*ಕವಿಸಾಲು*
(13/06/2026)
1.
ನಿನ್ನನ್ನು
ದೂರವಿಡುವ ಪ್ರಯತ್ನದಲ್ಲಿರುವವರಿಗೆ
ನೀನೇ ಮುಂದೆ ನಿಂತು
ಸಹಕರಿಸು
ಹೃದಯವೇ…
2.
ನನಗೆ ಗೊತ್ತಿತ್ತು
ನಿನ್ನ ಪ್ರೀತಿಯಲ್ಲಿ
ವಿಷವಿತ್ತೆಂದು…
ಆದರೂ
ನೀ ಕುಡಿಸಿದ ರೀತಿಯಲ್ಲಿ
ತುಂಬಾ ಪ್ರೀತಿ ಇತ್ತು!
3.
ಖಾಲಿ ಜೇಬಿಟ್ಟುಕೊಂಡು
ಹೊರಡು ಬಜಾರಿಗೆ;
ಯೋಗ್ಯತೆ ಏನೆಂಬುದು
ಅರ್ಥವಾಗಿಬಿಡುವುದು!
– *ಶಿ.ಜು.ಪಾಶ*
8050112067