಚೇರ್ ಚೇರ್ ಗಳಲ್ಲೇ ಸದಸ್ಯರು ಹೊಡೆದಾಡಿಕೊಂಡು ಪೊಲೀಸರು ಮಧ್ಯ ಪ್ರವೇಶಿಸುವಂತಾಯ್ತು. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಬಂದ ತುಂಗಾನಗರ ಪೊಲೀಸರು, ಸ್ಥಳ ಖಾಲಿ ಮಾಡಿಸಿದ್ದಾರೆ. ಅಡಿಷನಲ್ ಎಸ್ ಪಿ ಕಾರ್ಯಪ್ಪ…

Read More

*ಡಿಸಿ ಗುರುದತ್ತ ಹೆಗಡೆಯವರಿಗೂ ವರ್ಗಾವಣೆ ಮಾಡಿದ ಸರ್ಕಾರ* *ಶಿವಮೊಗ್ಗ ನೂತನ ಜಿಲ್ಲಾಧಿಕಾರಿಯಾಗಿ ಪ್ರಭುಲಿಂಗ ಕವಲೀಕಟ್ಟಿ*

*ಡಿಸಿ ಗುರುದತ್ತ ಹೆಗಡೆಯವರಿಗೂ ವರ್ಗಾವಣೆ ಮಾಡಿದ ಸರ್ಕಾರ* *ಶಿವಮೊಗ್ಗ ನೂತನ ಜಿಲ್ಲಾಧಿಕಾರಿಯಾಗಿ ಪ್ರಭುಲಿಂಗ ಕವಲೀಕಟ್ಟಿ* ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯವರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರನ್ನಾಗಿ ಗುರುದತ್ತ ಹೆಗಡೆಯವರನ್ನು ನೇಮಿಸಿ ಆದೇಶಿಸಲಾಗಿದೆ. ಪ್ರಭುಲಿಂಗ ಕವಲೀಕಟ್ಟಿಯವರನ್ನು ನೂತನ ಶಿವಮೊಗ್ಗ ಜಿಲ್ಲಾಧಿಕಾರಿಯನ್ನಾಗಿ ವರ್ಗಾಯಿಸಲಾಗಿದೆ. ಬೆಂಗಳೂರಿನ ಮುನ್ಸಿಪಲ್ ಅಡ್ಮಿನಿಸ್ಟ್ರೇಷನ್ ಡೈರೆಕ್ಟರ್ ಆಗಿ ಕವಲೀಕಟ್ಟಿ ಕೆಲಸ ನಿರ್ವಹಿಸುತ್ತಿದ್ದರು.

Read More

*ಶಿವಮೊಗ್ಗದ ಎಸ್ ಪಿ ಮಿಥುನ್ ಕುಮಾರ್ ಸೇರಿದಂತೆ ರಾಜ್ಯದಾದ್ಯಂತ ಎಸ್ ಪಿ ಗಳ ವರ್ಗಾವಣೆಯಾಗಿದ್ದು, ಯಾರು ಯಾರು ಎಸ್ ಪಿ ಗಳು ಎಲ್ಲೆಲ್ಲಿಗೆ ವರ್ಗಾವಣೆಯಾಗಿದ್ದಾರೆ?* *ಇಲ್ಲಿದೆ ಸಂಪೂರ್ಣ ಮಾಹಿತಿ*

*ಶಿವಮೊಗ್ಗದ ಎಸ್ ಪಿ ಮಿಥುನ್ ಕುಮಾರ್ ಸೇರಿದಂತೆ ರಾಜ್ಯದಾದ್ಯಂತ ಎಸ್ ಪಿ ಗಳ ವರ್ಗಾವಣೆಯಾಗಿದ್ದು, ಯಾರು ಯಾರು ಎಸ್ ಪಿ ಗಳು ಎಲ್ಲೆಲ್ಲಿಗೆ ವರ್ಗಾವಣೆಯಾಗಿದ್ದಾರೆ?* *ಇಲ್ಲಿದೆ ಸಂಪೂರ್ಣ ಮಾಹಿತಿ*

Read More

*ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ವರ್ಗಾವಣೆ* *ಶಿವಮೊಗ್ಗದ ನೂತನ ಎಸ್ ಪಿ ಆಗಿ ಬಿ.ನಿಖಿಲ್*

*ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ವರ್ಗಾವಣೆ* *ಶಿವಮೊಗ್ಗದ ನೂತನ ಎಸ್ ಪಿ ಆಗಿ ಬಿ.ನಿಖಿಲ್* ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ(SP) ಮಿಥುನ್ ಕುಮಾರ್ ರವರ ವರ್ಗಾವಣೆಯಾಗಿದ್ದು, ಬೆಂಗಳೂರು ನಗರ ನಾರ್ಥ್- ಈಸ್ಟ್ ಡಿವಿಝನ್ನಿನ ಎಸ್ ಪಿ ಯಾಗಿ ಸರ್ಕಾರ ವರ್ಗಾಯಿಸಿ ಆದೇಶಿಸಿದೆ. ಕಳೆದ ಎರಡು ವರ್ಷಗಳಿಗೂ ಹೆಚ್ಚು ಕಾಲದಿಂದ ಶಿವಮೊಗ್ಗದ ಎಸ್ ಪಿ ಆಗಿ ಮಿಥುನ್ ಕುಮಾರ್ ಕಾರ್ಯನಿರ್ವಹಿಸುತ್ತಿದ್ದರು. ಕೋಲಾರದ ಹಾಲಿ ಎಸ್ ಪಿ ಆಗಿರುವ ನಿಖಿಲ್ ಕುಮಾರ್ ಶಿವಮೊಗ್ಗದ ಎಸ್ ಪಿ ಆಗಿ ವರ್ಗಾವಣೆಯಾಗಿದ್ದಾರೆ.

Read More

ಅಮೃತ-2 ಯೋಜನೆಯಡಿ ಪಾಲಿಕೆ ವ್ಯಾಪ್ತಿಯ ನಾಲ್ಕು ಕೆರೆಗಳಿಗೆ ಕಾಯಕಲ್ಪ; ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

ಅಮೃತ-2 ಯೋಜನೆಯಡಿ ಪಾಲಿಕೆ ವ್ಯಾಪ್ತಿಯ ನಾಲ್ಕು ಕೆರೆಗಳಿಗೆ ಕಾಯಕಲ್ಪ; ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಶಿವಮೊಗ್ಗ ಮಹಾನಗರ ಪಾಲಿಕೆಯ ವ್ಯಾಪ್ತಿಗೊಳಪಡುವ ಪುರಲೆ, ನವಿಲೆ, ಗೋಪಶೆಟ್ಟಿಕೊಪ್ಪ ಮತ್ತು ತ್ಯಾವರಚಟ್ನಳ್ಳಿಯ ಕೆರೆಗಳನ್ನು ಕೇಂದ್ರ ಪುರಸ್ಕೃತ ಅಮೃತ-2.0 ಯೋಜನೆಯಡಿ ಜಲಮೂಲಗಳ ಪುನಶ್ಚೇತನ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಆರಂಭಿಸಿ ಸಕಾಲದಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ನಗರ ಯೋಜನಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಶಿವಮೊಗ್ಗ ಮಹಾನಗರಪಾಲಿಕೆ ಮತ್ತು ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿನ ಜಲಮೂಲಗಳ ಅಭಿವೃದ್ಧಿ ಕಾಮಗಾರಿಗಳ ಕುರಿತು…

Read More

ಶಾಲಾ ಪಂಚಾಂಗ ಲೋಕಾರ್ಪಣೆ ಮಾಡಿದ ಸಚಿವ ಮಧು ಬಂಗಾರಪ್ಪ

ಶಾಲಾ ಪಂಚಾಂಗ ಲೋಕಾರ್ಪಣೆ ಮಾಡಿದ ಸಚಿವ ಮಧು ಬಂಗಾರಪ್ಪ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ 2026 ನೂತನ ವರ್ಷದ “ಶಾಲಾ ಪಂಚಾಂಗ”ವನ್ನು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಎಸ್, ಮಧು ಬಂಗಾರಪ್ಪನವರು ಬಿಡುಗಡೆಗೊಳಿಸಿ, ರಾಜ್ಯದ ಸಮಸ್ತ ಶಿಕ್ಷಕರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳನ್ನು ಕೋರಿದರು. ಈ ವೇಳೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಧ್ಯಕ್ಷರಾದ ಶ್ರೀ ಚಂದ್ರಶೇಖರ್ ನುಗ್ಗಲಿ, ಪ್ರಧಾನ ಕಾರ್ಯದರ್ಶಿ ಶ್ರೀ ಚೇತನ್ ಎಚ್.ಎಸ್ ಹಾಜರಿದ್ದರು.

Read More