*ಶಿವಮೊಗ್ಗದಲ್ಲಿ ಕಬ್ಬಿಣದ ಪೆಟ್ಟಿಗೆ ಅಂಗಡಿ ಮಾಫಿಯಾ* *ದಿನನಿತ್ಯದ ಅಕ್ರಮ ಬಾಡಿಗೆಯೇ ಲಕ್ಷ ಲಕ್ಷ ವಸೂಲು* *ಸರ್ಕಾರಿ ಜಾಗದಲ್ಲಿ ಇದೇನಿದು ಖಾಸಗಿ ಸಾಮ್ರಾಜ್ಯ?!*
*ಶಿವಮೊಗ್ಗದಲ್ಲಿ ಕಬ್ಬಿಣದ ಪೆಟ್ಟಿಗೆ ಅಂಗಡಿ ಮಾಫಿಯಾ* *ದಿನನಿತ್ಯದ ಅಕ್ರಮ ಬಾಡಿಗೆಯೇ ಲಕ್ಷ ಲಕ್ಷ ವಸೂಲು* *ಸರ್ಕಾರಿ ಜಾಗದಲ್ಲಿ ಇದೇನಿದು ಖಾಸಗಿ ಸಾಮ್ರಾಜ್ಯ?!* ಬೀದಿ ಬದಿಯಲ್ಲಿ ಕಬ್ಬಿಣದ ಪೆಟ್ಟಿಗೆ ಅಂಗಡಿಗಳ ಮಾಫಿಯಾ ಶಿವಮೊಗ್ಗದಲ್ಲಿ ಬೃಹತ್ತಾಗಿ ಬೆಳೆಯುತ್ತಿದ್ದು, ಅಂಥ ಮಾಫಿಯಾದ ವಿರುದ್ಧ ಶಿವಮೊಗ್ಗದ ಮಹಾನಗರ ಪಾಲಿಕೆಯು ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ತೊಡೆತಟ್ಟಿ ಪೆಟ್ಟು ನೀಡಿದ್ದಾರೆ. ಶಿವಮೊಗ್ಗ ನಗರದ ಸರ್ಕಾರಿ, ಪಾಲಿಕೆಯ ಆಯಕಟ್ಟಿನ ಜಾಗಗಳನ್ನು ಹುಡುಕಿ ಅಲ್ಲಿ ಕಬ್ಬಿಣದ ಪೆಟ್ಟಿಗೆಗಳನ್ನು ರಾತ್ರೋರಾತ್ರಿ ಸ್ಥಾಪಿಸಿಬಿಡುವ ಗುಪ್ತ ವ್ಯವಹಾರಿಗಳು ಅಲ್ಲಿ ಬಾಡಿಗೆದಾರರನ್ನು ಹುಡುಕಿ ತಂದು…


